ಬಸವ ವಸತಿ ಯೋಜನೆ ಹಣ ಖಾತೆಗೆ ಜಮೆ
1 min readಬಸವ ವಸತಿ ಯೋಜನೆ ಹಣ ಖಾತೆಗೆ ಜಮೆ
ಫಲಾನುಭವಿ ಮರಣ ಹೊಂದಿದ್ದರೂ ಖಾತೆಗೆ ಹಣ ಜಮೆ
ದೊಡ್ಡಕವಲಂದೆ ಗ್ರಾಪಂ ಪಿಡಿಒ ವಿರುದ್ದ ದೂರು
ಬಸವ ವಸತಿ ಯೋಜನೆ ಫಲಾನುಭವಿ ಮೃತಪಟ್ಟು ಮೂರು ವರ್ಷಗಳು ಕಳೆದ ನಂತರ ಅವರ ಖಾತೆಗೆ ಬಿಲ್ ಹಣ ಜಮೆ ಮಾಡಿ, ಹಣವನ್ನು ಲಪಟಾಯಿಸಿ ಅಕ್ರಮವೆಸಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯ್ತಿ ಯಲ್ಲಿ ಬೆಳಕಿಗೆ ಬಂದಿದೆ.
ಬಸವ ವಸತಿ ಯೋಜನೆ ಫಲಾನುಭವಿ ಮೃತಪಟ್ಟು ಮೂರು ವರ್ಷಗಳು ಕಳೆದ ನಂತರ ಅವರ ಖಾತೆಗೆ ಬಿಲ್ ಹಣ ಜಮೆ ಮಾಡಿ, ಹಣವನ್ನು ಲಪಟಾಯಿಸಿ ಅಕ್ರಮವೆಸಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯ್ತಿ ಯಲ್ಲಿ ಬೆಳಕಿಗೆ ಬಂದಿದೆ. ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ಪಿಡಿಒ ನಿರ್ಮಲಾ ಅವರು ಕಾನೂನಿಗೆ ವಿರುದ್ದವಾಗಿ ಮೃತಪಟ್ಟ ಫಲಾನುಭವಿ ಖಾತೆಗೆ ೫೯.೬ ಸಾವಿರ ರುಪಾಯಿ ಜಮಾ ಮಾಡಿದ್ದಾರೆಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಮತ್ತು ಗಟ್ಟವಾಡಿಪುರ ಗ್ರಾಮದ ರಾಜೇಶ್ ಎಂಬುವರು ತಾಲ್ಲೂಕು ಪಂಚಾಯಿತಿ ಇಒ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದಾರೆ.
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಟವಾಡಿಪುರ ಗ್ರಾಮದ ಕೆಂಪಮ್ಮ ಅವರಿಗೆ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕಾಗಿ 20217-18ನೇ ಸಾಲಿನಲ್ಲಿ ಮಂಜೂರಾಗಿದೆ. ಜಿಪಿಎಸ್ ನಂತರ 1 ಮತ್ತು 2ನೇ ಬಿಲ್ ಅವರ ಖಾತೆಗೆ ಪಾವತಿಸಲಾಗಿದೆ. ಅನಾರೋಗ್ಯದ ಕಾರಣ ಕೆಂಪಮ್ಮ ಅವರು 2020ರ ಜನವರಿ 9 ರಂದು ಮೃತಪಟ್ಟಿದ್ದಾರೆ. ಹೀಗಿದ್ದರೂ ಪಿಡಿಒ ನಿರ್ಮಲಾ ಅವರು ಸರ್ಟಿಫೈ ಮಾಡಿ 2023ರ ಸೆಪ್ಟೆಂಬರ್ 8 ರಂದು ಮೃತ ಕೆಂಪಮ್ಮ ಅವರ ಖಾತೆಗೆ 59.6ಸಾವಿರ ರೂಗಳನ್ನು ಕಾನೂನಿಗೆ ವಿರುದ್ದವಾಗಿ ಜಮೆ ಮಾಡಿದ್ದಾರೆ.
ಆ ಹಣವನ್ನು ಬೇರೊಬ್ಬ ವ್ಯಕ್ತಿಯಿಂದ ಡ್ರಾ ಮಾಡಿಸಿ ಅಕ್ರಮ ಎಸಗಿದ್ದಾರೆ. ಅಲ್ಲದೆ ಪಂಚಾಯ್ತಿ ಕಚೇರಿಯ ಸಮಯ ಹೊರತುಪಡಿಸಿ ನಂಜನಗೂಡಿನ ಆರ್ಪಿ ರಸ್ತೆಯಲ್ಲಿರುವ ಕಂಪ್ಯೂಟರ್ ಸೆಂಟರ್ನಲ್ಲಿ ಯಾವುದೇ ಸಭೆ ನಡಾವಳಿಗಳನ್ನು ಮಾಡದೆ ಪಂಚಾಯ್ತಿ ಲಾಗಿನ್ ಬಳಸಿಕೊಂಡು 57ಕ್ಕೂ ಹೆಚ್ಚು ಇ- ಸ್ವತ್ತುಗಳನ್ನ ಮಾಡಿದ್ದಾರೆಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.
ಅಕ್ರಮ ಎಸಗಿರುವ ಪಿಡಿಒ ನಿರ್ಮಲಾ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ತನಿಖೆ ನಡೆಸಿ ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಇಲ್ಲವಾದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.