ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಗುಬ್ಬಿ ಪಟ್ಟಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

1 min read

ಗುಬ್ಬಿ ಪಟ್ಟಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ತಾಲೂಕಿನ 180 ಮಂದಿ ಶಸ್ತಚಿಕಿತ್ಸೆಗೆ ಆಯ್ಕೆ

ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಲು ಮನವಿ

ಗುಬ್ಬಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಮತ್ತು ಬೆಂಗಳೂರಿನ ಶಂಕರ್ ಐ ಫೌಂಡೇಶನ್ ಏರ್ಪಡಿಸಿದ್ದ ಕಣ್ಣಿನ ಶಸ್ತಚಿಕಿತ್ಸಾ ಶಿಬಿರ ಯಶಸ್ವಿಯಾಯಿತು. ಈ ಶಿಬಿರದಲ್ಲಿ ಅನೇಕ ಮಂದಿ ಭಾಗವಹಿಸಿ, ತಮ್ಮ ದೃಷ್ಟಿದೋಷ ಪರೀಕ್ಷೆ ಮಾಡಿಸುವ ಜೊತೆಗೆ ಶಸ್ತ ಚಿಕಿತ್ಸೆಯ ಮೂಲಕ ತಮ್ಮ ಬಾಳಿನಲ್ಲಿ ಮತ್ತೆ ಬೆಳಕು ಕಾಣುವಲ್ಲಿ ಯಶಸ್ವಿಯಾದರು.

ಗುಬ್ಬಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಮತ್ತು ಬೆಂಗಳೂರಿನ ಶಂಕರ್ ಐ ಫೌಂಡೇಶನ್ ಏರ್ಪಡಿಸಿದ್ದ ಕಣ್ಣಿನ ಶಸ್ತಚಿಕಿತ್ಸಾ ಶಿಬಿರ ಯಶಸ್ವಿಯಾಯಿತು. ಈ ಶಿಬಿರದಲ್ಲಿ ಅನೇಕ ಮಂದಿ ಭಾಗವಹಿಸಿ, ತಮ್ಮ ದೃಷ್ಟಿದೋಷ ಪರೀಕ್ಷೆ ಮಾಡಿಸುವ ಜೊತೆಗೆ ಶಸ್ತ ಚಿಕಿತ್ಸೆಯ ಮೂಲಕ ತಮ್ಮ ಬಾಳಿನಲ್ಲಿ ಮತ್ತೆ ಬೆಳಕು ಕಾಣುವಲ್ಲಿ ಯಶಸ್ವಿಯಾದರು. ಶಿಬಿರದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ ರವೀಂದ್ರ ನಾಯಕ್, ಕಣ್ಣು ಮನುಷ್ಯನ ಶರೀರದಲ್ಲಿ ಮುಖ್ಯವಾದ ಅಂಗ. ಮನುಷ್ಯನಿಗೆ ವಯಸ್ಸಾದಂತೆ ಕಣ್ಣಿನ ಪೊರೆ ಬರುವುದು ಸಹಜ, ಆ ಪೊರೆ ಶಸ್ತಚಿಕಿತ್ಸೆ ಮೂಲಕ ತೆಗೆದು ಲೆನ್ಸ್ ಅಳವಡಿಕೆ ಮಾಡುವನುದಾಗಿ ಹೇಳಿದರು.

ಈ ಶಿಬಿರದಲ್ಲಿ ಸುಮಾರು 180 ಮಂದಿಯನ್ನು ಶಸ್ತ ಚಿಕಿತ್ಸೆಗೆ ಆರಿಸಲಾಗಿದೆ. ಶಸ್ತಚಿಕಿತ್ಸೆ ನಂತರ ವ್ಯಕ್ತಿ ಗಾಳಿಯಲ್ಲಿ ಓಡಾಡಬಾರದು, ಕನ್ನಡಕ ಸತತವಾಗಿ ಧರಿಸಿರಬೇಕು ಎಂದರು. ಗುಬ್ಬಿ ತಾಲೂಕಿನಲ್ಲಿ ಡೆಂಗ್ಯೂ ರೋಗ ಹರಡದಂತೆ ನಿಗಾ ವಹಿಸಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವರೂ ಸೂಚನೆ ನೀಡಿದ್ದಾರೆ ಎಂದರು. ಗುಬ್ಬಿ ಟಿಎಚ್‌ಒ ಬಿಂದು ಮಾಧವ ಮಾತನಾಡಿ, ತಾಲೂಕಿನಲ್ಲಿ ಸುಮಾರು 22 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಸುಮಾರು ೫೯ ಉಪಕೇಂದ್ರಗಳಿವೆ. 200 ಆಶಾ ಕಾರ್ಯಕರ್ತೆಯರಿದ್ದಾರೆ ಎಂದರು.

ತಾಲೂಕಿನಲ್ಲಿ ಜನವರಿಯಿಂದ ಸುಮಾರು 10 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. 10 ಜನರೂ ಗುಣಮುಖರಾಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಲಿದೆ. ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಶಾಲಾ ಶಿಕ್ಷರ ಮೂಲಕ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ತಾಲೂಕಿನ ಪ್ರತಿ ಗ್ರಾಮದಲ್ಲೂ ೧೫ ದಿನಗಳಿಗೊಮ್ಮೆ ಲಾರ್ವ ಸರ್ವೇ ಮಾಡಲಾಗುತ್ತಿದೆ. ಡೆಂಗ್ಯೂ ಲಕ್ಷಣಗಳು ಮೂಗಿನಲ್ಲಿ ರಕ್ತ ಬರುವುದು, ಹೊಟ್ಟೆ ನೋವು, ಮೈ ಕೈ ಕಡಿತ ಮುಂತಾದ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯುವಂತೆ ಅವರು ಸಲಹೆ ನೀಡಿದರು. ಡಾ ಕೇಶವರಾಜ್, ಡಾ. ಕುಸುಮ ಇದ್ದರು.

 

About The Author

Leave a Reply

Your email address will not be published. Required fields are marked *