ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸಿ ಹೋರಾಟಕ್ಕೆ ಕರೆ
1 min readಎಡಮಟ್ಟೆ ಸೇವೆ ಮಾಡಲು ಅಣಿಯಾಗಿ ಎಂದ ಶಾಸಕ ಕೃಷ್ಣಪ್ಪ
ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸಿ ಹೋರಾಟಕ್ಕೆ ಕರೆ
ಸರ್ಕಾರದ ಹಠದ ವಿರುದ್ಧ ಆಕ್ರೋಶ ಹೊರ ಹಾಕಿದ ಶಾಸಕ
ರೈತರ ಎಡೆಮಟ್ಟೆ ಮುರಿಯುತ್ತದೆಯೋ ಸರಕಾರದ ಲಾಠಿ ಮುರಿಯುತ್ತದೆಯೋ ನೋಡೇ ಬಿಡೋಣ ಎಂದು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ತಾಲೂಕಿನ ರೈತರಿಗೆ ಕರೆ ನೀಡಿದ್ದಾರೆ. ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕರು ಮಾತನಾಡಿದರು.
ರೈತರ ಎಡೆಮಟ್ಟೆ ಮುರಿಯುತ್ತದೆಯೋ ಸರಕಾರದ ಲಾಠಿ ಮುರಿಯುತ್ತದೆಯೋ ನೋಡೇ ಬಿಡೋಣ ಎಂದು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ತಾಲೂಕಿನ ರೈತರಿಗೆ ಕರೆ ನೀಡಿದ್ದಾರೆ. ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕರು ಮಾತನಾಡಿದರು. ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಹೇಮಾವತಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಕಾಮಗಾರಿ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಕೋರಿದ್ದಾರೆ. ಇದು ಸರ್ಕಾದ ಅಭಿಪ್ರಾಯವಾಗಿದ್ದು, ಕಾಮಗಾರಿ ಮಾಡುಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ಮಾಗಡಿ ಭಾಗದ ಮೂರು ಟಿಎಂಸಿ ನೀರು ಅವರು ಕೊಂಡೊಯ್ಯಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಇತ್ತೀಚಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಲು ಬಿಡುವುದಿಲ್ಲ, ನಮ್ಮ ಪಾಲಿನ ನೀರು ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಆದರೂ ಸರ್ಕಾರ ಹಠಕ್ಕೆ ಬಿದ್ದು, ಕೆಲ ಶಾಸಕರಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರ ಮಾಡಿದ್ದು, ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಕೆಲಸ ಮಾಡುತ್ತೇವೆ ಎನ್ನುವುದು ಮೂರ್ಖತನ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದರು.
ಈ ಭಾಗದ ರೈತರು 500 ಟ್ರಕ್‌ನಲ್ಲಿ ಎಡೆಮಟ್ಟೆ ತಂದು ನಿಲ್ಲಿಸಿ ಹೋರಾಟ ಮಾಡೋಣ, ಈ ನೀರಾವರಿ ಹೋರಾಟದಲ್ಲಿ ರೈತರು ಗೆಲ್ಲುತ್ತಾರೋ, ಸರ್ಕಾರ ಗೆಲ್ಲುತ್ತದೆಯೋ ನೋಡೇಬಿಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದರು. ರೈತರ ಎದುರು ಲಾಠಿ ಗೆಲ್ಲಲು ಸಾಧ್ಯವಿಲ್ಲ. ಎಡೆಮಟ್ಟೆ ಸೇವೆ ಮಾಡಲು ರೈತರು ಸಿದ್ದರಿದ್ದಾರೆ. ಯಾವುದೇ ಕಾರಣಕ್ಕೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ರೈತರೊಂದಿಗೆ ಸಂಘರ್ಷ ಮಾಡಿಕೊಳ್ಳಬೇಡಿ ಎಂದು ಪೊಲೀಸ್ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ನಮ್ಮ ಹೋರಾಟ ಸರ್ಕಾರದ ವಿರುದ್ಧ, ಪೊಲೀಸರ ವಿರುದ್ಧ ಅಲ್ಲ. ಎಲಾ ರೈತರು ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಿ, ನಾಳೆ ಕರೆದಿರುವ ಸಭೆಯಲ್ಲಿ ತೀರ್ಮಾನ ಏನಾಗುತ್ತದೆ ಎಂದು ಕಾದು ನೋಡೋಣ ಎಂದು ಶಾಸಕರು ತಿಳಿಸಿದರು. ಸರ್ಕಾರ ರೈತರ ವಿರುದ್ಧ ಲಾಠಿ ತೋರಿಸಿದರೆ ರೈತರು ಕೈಕಟ್ಟಿ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಮುನಿಯೂರು ರಂಗಸ್ವಾಮಿ, ರಾಘು, ಪರಮೇಶ್, ಸೋಮನಹಳ್ಳಿ ಶಿವಾನಂದ್ ಇದ್ದರು.