ಬಾಗೇಪಲ್ಲಿಯಲ್ಲಿ ಪ್ರೇಮಿಗಳ ಬೀದಿ ರಂಪಾಟ
1 min readಬಾಗೇಪಲ್ಲಿಯಲ್ಲಿ ಪ್ರೇಮಿಗಳ ಬೀದಿ ರಂಪಾಟ
ಪ್ರೀತಿಸಿ 7 ತಿಂಗಳ ಗರ್ಭಿಣಿ ಮಾಡಿ ಕೈ ಕೊಟ್ಟ ಪ್ರಿಯತಮ
ವಿವಾಹವಾಗಲು ನಿರಾಕರಿಸಿದ ಪ್ರಿಯತಮನ ಜೊತ ಹೊಡೆದಾಟ ಬಡಿದಾಟ
ಪ್ರೀತಿಸಿದ ಯುವಕನ ಜೊತೆ ವಿವಾಹ ಮಾಡಿಸುವಂತೆ ಪರದಾಟ
ಪ್ರೀತಿ ಮಾಯೆಹುಷಾರು ಕಣ್ಣೀರ್ ಮಾರೋ ಬಜಾರು ಎಂಬ ದುನಿಯಾ ಸಿನಿಮಾದ ಹಾಡು ನಾವೆ ಕೇಳಿದ್ದೇವೆ. ಮೂರು ವರ್ಷಗಳ ಪ್ರೀತಿ ಪ್ರೇಮ ಪ್ರಣಯ ವ್ಯಾಮೋಹ ಕೊನೆಗೆ ಲವ್ ಸೆಕ್ಸ್ ದೋಖಾ ಆರೋಪದಲ್ಲಿ ಅಂತ್ಯ, ವಿವಾಹಕ್ಕೆ ಪ್ರಿಯಕರನ ಕುಟುಂಬಸ್ಥರ ಅಡ್ಡಿ, ಯುವತಿ ಗೋಳಾಟ ಇಷ್ಟಕ್ಕೂ ಆಗಿದ್ದು ಏನು ಅಂತೀರಾ ಈ ಸ್ಟೋರಿ ನೋಡಿ
ಹೀಗೆ ವಿವಾಹಕ್ಕೂ ಮುನ್ನವೇ ತುಂಬು ಗರ್ಭಿಣಿಯಾಗಿರುವ ಯುವತಿ, ಯುವತಿ ಸ್ಥಿತಿಗೆ ಕಾರಣವಾದವನ ಜೊತೆ ಯುವತಿ ಬೀದಿ ರಂಪಾಟ, ತನ್ನ ಮಗಳ ಸ್ಥಿತಿ ಕಂಡು ಕಣ್ನೀರಿಡುತ್ತಿರುವ ತಾಯಿ, ಗರ್ಭಿಣಿ ಯುವತಿಯನ್ನು ಸಮಾಧಾನ ಮಾಡುತ್ತಿರುವ ಮಹಿಳೆಯರು. ಈ ದೃಶ್ಯಗಳು ಕಂಡುoದಿದ್ದು ಬಾಗೇಪಲ್ಲಿ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ. 22 ವರ್ಷದ ಈ ಗರ್ಭಿಣಿ ಯುವತಿ ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದಾಗ ಮಲ್ಲಸಂದ್ರ ಗ್ರಾಮದ ಸೂರ್ಯಪ್ರಕಾಶ್ ಎಂಬ ಯುವಕನ ಪ್ರೀತಿಯ ಬಲಗೆ ಬಿದ್ದಿದ್ದಳು ಎನ್ನಲಾಗಿದೆ.
ಸೂರ್ಯಪ್ರಕಾಶನ ಪ್ರೀತಿ ಮೋಹದ ಶಾಖಕ್ಕೆ ಕರಗಿದ ಯುವತಿ ಪ್ರಿಯಕರನ ಜೊತೆ ಪ್ರಣಯ ಸರಸ ಸಲ್ಲಾಪದಲ್ಲಿ ತೇಲಾಡಿ ಪ್ರಿಯಕರನ ಒತ್ತಾಯದ ಮೇಲೆ ನಾಲ್ಕೆದು ಬಾರಿ ಗರ್ಭಪಾತವನ್ನೂ ಮಾಡಿಸಿಕೊಂಡಿದ್ದಾಳತೆ. ಏನೇ ಮಾಡಿದ್ರು ಗರ್ಭಪಾತವಾಗದ ಕಾರಣ ಈಗ ಗರ್ಭಿಣಿಯಾಗಿರುವ ವಿಷಯ ಮನೆಯವರಿಗೆ ತಿಳಿದು ಪ್ರಿಯಕರಿನಿಗೆ ವಿವಾಹವಾಗುವಂತೆ ಕೇಳಿದ್ದಾರೆ. ಆದರೆ ನಾನವನಲ್ಲಾ ನಾನವನಲ್ಲಾ ಅಂತ ಪ್ರಿಯತಮೆಗೆ ಶಾಕ್ ಕೊಟ್ಟಿದ್ದಾನೆ ಪ್ರಿಯತಮ. ರೋಸಿ ಹೋದ ಪ್ರಿಯತಮೆ ಬಾಗೇಪಲ್ಲಿ ನಡುರಸ್ತೆಯಲ್ಲಿ ವಿವಾಹವಾಗುವಂತೆ ರಂಪಾಟ ಮಾಡಿದ್ದಾರೆ.
ತನ್ನ ಪ್ರಿಯಕರ ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ಗೆ ಕಂಗಾಲಾದ ಪ್ರಿಯತಮೆ ಪೊಲೀಸರ ಮೊರೆ ಹೋಗಿದ್ದಳು. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ಲು. ಯುವತಿ ಕೊಟ್ಟ ದೂರಿಗೆ ಬೆದರಿದ ಪ್ರಿಯತಮ ಸೂರ್ಯಪ್ರಕಾಶ್ ಪೋಷಕರು ಜಾಮೀನಿಗೆ ಸಹಿ ಹಾಕಿ ಕೇಸ್ ವಾಪಸ್ಸು ತೆಗೆದುಕೊಂಡ್ರೆ ಇಬ್ಬರಿಗೂ ವಿವಾಹ ಮಾಡೊದಾಗಿ ನಂಬಿಸಿದ್ದಾರೆ. ಸುಳ್ಳಿನ ಮಾತುಗಳಿಗೆ ಬೆರಗಾದ ಪ್ರಿಯತಮೆ ಜಾಮೀನು ನೀಡುವಂತೆ ಸಹಿ ಹಾಕಿ ಪೊಲೀಸ್ ಕೇಸ್ ನಿಂದ ಮುಕ್ತಿಗೊಳಿಸಿದ್ದಾಳೆ. ಜಾಮೀನು ಬಂದ ಬಳಿಕ ಯುವಕನ ಪೋಷಕರು ಉಲ್ಟಾ ಹೊಡೆದಿದ್ದು, ಏನ್ ಮಾಡಿಕೊಳ್ತೀಯೋ ಮಾಡಿಕೋ ನಿನ್ನ ಜೊತೆ ನನ್ನ ಮಗನ ಮದುವೆ ನಡೆಯಲ್ಲಾ ಎಂದು ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ. ಪ್ರೀತಿ ಹೆಸರಲ್ಲಿ ಏಳು ತಿಂಗಳ ಗರ್ಭಿಣಿ ಮಾಡಿ ಪ್ರಿಯತಮ ಕೈ ಕೊಟ್ಟಿದ್ದು ಸದ್ಯ ಪ್ರಿಯತಮೆ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ಮದುವೆಗೂ ಮುನ್ನ ತುಂಬು ಗರ್ಭಿಣಿಯಾಗಿರುವ ತಮ್ಮ ಮಗಳ ಪರಿಸ್ಥಿತಿ ಕಂಡು ತಂದೆ ತಾಯಿ ಊರಲ್ಲಿ ತಲೆ ಎತ್ತಿ ತಿರುಗಾಡಲು ಆಗುತಿಲ್ಲ. ಇತ್ತ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೋರ್ಟು ಕಛೇರಿಗೂ ತಿರುಗಾಡಲು ಆಗದ ಪರಿಸ್ಥಿತಿ, ಸದ್ಯ ಒಂದಷ್ಟು ಮಹಿಳೆಯರು ಯುವತಿಯ ಬೆನ್ನಿಗೆ ನಿಂತಿದ್ದು, ಪ್ರೀತಿಸಿ ಗರ್ಭಿಣಿ ಮಾಡಿ ಕೈ ಕೊಟ್ಟ ಯುವಕನ ಜೊತೆ ವಿವಾಹ ಮಾಡಲು ನ್ಯಾಯಕ್ಕಾಗಿ ಹೋರಾಟ ನಡೆಸುತಿದ್ದಾರೆ.