ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಹಿಪ್ಪಿಗಳ ಫೆವರೇಟ್ ಪ್ಲೇಸ್ ಅಂತ ಗೋವಾಕ್ಕೆ ಹೇಳೋದೇಕೆ? ಪ್ರವಾಸಿಗರ ಮನಸೆಳೆಯೋದೇಕೆ ಈ ಪುಟ್ಟ ರಾಜ್ಯ?

1 min read

ಪ್ರವಾಸ (Tourism) ಎಂಬುದು ನಮ್ಮನ್ನು ಹೆಚ್ಚು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ನಮ್ಮ ಒತ್ತಡದ ಜೀವನ ಶೈಲಿಯಿಂದ (Lifestyle) ಕೊಂಚ ಬಿಡುವು ತೆಗೆದುಕೊಂಡು ಪ್ರವಾಸಗೈಯ್ಯುವುದು ನಮ್ಮನ್ನು ಚೇತೋಹಾರಿಯನ್ನಾಗಿಸುತ್ತದೆ. ನಮ್ಮ ದೇಶದಲ್ಲಿ ಹಲವಾರು ಪ್ರವಾಸಿ ಸ್ಥಳಗಳಿದ್ದು ಅದರಲ್ಲಿ ಗೋವಾ (Goa) ಹೆಚ್ಚು ಜಾಗತಿಕವಾಗಿ ಗಮನ ಸೆಳೆದಿದೆ.

ಗೋವಾ ಪ್ರತಿಯೊಬ್ಬ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತದೆ ಹಾಗೂ ಎಲ್ಲರಿಗೂ ಮನರಂಜನೆಯನ್ನೊದಗಿಸುತ್ತದೆ.

ಪ್ರವಾಸಗೈಯ್ಯುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಹೊಸ ತಾಣಗಳನ್ನು ಅನ್ವೇಷಿಸುವ ಹಾಗೂ ಅಲ್ಲಿನ ಆಹಾರ, ಜನರು, ಸಂಸ್ಕೃತಿಗಳನ್ನು ಅರಿತುಕೊಳ್ಳುವ ಒಂದು ವಿಧವಾಗಿ ಕಾಣುತ್ತಾರೆ.

ತಮ್ಮ ದೈನಂದಿನ ಜೀವನದಿಂದ ಬಿಡುವಿನ ದಿನವಾಗಿ ಪ್ರವಾಸವನ್ನು ಕಾಣುತ್ತಾರೆ. ಆದರೆ ಪ್ರವಾಸಿ ತಾಣಗಳು ಇತ್ತೀಚಿನ ದಿನಗಳಲ್ಲಿ ಪ್ರವಾಸವನ್ನು ಆರ್ಥಿಕ ರೂಪವಾಗಿ ಕಾಣುತ್ತಿದ್ದು, ಪ್ಯಾಕೇಜ್ ಟೂರ್‌ಗಳು ಹಾಗೂ ಇನ್ನಿತರ ಯೋಜನೆಗಳ ಮೂಲಕ ಆರ್ಥಿಕ ಪ್ರಗತಿಗೆ ಮೂಲವಾಗಿ ಪರಿಗಣಿಸುತ್ತಿದೆ. ಇದರಿಂದ ಪ್ರವಾಸದ ಮೂಲ ಮನರಂಜನೆ ಮಾಯವಾಗುತ್ತಿರುವುದು ಕೂಡ ಕಂಡು ಬಂದಿದೆ.

ಪ್ರವಾಸಿಗರಿಗೆ ಗೋವಾ ಎಂಬುದು ಸ್ವರ್ಗದ ತಾಣದಂತೆ. ಏಕೆಂದರೆ ಅವರು ಗೋವಾವನ್ನು ಅನ್ವೇಷಿಸಲು ಮಾತ್ರ ಬರುವುದಲ್ಲ ಇಲ್ಲಿನವರಾಗಿ ಇಲ್ಲಿನವರೊಂದಿಗೆ ಬೆರೆತುಕೊಂಡು ಇಲ್ಲಿನ ಜನಜೀವನ ಹಾಗೂ ಸಂಸ್ಕೃತಿಯ ಭಾಗವಾಗಿ ಬೆರೆಯಲು ಕೂಡ ಉತ್ಸುಕತೆ ತೋರುತ್ತಾರೆ. ಹೀಗಾಗಿ ತಮ್ಮನ್ನು ತಾವು ಹಿಪ್ಪಿಗಳು ಎಂದು ಕರೆಯಿಸಿಕೊಳ್ಳಲು ಅವರು ಮುಂದಾಗುತ್ತಾರೆ.

ಹಿಪ್ಪಿ ಸಂಸ್ಕೃತಿಯು 1964 ರ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾರಂಭವಾದ ಯುವ ಚಳುವಳಿಯಾಗಿ ಆರಂಭವಾಗಿ ತದನಂತರ ವಿಶ್ವದ ಅನೇಕ ದೇಶಗಳಿಗೆ ಹರಡಿತು ಎನ್ನಲಾಗುತ್ತದೆ.

ಅವರು ತಮ್ಮ ಸಂಸ್ಕೃತಿಗೆ ಒಗ್ಗಿಕೊಳ್ಳುವ ತಮಗೆ ಇಷ್ಟವಾದುದನ್ನು ಮಾಡಲು ಒಂದು ಸಮರ್ಪಕವಾದ ತಾಣವನ್ನು ಅನ್ವೇಷಿಸಲಾರಂಭಿಸಿದರು ಹಾಗೂ ಕೊನೆಗೆ ಗೋವಾವನ್ನು ಆಯ್ಕೆಮಾಡಿಕೊಂಡರು.

ಮೊದಲೇ ಹೇಳಿದಂತೆ ಹಿಪ್ಪಿ ಸಂಸ್ಕೃತಿ ಗೋವಾದಲ್ಲಿ ಪ್ರಾರಂಭವಾದುದಲ್ಲ ಅಂದರೆ ತಮಗೆ ಇಷ್ಟಬಂದುದನ್ನು ಮಾಡಲು ಸರಿಯಾದ ವಿಷಯವನ್ನು ನಡೆಸಲು ಅವರು ಒಂದು ತಾಣವನ್ನು ಹುಡುಕುತ್ತಾರೆ.

ತಮ್ಮಂತೆಯೇ ಇರುವ ಜನರನ್ನು ಕೂಡ ಹಿಪ್ಪಿಗಳು ಅನ್ವೇಷಿಸುತ್ತಾರೆ. ಅಂತಹ ಸ್ಥಳಗಳಲ್ಲಿ ಗೋವಾ ಕೂಡ ಒಂದಾಗಿದೆ. ಕೆಲವೊಂದು ದಾಖಲೆಗಳ ಪ್ರಕಾರ ಗೋವಾದಲ್ಲಿ ಹಿಪ್ಪಿ ಸಂಸ್ಕೃತಿಯು 1960 ರ ದಶಕದಲ್ಲಿ ಪ್ರಾರಂಭವಾಯಿತು, ಅಮೇರಿಕನ್ ಮತ್ತು ಯುರೋಪಿಯನ್ ಹಿಪ್ಪಿಗಳು ಹೆಚ್ಚು ಶಾಂತಿಯುತ ಮತ್ತು ತೃಪ್ತಿಕರವಾದ ಜೀವನ ವಿಧಾನವನ್ನು ಬಯಸಿದರು.

ಹೀಗಾಗಿ ಅವರು ಅಭಿವೃದ್ಧಿಯಾಗದ ಪ್ರಕೃತಿ, ಸುಂದರವಾದ ಕಡಲತೀರಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದಾಗಿ ಗೋವಾವನ್ನು ಪರಿಪೂರ್ಣ ತಾಣವೆಂದು ಕಂಡುಕೊಂಡರು.

ಹಿಪ್ಪಿಗಳಂತೆ ಹಲವಾರು ಪ್ರವಾಸಿಗರು ಗೋವಾಕ್ಕೆ ಬರುತ್ತಿದ್ದಾರೆ ಎಂದಾದಲ್ಲಿ ಗೋವಾದ ಸರಳತೆ ಅಲ್ಲಿನ ಜನರ ಹೊಂದಿಕೊಳ್ಳುವಿಕೆ ಹಾಗೂ ಆಹಾರ ವಿಹಾರಗಳನ್ನು ತುಂಬಾ ಇಷ್ಟಪಟ್ಟಿದ್ದಾರೆ ಎಂದರ್ಥವಾಗಿದೆ. ಗೋವಾ ಹಿಪ್ಪಿಗಳಿಗೆ ಮಾತ್ರವಲ್ಲದೆ ಪ್ರವಾಸಿಗರು, ಎಲ್ಲಾ ಭಾರತೀಯರಿಗೂ ನೆಚ್ಚಿನ ತಾಣ ಎಂದೆನಿಸಿದೆ.

ಗೌರವ ಹಾಗೂ ಆದರಗಳಿಗೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಹಿಪ್ಪಿಗಳು ಪ್ರತಿಯೊಬ್ಬರಿಗೆ ಹೇಗೆ ಗೌರವ ನೀಡಬೇಕು ಹೇಗೆ ಅದನ್ನು ಮರಳಿ ಪಡೆಯಬೇಕು ಎಂಬುದನ್ನು ಅರಿತುಕೊಂಡಿದ್ದಾರೆ.

ಪ್ರವಾಸೋದ್ಯಮವು ಗೌರವವನ್ನು ಆಧರಿಸಿದ್ದು, ಗೌರವ ಇದ್ದಲ್ಲಿ ಪ್ರವಾಸದೋದ್ಯಮ ಬೆಳೆಯುತ್ತದೆ ಎಂಬುದಕ್ಕೆ ಇದು ಒಂದು ಸಾಕ್ಷಿಯಾಗಿದೆ.

ಹಿಪ್ಪಿಗಳು ಗೋವಾವನ್ನು ಪ್ರಮುಖ ತಾಣವಾಗಿ ಅಭಿವೃದ್ಧಿಗೊಳಿಸುವಲ್ಲಿ ಪಾತ್ರ ವಹಿಸಿದ್ದಾರೆ. ಸ್ವಚ್ಛತೆ, ಮಾನವತಾವಾದ ಹಾಗೂ ಸ್ಥಳೀಯ ಜೀವನಶೈಲಿಗಳ ಅಂಶದ ಮೇಲೆ ಹಿಪ್ಪಿಗಳು ಬೆಳಕು ಚೆಲ್ಲಿದ್ದಾರೆ. ಹಿಪ್ಪಿ ಸಂಸ್ಕೃತಿಗೆ ಗೋವಾ ಉತ್ತಮ ಕೊಡುಗೆಯಾಗಿ ನಿಂತಿದೆ.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *