ಶಿಡ್ಲಘಟ್ಟ ತಾಪಂ ಕಚೇರಿ ಸಭಾಂಗಣದಲ್ಲಿ ಜನ ಸ್ಪಂದನಾ ಕಾರ್ಯಕ್ರಮ
1 min readಶಿಡ್ಲಘಟ್ಟ ತಾಪಂ ಕಚೇರಿ ಸಭಾಂಗಣದಲ್ಲಿ ಜನ ಸ್ಪಂದನಾ ಕಾರ್ಯಕ್ರಮ
ಎಚ್‌ಎನ್ ವ್ಯಾಲಿ ನೀರು ಶಿಡ್ಲಘಟ್ಟಕ್ಕೆ ಹರಿಸಲು ಒತ್ತಾಯ
ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜನ ಸ್ಪಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲ ಅರ್ಜಿಗಳನ್ನು ಸ್ಥಳದಲ್ಲೆ ಇತ್ಯರ್ಥಪಡಿಸಿದರೆ ಇನ್ನು ಕೆಲವೊಂದನ್ನು ಇತ್ಯರ್ಥಪಡಿಸಲು ಸಂಬoಧಿಸಿದ ಅಧಿಕಾರಿಗಳಿಗೆ ಸೂಚಿಸಿಸಿದರು.
ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜನ ಸ್ಪಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲ ಅರ್ಜಿಗಳನ್ನು ಸ್ಥಳದಲ್ಲೆ ಇತ್ಯರ್ಥಪಡಿಸಿದರೆ ಇನ್ನು ಕೆಲವೊಂದನ್ನು ಇತ್ಯರ್ಥಪಡಿಸಲು ಸಂಬoಧಿಸಿದ ಅಧಿಕಾರಿಗಳಿಗೆ ಸೂಚಿಸಿಸಿದರು. ಎಚ್.ಎನ್ ವ್ಯಾಲಿ ನೀರು ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳಿಗೆ ಹರಿಸುತ್ತಿಲ್ಲ. ಯಾವುದೋ ಕಾಣದ ಒತ್ತಡದಿಂದಾಗಿ ಇಲ್ಲಿನ ಕೆರೆಗಳಿಗೆ ನೀರು ಬಿಡುತ್ತಿಲ್ಲ ಎಂದು ರೈತ ಸಂಘದ ರೈತರು ದೂರಿದರು.
ಈ ಹಿಂದೆ ನೀರು ಹರಿಸಲಾಗಿತ್ತಾದರೂ ಆಗ ಕಾಲುವೆ ಅಕ್ಕ ಪಕ್ಕದಲ್ಲಿ ಮೋಟರ್‌ಗಳನ್ನು ಇಟ್ಟು ನೀರನ್ನು ತೋಟ, ಕೃಷಿ ಹೊಂಡಗಳಿಗೆ ಹರಿಸಿಕೊಂಡ ಪರಿಣಾಮ ಶಿಡ್ಲಘಟ್ಟದ ಕೆರೆಗಳಿಗೆ ಒಂದೇ ಒಂದು ಹನಿ ನೀರು ಬರಲಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಸಂಬoಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿಲ್ಲ ಎಂದು ಅಳವತ್ತುಕೊಂಡರು. ರೈತರ ಮನವಿ ಆಲಿಸಿದ ಜಿಲ್ಲಾಧಿಕಾರಿಗಳು, ಎಚ್.ಎನ್ ವ್ಯಾಲಿ ಯೋಜನೆಯ ಎಂಜಿನಿಯರ್‌ಗೆ ಕರೆ ಮಾಡಿ ವಿಷಯ ಪ್ರಸ್ತಾಪಿಸಿದಾಗ ಜುಲೈ ಅಂತ್ಯದೊಳಗೆ ಶಿಡ್ಲಘಟ್ಟದ ಕೆರೆಗಳಿಗೆ ನೀರು ಹರಿಸುವುದಾಗಿ ತಿಳಿಸಿದರು.
ಕೆರೆಗಳಿಗೆ ನೀರು ತುಂಬಿಸುವುದಷ್ಟೆ ಅಲ್ಲ ಇತರೆ ಕೆಲ ಸಮಸ್ಯೆಗಳಿವೆ. ಹಾಗಾಗಿ ನಾಳೆ ಈ ರೈತರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಡಿಸಿ ಅವರು ಎಂಜಿನಿಯರ್‌ಗೆ ತಾಕೀತು ಮಾಡಿದರು. ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಕ್ತಿಯೊಬ್ಬ ತಾನು ಅಶಕ್ತನಾಗಿದ್ದು, ಕೆಲಸ ಮಾಡಲು ಆಗುವುದಿಲ್ಲ. ಹೆಂಡತಿ ಮಕ್ಕಳೊಂದಿಗೆ ಗುಡಿಸಿಲಿನಲ್ಲಿ ವಾಸಿಸುತ್ತಿದ್ದೇನೆ, ವಿಕಲಚೇತನ ಮಾಶಾಸನದಿಂದಲೆ ಬದುಕು ನಡೆಸಲು ಆಗುತ್ತಿಲ್ಲ ಎಂದು ಡಿಸಿ ಬಳಿ ಕಷ್ಟ ಹೇಳಿಕೊಂಡರು.
ಮುoಬರುವ ದಿನಗಳಲ್ಲಿ ಮನೆಗಳು ಮಂಜೂರು ಆದರೆ ಮೊದಲ ಆಧ್ಯತೆ ನಿನಗೆ ಕೊಡುವುದಾಗಿ ಭರವಸೆ ನೀಡಿದರಲ್ಲದೆ ನರೇಗಾ ಯೋಜನೆಯಡಿ ಕೆಲಸ ಕೊಡುತ್ತೇವೆ. ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿ ಸಾಕು ಎಂದು ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಅವರಿಗೆ ಈ ವ್ಯಕ್ತಿಗೆ ನರೇಗಾದಲ್ಲಿ ಕೆಲಸ ಕೊಡಿ ಎಂದು ಸೂಚಿಸಿದರು.
ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಕ್ತಿಯೊಬ್ಬ ನನಗೆ ಮಾತನಾಡಲು ಆಗುತ್ತಿಲ್ಲ. ಸಾಧನ ನೀಡಿದರೆ ಮಾತನಾಡಲು ಸಾಧ್ಯ ಎಂದು ಕೊಟ್ಟ ಅರ್ಜಿಯನ್ನು ಗಮನಿಸಿದ ಡಿಸಿ ಅವರು ಗಂಟಲಿನಲ್ಲಿ ಅಳವಡಿಸುವ ಸಾಧನವನ್ನು ಶೇ ೩ ರ ಅನುದಾನದಲ್ಲಿ ಕೊಡಲು ಕ್ರಮ ಕೈಗೊಳ್ಳಿ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಸೂಚಿಸಿದರು. ಕಂದಾಯ, ಭೂಮಾಪನ, ನಗರಸಭೆ ಸೇರಿದಂತೆ ನಾನಾ ಇಲಾಖೆಗಳಿಗೆ ಸಂಬoಧಿಸಿದ ಹಲವು ಅರ್ಜಿಗಳು ಸಲ್ಲಿಕೆಯಾದವು. ಜಿಪಂ ಸಿಇಒ ಪ್ರಕಾಶ್ ಜಿ. ನಿಟ್ಟಾಲಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ನಾರಾಯಣ್ ಇದ್ದರು.