ಬಾಗೇಪಲ್ಲಿಯಲ್ಲಿ 206ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶ
1 min readಬಾಗೇಪಲ್ಲಿಯಲ್ಲಿ 206ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶ
15 ಸಾವಿರಕ್ಕೂ ಹೆಚ್ಚು ದಂಡ ವಿಧಿಸಿದ ಪುರಸಭೆ
ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿದರೂ ಪುನರಾವರ್ತನೆ
ಬಾಗೇಪಲ್ಲಿ ಪಟ್ಟಣದ ಡಿ.ವಿ.ಜಿ.ಮುಖ್ಯ ರಸ್ತೆಯ ಕೆಲ ಅಂಗಡಿಗಳ ಮೇಲೆ ಚಿಕ್ಕಬಳ್ಳಾಪುರ ಪೊಲೀಸ್ ಭದ್ರತೆ ಹಾಗೂ ಪುರಸಭೆ ಸಿಬ್ಬಂದಿ ಜೆಂಟಿ ಕಾರ್ಯಚರಣೆ ನಡೆಸಿ, ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು.

ಸರ್ಕಾರದ ಆದೇಶದಂತೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಯಾರೂ ಉಪಯೋಗಿಸಬಾರದು ಎಂದು ಪುರಸಭೆಯಿಂದ ಈ ಹಿಂದೆಯೇ ಜಾಗೃತಿ ಮೂಡಿಸಿದ್ದರೂ, ಕೆಲ ಅಂಗಡಿ ಮಾಲೀಕರು ಇನ್ನೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ 15ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
15 ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 206 ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಂಡಿರುವುದಾಗಿ ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ 106 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೆ 15,700 ದಂಡ ವಿಧಿಸಲಾಯಿತು. ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿ ವೇಳೆ ಹಿರಿಯ ಆರೋಗ್ಯ ನಿರೀಕ್ಷಕಿ, ಪುರಸಭೆ ಸಿಬ್ಬಂದಿ ಅತಾವುಲ್ಲಾ, ಹಾಜರಿದ್ದರು.