ಹೇಮಾವತಿ ನೀರು ಕೊಂಡೊಯ್ಯಲು ಮಾಜಿ ಶಾಸಕ ವಿರೋಧ
1 min readಹೇಮಾವತಿ ನೀರು ಕೊಂಡೊಯ್ಯಲು ಮಾಜಿ ಶಾಸಕ ವಿರೋಧ
ಪೈಪ್‌ಲೈನ್ ಮೂಲಕ ನೀರು ಕೊಂಡೊಯ್ಯ ಬಿಡಲ್ಲ
ಮೊದಲು ಕುಣಿಕಗಲ್ ಕೆರೆ ಸ್ವಚ್ಛಗೊಳಿಸಲು ಒತ್ತಾಯ
ತುಮಕೂರು ಜಿಲ್ಲೆಗೆ ಹೇಮಾವತಿ ನೀರಿನ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಆರೋಪಿಸಿದರು. ತುರುವೇಕೆರೆ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೇಮಾವತಿ ನೀರು ಕುಣಿಗಲ್ ಮೂಲಕ ರಾಮನಗರ, ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗುವುದನ್ನು ವಿರೋಧಿಸುವುದಾಗಿ ಹೇಳಿದರು.
ತುಮಕೂರು ಜಿಲ್ಲೆಗೆ ಹೇಮಾವತಿ ನೀರಿನ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಆರೋಪಿಸಿದರು. ತುರುವೇಕೆರೆ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೇಮಾವತಿ ನೀರು ಕುಣಿಗಲ್ ಮೂಲಕ ರಾಮನಗರ, ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗುವುದನ್ನು ವಿರೋಧಿಸುವುದಾಗಿ ಹೇಳಿದರು. ಜಿಲ್ಲೆಯ ಕೆಲ ನಾಯಕರು ಹೊರತುಪಡಿಸಿ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಕದ್ದು ಮುಚ್ಚಿ ಕಾಮಗಾರಿ ನಡೆಸುತ್ತಿದೆ. ಹೇಮಾವತಿ ಇಲಾಖೆಯಿಂದ ಗೃಹ ಇಲಾಖೆಗೆ ಕಾಮಗಾರಿ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ಪತ್ರ ಬರೆದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈ ಹೋರಾಟಕ್ಕೆ ಭಾಗಿಯಾದ ನಾಯಕರನ್ನು ಹೊಂದಿಸಿ ಎಂದು ಸರ್ಕಾರ ತಿಳಿಸಿರುವುದು ನಾಚಿಕೆಗಡಿನ ಸಂಗತಿ. ನೀರು ಕೊಡಲು ಅಧ್ಯಂತರವಿಲ್ಲ, ಆದರೆ ನಮ್ಮ ಪಾಲಿನ ನೀರು ತೆಗೆದುಕೊಂಡು ಹೋಗಲು ವಿರೋಧವಿದೆ. ಈ ಬಗ್ಗೆ ಗೃಹ ಸಚಿವರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಲಾಗುವುದು. ಜಿಲ್ಲೆಯ ಎಲ್ಲಾ ನಾಯಕರು ಸೇರಿ ಬೃಹತ್ ಪ್ರತಿಭಟನೆ ನಡೆಸಲಿದ್ದು, ಬೆಂಬಲಿಸುವoತೆ ರೈತರು ಹಾಗು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಮ್ಮ ಪಾಲಿನ ನೀರು ಬಿಟ್ಟು ಟ್ರಿಬುನಲ್‌ನಲ್ಲಿ ಅಲೋಕೇಶನ್ ಮಾಡಿಸಿ ನೀರು ತೆಗೆದುಕೊಂಡು ಹೋಗಲಿ, ನಮ್ಮ ಸರ್ಕಾರವಿದ್ದ ಕಾಲದಲ್ಲಿ ಚಾನೆಲ್‌ನಲ್ಲಿ ನೀರು ಸುಗಮವಾಗಿ ಹರಿಯಲು ಅಗಲೀಕರಣ ಮಾಡಲಾಗಿದೆ. ಆದರೆ ಪೈಪ್ ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಮೊದಲು ಪರಿಶೀಲಿಸಿ, ಮಲಿನಗೊಂಡಿರುವ ಕುಣಿಗಲ್ ಕೆರೆಯನ್ನು ಸ್ವಚ್ಛಗೊಳಿಸಿ, ಶುದ್ಧ ಕುಡಿಯುವ ನೀರು ಸಾರ್ವಜನಿಕರಿಗೆ ನೀಡಿ, ಈ ಯೋಜನೆ ಕೈಗೆತ್ತಿಕೊಳ್ಳಬೇಡಿ ಎಂದು ಸರ್ಕಾರದ ವಿರುದ್ಧ ಗುಡುಗಿದರು. ಈ ಸಂದರ್ಭದಲ್ಲಿ ವಿಬಿ ಸುರೇಶ್, ಕಾಳಂಜಿ ಹಳ್ಳಿ ಸೋಮಶೇಖರ್, ಕುರುಬರಹಳ್ಳಿ ವೆಂಕಟರಾಮಯ್ಯ, ಉಮೇಶ್, ಸಂದೀಪ್, ರಂಗೇಗೌಡ, ಅಯರಹಳ್ಳಿ ಪಾಂಡುರoಗಯ್ಯ ಇದ್ದರು.