ವಿರಾಟ್ ಕೊಹ್ಲಿ ಜೊತೆ ರಾಗಿಣಿ ಫೋಟೋ ವೈರಲ್: ಆ ದಿನ ನಿಜಕ್ಕೂ ಆಗಿದ್ದೇನು..?
1 min readಐಪಿಎಲ್ 6 ವೇಳೆ ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿ ಹಾಗೂ ವಿರಾಟ್ ಕೊಹ್ಲಿಯ ಫೋಟೊ ಒಂದು ವೈರಲ್ ಆಗಿತ್ತು. ಪಂದ್ಯವೊಂದರ ವೇಳೆ ವಿರಾಟ್ ಕೊಹ್ಲಿಯ ಹಿಂದೆ ರಾಗಿಣಿ ಶಾರ್ಟ್ ಡ್ರೆಸ್ ತೊಟ್ಟು ನಿಂತಿದ್ದರು. ಆ ವೇಳೆ ರಾಗಿಣಿಯ ಕಾಲುಗಳನ್ನು ವಿರಾಟ್ ಕೊಹ್ಲಿ ನೋಡುತ್ತಿರುವಂತೆ ಕಾಣುವ ಫೋಟೊ ಕ್ಲಿಕ್ ಮಾಡಲಾಗಿತ್ತು.
ಆ ಫೋಟೊ ಎಲ್ಲೆಡೆ ವೈರಲ್ ಆಗಿತ್ತು.
ಈ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಜೆ ರಾಜೇಶ್ ಜೊತೆಗಿನ ಸಂದರ್ಶನದಲ್ಲಿ ನಟಿ ರಾಗಿಣಿ ಮಾತನಾಡಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ ಫಸ್ಟ್ ಗರ್ಲ್ ಫ್ರೆಂಡ್ ರಾಗಿಣಿ ಎನ್ನುವ ಗೂಗಲ್ ಸರ್ಚ್ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಆ ರೀತಿ ಏನು ಇಲ್ಲ. ನಮಿಬ್ಬರಿಗೂ ಪರಸ್ಪರ ಪರಿಚಯವೇ ಇಲ್ಲ. ಆ ಸಮಯದಲ್ಲಿ ನಾನು ಆರ್‌ಸಿಬಿ ಅಂಬಾಸಿಡರ್ ಆಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಮ್ಯಾಚ್‌ಗೆ ಹೋಗಿದ್ದೆ. ನನಗೆ ಇನ್ನೂ ನೆನಪಿದೆ. ನಾನು ಕಾಯಿನ್ ಟಾಸ್ ಮಾಡುವಾಗ ಮೈದಾನಕ್ಕೆ ಹೋಗಿದ್ದೆ.
ಕಾಯಿನ್ ಟಾಸ್ ನಡೆಯುವಾಗ ನಾನಿದ್ದೆ, ವಿರಾಟ್ ಕೊಹ್ಲಿ ಇದ್ದರು, ಮತ್ತೊಂದು ಟೀಂ ಆಟಗಾರ ಎಲ್ಲರೂ ಇದ್ದರು. ಅದು ಎರಡು ಮೂರು ನಿಮಿಷದ ಘಟನೆ ಆಗಿತ್ತು. ಒಬ್ಬ ಫೋಟೋಗ್ರಾಫರ್ ಯಾವುದೋ ಒಂದು ಆಯಂಗಲ್‌ನಲ್ಲಿ ತೆಗೆದ ಫೋಟೋ ತೆಗೆದಿದ್ದ. ಅದು ಹೇಗಿತ್ತು ಅಂದರೆ ವಿರಾಟ ಕೊಹ್ಲಿ ನನ್ನ ಕಾಲು ನೋಡುತ್ತಿದ್ದ ಹಾಗೇ ಇತ್ತು.
ನಿಮಗೆ ಗೊತ್ತಾ ಅಲ್ಲಿ ಆ ತರ ಏನೂ ಸೀನ್ ಇಲ್ಲ. ಆ ತರ ಸಂದರ್ಭ ಅಲ್ಲಿ ಇರಲಿಲ್ಲ. ನಮ್ಮ ಮಧ್ಯ ಮಾತುಕತೆನೂ ಇಲ್ಲ. ಯಾಕೆಂದರೆ ನಮಿಬ್ಬರಿಗೂ ಪರಸ್ಪರ ಪರಿಚಯವೇ ಇಲ್ಲ. ಅವರು ಕ್ಯಾಪ್ಟನ್ ಆಗಿ ನಿಂತಿದ್ದರು. ನಾನು ಅಂಬಾಸಿಡರ್ ಆಗಿ ನಿಂತಿದ್ದೆ ಅಷ್ಟೇ. ನಾವು ಹೆಚ್ಚೆಂದರೆ ಹಾಯ್ ಹಲೋ ಹೇಳಿರಬೇಕು ಅಷ್ಟೆ.
ಆ ಫೋಟೋ ಇಡೀ ದೇಶದ ಪತ್ರಿಕೆಯ ಮೊದಲ ಪುಟದಲ್ಲೇ ಬಂದಿತ್ತು. ಅದನ್ನು ನೋಡಿ ಇಂತ ಫೋಟೋ ಯಾಕೆ ಮೊದಲ ಪೇಜ್‌ನಲ್ಲಿ ಹಾಕಿದ್ದಾರೆ ಅನಿಸಿತು. ಇದು ಮೂರ್ಖತನ ಅಂತಾ ನಾನಂತೂ ನೆಗಲೆಕ್ಟ್ ಮಾಡದೆ. ಆದರೆ ಅದು ದೊಡ್ಡ ತಮಾಷೆಯಾಗಿತ್ತು. ಆದರೆ ಫೋಟೋಗ್ರಾಫರ್ ಕ್ರೆಯೆಟಿವಿಟಿ ಮೆಚ್ಚಬೇಕು. ಮಗಲಿ, ಎದ್ದು ಹೆಂಗೆ ತೆಗೆದಿದ್ದಾನೋ ಗೊತ್ತಿಲ್ಲ’ ಎಂದರು.
ಆ ಬಳಿಕ ನಾನು ವಿರಾಟ್ ಕೊಹ್ಲಿಯನ್ನು ಭೇಟಿ ಆಗಲೇ ಇಲ್ಲ. ನನ್ನ ಪ್ರಕಾರ ನಮ್ಮ ದೇಶದ ಅತ್ಯುತ್ತಮ ಕ್ರಿಕೆಟ್ ಆಟಗಾರ ಅವರು. ನನಗೆ ಕ್ರಿಕೆಟ್ ಜೊತೆ ಡೀಪ್ ಕನೆಕ್ಷನ್ ಇದೆ. ರಣಜಿ ಆಗಲೀ, ಕೆಸಿಎಲ್ ಆಗಲೀ, ಹುಬ್ಬಳ್ಳಿ ರಾಜ್ ಕಪ್ ಆಗಲೀ, ಐಪಿಎಲ್ ಆಗಲೀ ಕ್ರಿಕೆಟ್ ಜೊತೆ ನನ್ನ ಕನೆಕ್ಷನ್ ಚೆನ್ನಾಗಿದೆ ಎಂದು ಹೇಳಿದರು.