ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅದ್ದೂರಿ ವಾರ್ಷಿಕೋತ್ಸವ
1 min readಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅದ್ದೂರಿ ವಾರ್ಷಿಕೋತ್ಸವ
ಗಮನ ಸೆಳೆದ ಬಿಸಿಎ ವಿದ್ಯಾರ್ಥಿಗಳ ಜಾನಪದ ನೃತ್ಯ
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್.ಸಿ.ಸಿ, ಸ್ಕೌಟ್ಸ್, ಮತ್ತು ಗೈಡ್ಸ್, ಯೂತ್ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಇಂದು ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿ, ಶುಭ ಹಾರೈಸಿದರು.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಯೂತ್ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಮಾಜ ಸೇವಕ ಬಿಕ್ಕಲಹಳ್ಳಿಯ ಯೋಗಮುನೇಶ್ವರ ದೇವಾಲಯದ ಅಧ್ಯಕ್ಷ ಮಂಜುನಾಥ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಮಾಜ ಸೇವಕ ಬಿಕ್ಕಲಹಳ್ಳಿಯ ಮಂಜುನಾಥ್, ಗ್ರಾಮೀಣ ಯುವಕನನ್ನು ಈ ಸಮಾರಂಭಕ್ಕೆ ಆಹ್ವಾನಿಸಿರುವುದು ಖುಷಿ ತಂದಿದೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳನ್ನು ನೋಡಿದ್ರೆ ಖುಷಿ ಆಗುತ್ತೆ, ಖಾಸಗಿ ಕಾಲೇಜುಗಳಲ್ಲಿ ಓದಿ ಹೊರ ದೇಶಗಳಲ್ಲಿ ಕೆಲಸ ಮಾಡಿಕೊಂಡು ದೇಶ ಮರೆತು, ತಂದೆ ತಾಯಂದಿರನ್ನು ವೃದ್ರಾಶ್ರಮದಲ್ಲಿ ಸೇರಿಸುತ್ತಾರೆ. ಅದ್ರೆ ಸರ್ಕಾರಿ ಕಾಲೇಜುಗಳಲ್ಲಿ ಓದಿದ ಮಕ್ಕಳು ಮಾತ್ರ ಇಲ್ಲೆ ಕೆಲಸ, ಕೃಷಿ ಮಾಡಿಕೊಂಡು ತಂದೆ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ತಾರೆ ಹಾಗಾಗಿ ಪೋಷಕರು ಸರ್ಕಾರಿ ಕಾಲೇಜಿನಲ್ಲಿ ಮಕ್ಕಳನ್ನು ಓದಿಸುವ ಕೆಲಸ ಮಾಡಬೇಕೆಂದು ಹೇಳಿದ್ರು.
ಕಾರ್ಯಕ್ರಮದಲ್ಲಿ ಬಿಸಿಎ ವಿಧ್ಯಾರ್ಥಿಗಳಿಂದ ಮೂಡಿಬಂದ ಜಾನಪದ ನೃತ್ಯ ಆಕರ್ಷಣೀಯವಾಗಿತ್ತು. ವಿದ್ಯಾರ್ಥಿಗಳಿಂದ ಇಪ್ಪತ್ತು ನಿಮಿಷದ ವೀರಭದ್ರ ಕುಣಿತ, ಕಂಸಾಳೆ, ಮಾರಿ ಕುಣಿತ, ಶಕ್ತಿ ಕರಗ, ವೀರಗಾಸೆ, ನವಿಲು ಕುಣಿತ ಮಾಡಿ ನಿಬ್ಬರಿಗಾಗಿಸುವಂತೆ ಮಾಡಿದರು. ಸಹ ವಿಧ್ಯಾರ್ಥಿಗಳು ಈ ಅಪರೂಪದ ನೃತ್ಯವನ್ನು ಕಂಡು ಶಿಳ್ಳೆ ಕೇಕೆ ಹೊಡೆದು ಎಂಜಾಯ್ ಮಾಡಿದ್ರು.
ಈ ವೇಳೆ ಸಾಂಸ್ಕೃತಿಕ, ಕ್ರೀಡೆ, ಎಸ್.ಎಸ್.ಎಸ್, ಎನ್.ಸಿ.ಸಿ, ಸ್ಕೌಟ್ಸ್, ಮತ್ತು ಗೈಡ್ಸ್, ಯೂತ್ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ವಿತರಣೆ ಮಾಡಿದ್ರು.. ಕಾರ್ಯಕ್ರಮದಲ್ಲಿ ಕಾಲೇಜಿನ ಬೋದಕ ವರ್ಗ, ಸಿಬ್ಬಂದಿ ಮತ್ತು ಸಾವಿರಾರು ವಿಧ್ಯಾರ್ಥಿಗಳಿದ್ದರು.