ಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್

ಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ

ಬಾಗೇಪಲ್ಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಸಂಭ್ರಮ

December 26, 2024

Ctv News Kannada

Chikkaballapura

ಆರೋಗ್ಯಕ್ಕೂ ಸೈ, ಲಾಭಾಕ್ಕೂ ಜೈ ಎನ್ನುತ್ತಿದೆ ನೇರಳೆ

1 min read

ಹಲವರಿಗೆ ಉದ್ಯೋಗಾವಕಾಶ ಕಲ್ಪಿಸಿದ ನೇರಳೆ

ಆರೋಗ್ಯಕ್ಕೂ ಸೈ, ಲಾಭಾಕ್ಕೂ ಜೈ ಎನ್ನುತ್ತಿದೆ ನೇರಳೆ

ಬಯಲು ಸೀಮೆಗೆ ಹೇಳಿ ಮಾಡಿಸಿದಂತಿರುವ ನೇರಳೆ

ಬಾಯಿರುಚಿಗೆ ಮತ್ರಾವಲ್ಲ, ಆರೋಗ್ಯಕ್ಕೂ ಸಹಕಾರಿ ಹಣ್ಣು

ಮಧುಮೇಹಿಗಳ ವರದಾನವಾಗಿರುವ ಜಂಬುನೇರಳೆ

ಬಯಲು ಸೀಮೆ ಕುಡಿಯಲು ಮಾತ್ರವಲ್ಲ, ತೊಳೆಯಲೂ ನೀರಿಲ್ಲದ ಪ್ರದೇಶ ಎಂಬ ಕುಖಾಯತಿಗೆ ಪಾತ್ರವಾದ ನೆಲ. ಇದಕ್ಕೆ ಜೊತೆಯಾಗಿ ಎಚ್‌ಎನ್ ವ್ಯಾಲಿ ಎಂಬ ವಿಷಕಾರಿ ನೀರು ಬಂತಲ್ಲ, ಇದರಿಂದ ಬೆಂಗಳೂರಿಗರೂ ಚಿಕ್ಕಬಳ್ಳಾಪುರದ ತರಕಾರಿ ಎಂದರೆ ಬೆಚ್ಚಿ ಬೀಳುತ್ತಿದ್ದಾರೆ. ಹಣ್ಣು, ಹೂವು, ತರಕಾರಿ, ಕೋಳಿ, ಕುರಿ ಹೀಗೆ ಇಲ್ಲಿ ಎಲ್ಲವೂ ಲಭ್ಯ. ದೇಶಕ್ಕೆ ಇಷ್ಟು ನೀಡುತ್ತಿರುವ ಈ ಜಿಲ್ಲೆಗೆ ನೀರು ನೀಡಲು ಮಾತ್ರ ಸರ್ಕಾರಗಳಿಗೆ ಸಾಧ್ಯವಾಗದಿರೋದು ವಿಪರ್ಯಾಸ.

ಹೌದು ಚಿಕ್ಕಬಳ್ಳಾಪುರ ಎಂದರೆ ಆಪಲ್, ಚಿಕ್ಕಬಳ್ಳಾಪುರ ಎಂದರೆ ಡ್ರಾಗನ್ ಫ್ರೂಟ್, ಚಿಕ್ಕಬಲ್ಳಾಪುರ ಎಂದರೆ ಬಗೆ ಬಗೆಯ ಬಣ್ಮದ ಹೂವು, ಚಿಕ್ಕಬಳ್ಳಾಪುರ ಎಂದರೆ ತರಕಾರಿ, ಚಿಕ್ಕಬಳ್ಳಾಪುರ ಎಂದರೆ ದ್ರಾಕ್ಷಿ. ಅಬ್ಬಬ್ಬಾ ಹೀಗೆ ಹೇಳುತ್ತಾ ಹೋದರೆ ಗಂಟೆಗಟ್ಟಲೇ ಹೇಳುವಷ್ಟು ಸಾಧನೆ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮಾಡಿದ್ದಾರೆ. ಆದರೆ ಅಂತಹ ರೈತನಿಗೆ ಕುಡಿಯಲು ಮತ್ತು ಕೃಷಿಗೆ ನೀರು ನೀಡುವಲ್ಲಿ ಮಾತ್ರ ಆಸಕ್ತಿ ತೋರೇ ಇಲ್ಲ. ಆದರೂ ಹಠಕ್ಕೆ ಬಿದ್ದವರಂತೆ ಕೃಷಿ ಮಾಡುತ್ತಿರುವ ರೈತರು ಸರ್ಕಾರಗಳೇ ನಾಚುವಂತೆ ಬೆಳೆ ತೆಗೆಯುತ್ತಿರೋದು ಮಾತ್ರ ವಿಶೇಷ.

ಜಿಲ್ಲೆಯಲ್ಲಿ ಏನಿಲ್ಲಾ ಹೇಳಿ, ಇಲ್ಲಿ ಡ್ರಾಗನ್ ಫ್ರ‍್ರೂಟ್, ಆಪಲ್, ದ್ರಾಕ್ಷಿ, ಬಗೆ ಬಗೆಯ ಹೂವು ಹೀಗೆ ತನ್ನದೇ ಆದ ಛಾಪು ಮೂಡಿಸಿದ್ದ ಚಿಕ್ಕಬಳ್ಳಾಪುರ ರೈತ ಇದೀಗ ನೇರಳೆಯತ್ತ ಆಸಕ್ತಿ ತೋರಿದ್ದಾನೆ. ಈಗ ನೇರಳೆಯಲ್ಲಿಯೂ ಬಗೆ ಬಗೆಯ ತಳಿಗಳು ಬಂದಿದ್ದು, ಅವುಗಳ ಬಣ್ಣ, ರುಚಿಯಿಂದಲೇ ಆಕರ್ಷಣೀಯವಾಗಿವೆ. ಮೊದಲೇ ಬಯಲುಸೀಮೆ ಪ್ರದೇಶ, ಇಲ್ಲಿ ಸುರಿಯೋ ಮಳೆಯ ಪ್ರಮಾಣವೂ ಕಡಿಮೆ. ಇನ್ನು ನದಿ ನಾಲೆಗಳಿಲ್ಲ, ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಆದರೂ ಇವೆಲ್ಲ ಬೆಳೆಯುತ್ತಾರೆಂದರೆ ಈ ರೈತರು ಇಸ್ರೇಲ್ ರೈತರನ್ನೇ ಮೀರಿಸುತ್ತಾರೆ ಎಂದರೆ ತಪ್ಪಾಗಲಾರದು.

ಈ ನೇರಳೆ ಹಣ್ಣು ಅಂದರೆ ಆಂಗ್ಲದಲ್ಲಿ ಜಾಮೂನ್ ಫ್ರ‍್ರೂಟ್ ಅಂತಾ ಕರೀತಾರಲ್ಲ, ಈ ಹಣ್ಣು ಕೇವಲ ನೋಡೋದಕ್ಕೆ ಮಾತ್ರ ಆಕರ್ಷಕವಾಗಿಲ್ಲ. ಬದಲಿಗೆ ತಿನ್ನಲು ರುಚಿಯಾಗಿ ಮತ್ತು ಆರೋಗ್ಯಕ್ಕೆ ಸಹಕಾರಿಯಾಗಿಯೂ ಇದೆ ಎಂಬುದು ವಿಶೇಷ. ನಿಜ ಕಣ್ರೀ ಇದು ಕೇವಲ ಬಾಯಿರುಚಿಗೆ ತಿನ್ನುವ ಹಣ್ಮಾಗಿ ಉಳಿದಿಲ್ಲ. ದೇಹದ ಅನೇಕ ಕಾಯಿಲೆಗಳನ್ನು ನಿಯಂತ್ರಿಸುವ ಮತ್ತು ಗುಣಪಡಿಸುವ ಶಕ್ತಿ ಈ ನೇರಳೆ ಹಣ್ಣಿನಲ್ಲಿದೆ. ನೇರಳೆಯಲ್ಲಿ ನಾಯಿ ನೇರಳೆ ಮತ್ತು ಜಂಬು ನೇರಳೆ ಎಂಬ ಎರಡು ವಿಧವಿದೆ. ಈಗಾಗಲೇ ಜಂಬುನೇರಳೆಯ ದೇಶೀ ತಳಿ ಮಾಯವಾಗಿ ವಿದೇಶ ಮೂಲಕ ಕಸಿ ಗಿಡಗಳೇ ಎಲ್ಲೆಲ್ಲೂ ಆವರಿಸಿವೆ.

ಇಂತಹ ಸಮಯದಲ್ಲಿ ಹಣ್ಣಿನ ಇಳುವರಿಯೂ ಹೆಚ್ಚಾಗಿದ್ದು, ಬೇಡಿಕೆಯೂ ಅಧಿಕವಾಗಿಯೇ ಇದೆ. ಹಾಗಾಗಿ ಜಂಬುನೇರಳೆ ಹಣ್ಣಿನ ಉಪಯೋಗಗಳೇನು ಅನ್ನೇದನ್ನ ನೋಡೋದಾದ್ರೆ, ಅನೇಕ ಜನರು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವುದು ಇಥ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜಂಕ್‌ಫುಡ್ ತಿನುವುದು ಹೆಚ್ಚಾದ ಕಾರಣದಿಂದಲೋ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದಲೋ ಮಾನವನ ಆರೋಗ್ಯ ಮಾತ್ರ ಹದಗೆಡುತ್ತಲೇ ಇದೆ. ಈ ಜೀರ್ಣಕಾರಿ ಸಂಬoಧಿ ಕಾಯಿಲೆಗೆ ನೇರಳೆ ಹಣ್ಣು ಉತ್ತಮ ಪರಿಹಾರವಾಗಿದೆ. ಈ ಹಣ್ಣಿನಲ್ಲಿ ಆಹಾರದ ಫೈಬರ್ ಇದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮಲಬದ್ಧತೆ ತಡೆಯಲು ಈ ಜಂಬುನೇರಳೆ ಸಹಾಯ ಮಾಡುತ್ತದೆ. ಜಾಮೂನ್‌ನಲ್ಲಿರುವ ಟ್ಯಾನಿನ್‌ಗಳು ಮತ್ತು ಫ್ಲೇವನಾಯಡ್‌ಗಳು ಉರಿಯೂತ ಕಡಿಮೆ ಮಾಡುವ ಮೂಲಕ ಆರೋಗ್ಯಕರ ಕರುಳು ಇರಲು ಸಹಾಯ ಮಾಡುತ್ತದೆ.
ಮಧುಮೇಹ ಇರುವವರಿಗೆ ನೇರಳೆ ಹಣ್ಣು ವರದಾನವಾಗಿದೆ ಈ ಹಣ್ಣಿನಲ್ಲಿ ಜಂಬೋಲಿನ್ ಮತ್ತು ಜಾಂಬೋಸಿನ್ ನಂತಹ ಸಂಯುಕ್ತಗಳಿವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಸಂಯುಕ್ತಗಳು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುವುದನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಮಧುಮೇಹ ನಿರ್ವಹಣೆಗೆ ನೇರಳೆ ಹಣ್ಣು ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ.

ನೇರಳೆ ಹಣ್ಣು ಪೌಷ್ಟಿಕಾಂಶಗಳಿoದ ಸಮೃದ್ಧವಾಗಿದ್ದು, ಇದು ತೂಕ ನಷ್ಟಕ್ಕೆ ಪ್ರಯತ್ನಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುತ್ತದೆ. ಇದು ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ನೇರಳೆ ಹಣ್ಣು ಸೇವನೆ ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಪೊಟ್ಯಾಷಿಯಮ್ ಹೊಂದಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೆಟ್ಟ ಕೊಲೆಸ್ಟಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಎಂದರೆ ತಪ್ಪಾಗಲಾರದು.

ಎಲ್ಲರ ಅಚ್ಚುಮೆಚ್ಚಿನ ನೇರಳೆ ಹಣ್ಣು ಪೋಷಕಾಂಶಗಳ ಆಗರವಾಗಿದೆ. ಇದು ಮಾನವನ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ಇದರಲ್ಲಿ ಮಧುಮೇಹ, ಕ್ಯಾನರ್ರ್, ಹೃದಯಾಘಾತ, ಸಂಧಿವಾತ, ಹೊಟ್ಟೆಯ ಕಾಯಿಲೆಗಳಾಗಿರುವ ಭೇದಿ ಇತ್ಯಾದಿಗಳನ್ನು ನಿವಾರಿಸುವ ಗುಣಗಳಿವೆ. ಈ ಹಣ್ಣು ಕಾಮಾಸಕ್ತಿ ಕೂಡ ಹೆಚ್ಚಿಸುತ್ತದೆ.ಇದು ರಕ್ತವನ್ನು ಶುದ್ಧೀಕರಿಸುತ್ತದೆ, ರಕ್ತಹೀನತೆಯನ್ನು ದೂರ ಮಾಡುತ್ತದೆ. ರಕ್ತದೊತ್ತಡ ತಗ್ಗಿಸಿ ಹೊಟ್ಟೆಗೆ ಸಂಬoಧಿಸಿದ ಸಮಸ್ಯೆಗಳನ್ನೂ ದೂರ ಮಾಡುತ್ತದೆ.

ಇದರ ಜ್ಯೂಸ್ ತಯಾರಿಸುವ ವೇಳೆ ಸಕ್ಕರೆ, ಚಿಟಿಕೆ ಉಪ್ಪು, ನಿಂಬೆರಸ ಹಾಗೂ ಚಿಟಿಕೆ ಚಾಟ್ ಮಸಾಲೆ ಬೆರೆಸಿ. ಬೀಜ ತೆಗೆದ ನೇರಳೆ ಹಣ್ಣನ್ನು ರುಬ್ಬಿ. ಬಳಿಕ ಉಳಿದ ಸಾಮಾಗ್ರಿಗಳನ್ನು ಸೇರಿಸಿ. ಆರೋಗ್ಯಕರ ಜ್ಯೂಸ್‌ನ್ನು ವಾರದಲ್ಲಿ ಮೂರು ಬಾರಿ ಸೇವಿಸಿದರೆ ಯಾವುದೇ ಕಾಯಿಲೆ ಹತ್ತಿರಕ್ಕೂ ಸುಳಿಯೋದಿಲ್ಲ ಎನ್ನುತ್ತವೆ ವೈದ್ಯಕೀಯ ವಿನಗಳು. ಮಧುಮೇಹಿಗಳು ಸಕ್ಕರೆ ಬೆರೆಸದೆ ಕುಡಿಯಬೇಕಾಗಿದೆ. ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸುತ್ತದೆ. ಪೈಲ್ಸ್ ಸಮಸ್ಯೆ ಇರುವವರು ಇದನ್ನು ಆಗಾಗ ಕುಡಿಯುತ್ತಿರುವುದು ಒಳ್ಳೆಯದು. ಕಣ್ಣಿನ ಆರೋಗ್ಯವನ್ನೂ ಕಾಪಾಡುವ ಈ ಪಾನೀಯವನ್ನು ಮಕ್ಕಳಿಗೂ ಕುಡಿಸಬಹುದು.

ನೋಡಿದ್ರಲ್ಲಾ, ಇಷ್ಟೆಲ್ಲಾ ಪ್ರಯೋಜಕಾರಿಯಾಗಿರೋ ಈ ಜಂಬು ನೇರಳೆ ಹಣ್ಣು ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉಪ ಬೆಳೆಯಾಗಿ ಖ್ಯಾತಿ ಪಡೆದಿದೆ. ಜಮೀನಿನ ಬದುಗಳಲ್ಲಿ, ಬೇಲಿಯ ಪಕ್ಕದಲ್ಲಿ ಹೀಗೆ ವ್ಯರ್ಥ ಪ್ರದೇಶದಲ್ಲಿ ಈ ನೇರಳೆ ಗಿಡಗಳನ್ನು ಹಾಕಿದರೆ ಆರೋಗ್ಯಕ್ಕೆ ಆರೋಗ್ಯ, ಲಾಭಕ್ಕೆ ಲಾಭ. ಲಾಭ ಹೇಗೆ ಅಂತೀರಾ, ಪ್ರಸ್ತುತ ಈ ಜಂಬು ನೇರಳೆ ಹಣ್ಣು ಪ್ರತಿ ಕೆಜಿಗೆ 200 ರುಪಾಯಿ ಇದೆ. ನೇರಳೆಗಿಡ ನೆಟ್ಟ ನಾಲ್ಕು ವರ್ಷದಲ್ಲಿ ಹಣ್ಣು ಬಿಡಲಿದ್ದು, ಆರಂಭದಿoದಲೇ ಕನಿಷ್ಠ 50 ಕೆಜಿ ಹಣ್ಣು ಪ್ರತಿ ಗಿಡದಿಂದ ಫಸಲು ಸಿಗಲಿದೆ. ಅಂದರೆ ಪ್ರತಿ ಗಿಡಕ್ಕೆ 10 ರುಪಾಯಿಯಂತೆ ಲೆಕ್ಕ ಹಾಕಿದರೆ ಜಮೀನಿನ ವ್ಯರ್ಥ ಪ್ರದೇಶದಲ್ಲಿ ಬೆಳೆದ ಈ ಗಿಡಗಳಿಂದಲೇ ಒಂದು ಎಕರೆಗೆ ಎಷ್ಟೆಲ್ಲಾ ಲಾಭ ಸಿಗಲಿದೆ ಎಂಬುದು ನಿರೀಕ್ಷೆಗೂ ಮೀರಿದೆ.

ಬದು, ಬೇಲಿಯ ಪಕ್ಕದಲ್ಲಿ ಜಂಬು ನೇರಳೆ ಗಿಡಗಳನ್ನು ಹಾಕಿ, ಜಮೀನಿನಲ್ಲಿ ಇತರೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದಾಗಿದೆ. ಹಾಗೆ ಬೆಳೆದರೂ ಎಕರೆಗೆ ಕನಿಷ್ಠ 150 ಗಿಡ ಹಾಕಬಹುದಾಗಿದೆ. ಅಂದರೆ ಪ್ರತಿ ಎಕರೆಗೆ 15 ಲಕ್ಷ ಗಳಿಸಬಹುದಾಗಿದೆ. ಇದಕ್ಕೆ ಊಜಿ ಬಿಟ್ಟರೆ ಇತರೆ ರೋಗಬಾಧೆಯೂ ಇಲ್ಲ. ಇದರಿಂದ ಹೆಚ್ಚು ಕೀಟಿ ನಾಶಕದಂತಹ ಔಷಧಿಗಳನ್ನು ಸಿಂಪಡಿಸಬೇಕಾದ ಅಗತ್ಯವೂ ಇಲ್ಲ. ಜೊತೆಗೆ ಇದಕ್ಕಾಗಿಯೇ ನೀರು ಹಾಯಿಸಬೇಕಾದ ಹೊಣೆಯೂ ಇಲ್ಲ. ಯಾಕೆಂದರೆ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಹಾಯಿಸಿದ ನೀರೇ ಇದಕ್ಕೂ ಸಾಕಾಗುತ್ತದೆ.

ಇನ್ನು ಮಾರುಕಟ್ಟೆಯ ಚಿಂತೆಯೇ ಇಲ್ಲ. ಯಾಕೆಂದರೆ ತೋಟಗಳಿಗೇ ಬಂದು ಮರಗಳನ್ನು ಖರೀದಿಸುವವರೂ ಇದ್ದಾರೆ. ಜಂಬುನೇರಳೆ ಹಣ್ಣು ಬಿಟ್ಟಿದೆ ಎಂದರೆ ದೂರದ ಪ್ರದೇಶಗಳಿಂದ ಬಂದು ತೋಟ ಖರೀದಿಸಿ, ಅವರೇ ಹಣ್ಣು ಕೊಯ್ಲಿ ಮಾಡಿ ಕೊಂಡೊಯ್ಯುತ್ತಾರೆ. ಹಾಗಾಗಿ ಇದಕ್ಕೆ ಮಾರುಕಟ್ಟೆ ಚಿಂತೆಯೂ ಇಲ್ಲ. ಒಟ್ಟಿನಲ್ಲಿ ಜಂಬುನೇರಳೆ ಎಂಬುದು ರೈತನ ಪಾಲಿಗೆ ವರದಾನವಾಗಿದ್ದರೆ, ಜನರ ಪಾಲಿಗೆ ಆರೋಗ್ಯಕರ ಹಣ್ಮಾಗಿ ಖ್ಯಾತಿ ಪಡೆದಿದೆ.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

 

About The Author

Leave a Reply

Your email address will not be published. Required fields are marked *