ಪಿಪಿಎಚ್‌ಎಸ್ ಶಾಲೆಯಲ್ಲಿ ಹಸಿರು ಅಭಿಯಾನ
1 min readಪಿಪಿಎಚ್‌ಎಸ್ ಶಾಲೆಯಲ್ಲಿ ಹಸಿರು ಅಭಿಯಾನ
28ನೇ ದತ್ತಿ ಜಯಂತಿ, ಸಿವಿವಿ ಜಯಂತಿ ಅಂಗವಾಗಿ ಅಭಿಯಾನ
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ
ಸಿ.ವಿ. ವೆಂಕಟರಾಯಪ್ಪ ಚಿಕ್ಕಬಳ್ಳಾಪುರದ ಶಿಕ್ಷಣದ ಹರಿಕಾರ. ಅವರು ಅಂದು ನೆಟ್ಟ ಶಾಲೆ ಎಂಬ ಸಸಿಗಳು ಇಂದು ಬೆಳೆದು ಹೆಮ್ಮರಗಳಾಗಿ ಅನೇಕರಿಗೆ ನೆರಳಾಗಿವೆ. ಅಷ್ಟೇ ಅಲ್ಲ, ಅದೇ ಮರಗಳು ನೀಡುತ್ತಿರುವ ಫಸಲು ಎಷ್ಟೋ ಕುಟುಂಬಗಳಿಗೆ ಆಸರೆಯಾಗಿವೆ ಎಂದು ಶಿಕ್ಷಕ ಗುಂಪು ಮರದ ಆನಂದ್ ಬಣ್ಣಿಸಿದರು.
ಸಿ.ವಿ. ವೆಂಕಟರಾಯಪ್ಪ ಚಿಕ್ಕಬಳ್ಳಾಪುರದ ಶಿಕ್ಷಣದ ಹರಿಕಾರ. ಅವರು ಅಂದು ನೆಟ್ಟ ಶಾಲೆ ಎಂಬ ಸಸಿಗಳು ಇಂದು ಬೆಳೆದು ಹೆಮ್ಮರಗಳಾಗಿ ಅನೇಕರಿಗೆ ನೆರಳಾಗಿವೆ. ಅಷ್ಟೇ ಅಲ್ಲ, ಅದೇ ಮರಗಳು ನೀಡುತ್ತಿರುವ ಫಸಲು ಎಷ್ಟೋ ಕುಟುಂಬಗಳಿಗೆ ಆಸರೆಯಾಗಿವೆ ಎಂದು ಶಿಕ್ಷಕ ಗುಂಪು ಮರದ ಆನಂದ್ ಬಣ್ಣಿಸಿದರು. ಕೆವಿ ಶಿಕ್ಷಣ ಸಂಸ್ಥೆಗಳ 28ನೇ ದತ್ತಿ ದಿನಾಚರಣೆ ಹಾಗೂ ಸಿವಿ ವೆಂಕಟರಾಯಪ್ಪ ವರ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ಹಸಿರು ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಒಂದು ಗಿಡ ನೆಟ್ಟರೆ ಅದು ಮುಂದೆ ಅನೇಕ ಮಂದಿಗೆ ನೆರಳು ನೀಡುವ ಜೊತೆಗೆ ಅನೇಕ ಪ್ರಾಣಿ ಪಕ್ಷಿಗಳಿಗೆ ಹಸಿವು ನೀಗಿಸೋ ಹಣ್ಣು ನೀಡುತ್ತದೆ. ಹಾಗೆಯೇ ಅಂದು ಸಿವಿ ವೆಂಕಟರಾಯಪ್ಪನವರು ಬಿತ್ತಿದ ಶಿಕ್ಷಣ ಎಂಬ ಬೀಜ ಗಿಡವಾಗಿ, ಮರವಾಗಿ, ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೇ ಕಾರಣಕ್ಕೆ ನೂರಾರು ಮಂದಿಗೆ ಹಸಿವು ನೀಗಿಸುವ ಜೊತೆಗೆ ಸಾವಿರಾರು ಮಂದಿಗೆ ಶಿಕ್ಷಣ ನೀಡುವ ಆಶ್ರಯತಾಣವಾಗಿ ಬೆಳೆದಿದೆ ಎಂದು ಹೇಳಿದರು.
ಪ್ರತಿ ವರ್ಷ ದತ್ತಿ ದಿನಾಚರಣೆ ಅಂಗವಾಗಿ ಹಸಿರು ಅಭಿಯಾನ ನಡೆಸುತ್ತಿದ್ದು, ಸಹಸ್ರಾರು ಮಂದಿಗೆ ಬೆಳಕು ನೀಡಿದ ಸಿವಿ ವೆಂಕಟರಾಯಪ್ಪನವರ ಹೆಸರಿನಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಾನವನ ಆರೋಗ್ಯವಂತ ಜೀವನಕ್ಕಾಗಿ ಹಸಿರು ಮುಖ್ಯವಾಗಿದೆ. ಪರಿಸರ ರಕ್ಷಮೆ ಪ್ರತಿಯೊಬ್ಬರ ರಕ್ಷಣೆಯಾಗಿದ್ದು, ಗಿಡ ನೆಟ್ಟು ಪೋಷಣೆ ಮಡಾವ ಜೊತೆಗೆ ಪರಿಸರ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಅವರಕು ಮನವಿ ಮಡಿದರು.
ಪಿಪಿಎಚ್‌ಎಸ್ ಶಾಲೆಯ ಶಿಕ್ಷಕ ಮಹಾಂತೇಶ್ ಮಾತನಾಡಿ, ಕೆ ವಿ ಮತ್ತು ಪಂಚಗಿರಿ ವಿದ್ಯಾದತ್ತಿ ಮತ್ತು ಸಿವಿವಿ ಜಯಂತಿ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹಸಿರು ಅಭಿಯಾನ ಒಂದು ಭಾಗವಾಗಿದೆ, ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
28ನೇ ದತ್ತಿ ದಿನಾಚರಣೆ ಹಾಗೂ ಸಿವಿವಿ ಅವರ ಜಯಂತಿ ಅಂಗವಾಗಿ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ಸಿವಿವಿ ಹಸಿರು ಅಭಿಯಾನಕ್ಕೆ ಪಿಪಿಎಚ್‌ಎಸ್ ಶಾಲೆಯ ಮುಖ್ಯ ಶಿಕ್ಷಕ ಎಂ. ನಾರಾಯಣಸ್ವಾಮಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಮಾಡಲಾಯಿತು. ಅಲ್ಲದೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡಗಳನ್ನು ನೀಡಲಾಯಿತು.
ಶಾಲಾ ಸಿಬ್ಬಂದಿ, ಕೆವಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು, ಕೆ ವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪಂಚಗಿರಿ ಬೋಧನಾ ಪ್ರೌಢಶಾಲೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.