ವೀಕೆಂಡ್ ಹಿನ್ನಲೆ ನಂಧಿಗಿರಿಧಾಮಕ್ಕೆ ಹರಿದು ಬಂದ ಜನಸಾಗರ
1 min readವೀಕೆಂಡ್ ಹಿನ್ನಲೆ ನಂಧಿಗಿರಿಧಾಮಕ್ಕೆ ಹರಿದು ಬಂದ ಜನಸಾಗರ
ಸೂರ್ಯೋದಯ ವೀಕ್ಷಿಸಲು ಸೆಲ್ಫಿ ಗ್ಯಾಲರಿಗೆ ಮುಗಿಬಿದ್ದ ಪ್ರವಾಸಿಗರು
ನಂದಿ ಗಿರಿಧಾಮದ ಮಂಜಿನಲ್ಲಿ ಮನಸೋತ ಪ್ರವಾಸಿಗರು
ವೀಕೆಂಡ್ ಬಂತು ಅಂದ್ರೆ ಪ್ರವಾಸಿಗರು ಒನ್ ಡೇ ಟ್ರಿಪ್ ಗೆ ಪ್ಲಾನ್ ಮಾಡ್ತಾರೆ. ಈಗ ಉತ್ತರದಲ್ಲಿ ಮಳೆಯ ಅಬ್ಬರದ ಹಿನ್ನಲೆ ಬೆಂಗಳೂರಿಗೆ ಸಮೀಪವೇ ಇರುವ ಪ್ರಮುಖ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡ್ತಿದ್ದಾರೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ನಂಧಿಗಿರಿಧಾಮಕ್ಕೆ ಇಂದು ಭಾನುವಾರವಾದ ಕಾರಣ ಪ್ರವಾಸಿಗರ ದಂಡೇ ಹರಿದು ಬಂದಿದೆ. ಅದರಲ್ಲೂ ಮುಂಜಾನೆಯ ಸೂರ್ಯೋದ ನೋಡಲು ಪ್ರವಾಸಿಗರ ನೂಕುನುಗ್ಗಲು ಏರ್ಪಟ್ಟಿದೆ. ಇನ್ನು ಮಂಜಿನ ಪರದೆಯಲ್ಲಿ ಯುವ ಜೋಡಿಗಳ ವಿಹಾರ ಹೇಗಿತ್ತು ಇನ್ನೋದನ್ನು ನೋಡಬೇಕಾ.
ಹೌದು, ಹೀಗೆ ಬೆಳ್ಳಂ ಬೆಳಗ್ಗೆ ಸಾಲುಗಟ್ಟಿ ನಿಂತಿರೋ ವಾಹನ ಸವಾರರು, ಮಂಜಿನ ಪರದೆಗೆ ಮೈಯೊಡ್ಡಿ ಕುಣಿಯುತ್ತಿರುವ ಯುವಕ, ಯುವತಿಯರು, ಎಲ್ಲಿ ನೋಡಿದರೂ ಸೆಲ್ಫಿ ಕಿಕ್ಕಿಸಿಕೊಳ್ಳುತ್ತಿರೋ ಜೋಡಿಗಳು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ನಂಧಿಗಿರಿಧಾಮದಲ್ಲಿ. ಇಂದು ವೀಕೆಂಡ್ ಹಿನ್ನಲೆ ಬೆಂಗಳೂರಿಗೆ ಕೇವಲ 50 ಕಿಮೀ ದೂರದಲ್ಲಿರುವ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿದೆ.
ಮುoಜಾನೆ 5 ಗಂಟೆಗೆ ಆಗಮಿಸಿದ ಪ್ರವಾಸಿಗರಿಗೆ, ಬೆಳಗ್ಗೆ 6 ಗಂಟೆಗೆ ನಂಧಿಗಿರಿಧಾಮಕ್ಕೆ ಪ್ರವೇಶ ಕಲ್ಪಿಸಲಾಯಿತು. ಇಂದು ಮೋಡ ಕವಿದ ವಾತಾವರಣ ಇದ್ದ ಕಾರಣ ಸೂರ್ಯೋದಯವನ್ನ ವೀಕ್ಷಿಸುವ ಆಸೆಯಿಂದ ಬಂದಿದ್ದ ಪ್ರವಾಸಿಗರು ಕೊಂಚ ನಿರಾಸೆಯಿಂದ ನಂಧಿಗಿರಿಧಾಮದ ಸೌಂದರ್ಯವನ್ನ ಸವಿದರು. ಚುಮು ಚುಮು ಮಂಜಿಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಎಲ್ಲಿ ನೋಡಿದರೂ ಸೆಲ್ಫಿಗೆ ಮುಗಿ ಬಿದ್ದಿದ್ದು ಸಾಮಾನ್ಯವಾಗಿತ್ತು.
ಬಡವರ ಪಾಲಿನ ಊಟಿ ಎಂದೇ ಪ್ರಖ್ಯಾತಿ ಪಡೆದಿರುವ ನಂಧಿಗಿರಿಧಾಮಕ್ಕೆ ಸಾಮಾನ್ಯವಾಗಿ ಬೆಳಗಿನ ಜಾವವೇ ಪ್ರವಾಸಿಗರು ಆಗಮಿಸೋದು ರೂಡಿ. ಬೆಳಗಿನ ಸೂರ್ಯೋದಯ ವೀಕ್ಷಣೆ ಮಾಡಿ ನಂತರ ಚಳಿಗೆ ಒಂದು ಕಾಫಿ ಕುಡಿದು, ನಂತರ ಬೆಂಗಳೂರಿನತ್ತ ಮುಖಮಾಡುತ್ತಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಸಿಗರ ಕೈ ಬೀಸಿ ಕರೆಯುತ್ತಿದ್ದ ಜಿಲ್ಲೆಗಳಲ್ಲಿ ವರುಣನ ಅರ್ಭಟ ಜೋರಾಗಿದೆ. ಕೆಲ ಜಿಲ್ಲೆಗಳಲ್ಲಿ ಪ್ರವಾಸಿಗರಿಗೆ ನಿಷೇಧವನ್ನೂ ಹೇರಲಾಗಿದೆ. ಅಲ್ಲದೆ ಪ್ರವಾಸಿಗರೂ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ನಂದಿಗಿರಿಧಾಮದ ಕಡೆಗೆ ಮುಖಮಾಡಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಬಂದಿದ್ದ ಪ್ರವಾಸಿಗರು ಈ ಬಾರಿ ಮತ್ತೆ ಬಂದು ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಬಂದಿದ್ದ ಪ್ರವಾಸಿಗರು, ಟಿಪ್ಪು ಡ್ರಾಪ್, ನಂದಿ, ಗಿರಿಧಾಮದಲ್ಲಿರುವ ಭೋಗನಂದೀಶ್ವರ ದೇವರ ದರ್ಶನ ಪಡೆದರು. ಗಿರಿಧಾಮದ ಪ್ರಮುಖ ಆಕರ್ಷಣೀಯ ಸ್ಥಳವಾದ ಸೆಲ್ಫಿ ಗ್ಯಾಲರಿಯಲ್ಲಿ ಪೋಟೋ ಕ್ಲಿಕ್ಕಿಸಿಕೊಂಡು ಸಂಸoತಸ ಪಟ್ಟರು.
ಒಟ್ಟಾರೆ ವಾರವಿಡೀ ಕೆಲಸದ ಒತ್ತಡದಲ್ಲಿದ್ದ ಜನರು ನಂಧಿಗಿರಿಧಾಮಕ್ಕೆ ಬಂದು ರಿಲ್ಯಾಕ್ಸ್ ಮೂಡ್ ನತ್ತ ಮುಖ ಮಾಡಿದ್ದಾರೆ. ಒಂದು ದಿನದ ಟ್ರಿಪ್ ಪ್ಲಾನ್ ನಲ್ಲಿದ್ದವರು ಕುಟುಂಬ ಸಮೇತ ಬಂದಿದ್ದು ವಿಶೇಷವಾಗಿತ್ತು. ಕಡಿಮೆ ಖರ್ಚಿನ್ ಪ್ಲಾನ್ ಇದ್ದವರು ನಂಧಿಗಿರಿಧಾಮಕ್ಕೆ ಬಂದು ಪ್ರಕೃತಿ ಸೌಂದರ್ಯ ಸವಿಯಬಹುದು ಎನ್ನುತ್ತಾರೆ ಪ್ರವಾಸಿಗರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday