ಪುರಾತನ ಧರ‍್ಮಿಕ ಸಂಸ್ಕೃತಿ ಪಾಲಿಸಿದರೆ ಮನಶ್ಸಾಂತಿ

ಆಸ್ತಿ ವಿವಾದ ಹಿನ್ನಲೆ ಒಂದೆ ಕುಟುಂಬದವರ ಜಟಾಪಟಿ

ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ

ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

April 21, 2025

Ctv News Kannada

Chikkaballapura

ರಾಜ್ಯಾದ್ಯಂತ ಮಳೆ ಚುರುಕು: ಕರಾವಳಿಯಲ್ಲಿ ಬಿರುಗಾಳಿ ಆತಂಕ

1 min read

ರಾಜ್ಯಾದ್ಯಂತ ಮಳೆ ಚುರುಕಾಗಿದ್ದು, ಬುಧವಾರ ಶಿವಮೊಗ್ಗದ ಆಗುಂಬೆಯಲ್ಲಿ 12 ಸೆಂಮೀ ಬಿದ್ದಿದೆ. ಕೊಡಗಿನ ಗೋಣಿಕೊಪ್ಪ, ಚಿಕ್ಕಮಗಳೂರಿನ ಮೂಡಗೆರೆ, ಬೀದರ್​ನ ಔರದ್​ನಲ್ಲಿ ಧಾರಾಕಾರವಾಗಿ ಸುರಿದಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜು.6ರಿಂದ ಜು.8ರವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್​ ನೀಡಲಾಗಿದೆ.ಕರ್ನಾಟಕದ ಕರಾವಳಿ ಉದ್ದಕ್ಕೂ ಮತ್ತು ಹೊರಗೆ ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ತೀವ್ರ ಬಿರುಗಾಳಿ ಬೀಸಲಿದೆ.

ದಕ್ಷಿಣ ಕನ್ನಡದಿಂದ ಕರಾವಳಿಗೆ, ಮುಲ್ಕಿಯಿಂದ ಮಂಗಳೂರಿನವರೆಗೆ ಹೈ ವೇವ್​ ವಾಚ್​ ಅರ್ಲಟ್​ ನೀಡಲಾಗಿದೆ. ಸಮುದ್ರದಲ್ಲಿ ಎತ್ತರ ಅಲೆಗಳು ಏಳುವ ಹಿನ್ನೆಲೆಯಲ್ಲಿ ಮೀನುಗಾರಿಕೆ ನಡೆಸದಂತೆ, ಸಮುದ್ರ ದಡದಲ್ಲಿ ಪ್ರವಾಸಿಗರ ತೆರಳದಂತೆ ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಬೆಳಗಾವಿ, ಧಾರವಾಡದಲ್ಲಿ ಮುಂದಿನ ನಾಲ್ಕು ದಿನ, ಹಾವೇರಿಯಲ್ಲಿ ಜು.6ರಿಂದ ಜು.8ರವರೆಗೆ ಯೆಲ್ಲೋ ಅರ್ಲಟ್​ ಇರಲಿದೆ. ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.

ರಾಜ್ಯ ಹವಾಮಾನ ಇಲಾಖೆ ಹಿರಿಯ ಅಧಿಕಾರಿ ಸಿ.ಎಸ್​.ಪಾಟೀಲ್​ ಮಾತನಾಡಿ,ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮುಂಗಾರು ಚುರುಕಾಗಿದೆ. ಕರಾವಳಿ, ಮಲೆನಾಡಲ್ಲಿ ಈಗಾಗಲೇ ಧಾರಾಕಾರವಾಗಿ ಮಳೆಯಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *