ಪೊಲೀಸ್ ಭದ್ರತೆಯಲ್ಲಿ ಮನೆಗಳ ತೆರವು ಮಾಡಿದ ಅಧಿಕಾರಿಗಳು
1 min readಪೊಲೀಸ್ ಭದ್ರತೆಯಲ್ಲಿ ಮನೆಗಳ ತೆರವು ಮಾಡಿದ ಅಧಿಕಾರಿಗಳು
ಕಳೆದ ನಾಲ್ಕು ವರ್ಷಗಳಿಂದ ತೆರವುಗೊಳಿಸದ ಮನೆಗಳು
ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳಿಂದ ಮನೆಗಳ ತೆರವು
ಕಳೆದ ನಾಲ್ಕು ವರ್ಷಗಳಿಂದ ಪರಿಹಾರದ ವಿಚಾರವಾಗಿ ನೆನೆಗುದಿಗೆ ಬಿದ್ದಿದ್ದ ಮನೆಗಳ ತೆರವು ಕಾರ್ಯಾಚರಣೆ ಕೊನೆಗೂ ನಡೆಯಿತು.
ತಿಪಟೂರು ತಾಲೂಕಿನ ಕರಡಿ ಗ್ರಾಮಕ್ಕೆ ಹೊಂದಿಕೊoಡಿರುವ ರಾಷ್ಟಿಯ ಹೆದ್ದಾರಿ 206ರ ಸರ್ವೇ ನಂ 205 ರಲ್ಲಿದ್ದ ಸುಮಾರು 15 ಹೆಚ್ಚು ಮನೆಗಳ ತೆರವಿಗೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಮತ್ತು ತಿಪಟೂರು ಪೊಲೀಸರ ಸಹಯೋಗದಲ್ಲಿ ಇಂದು ಕಾರ್ಯಾಚರಣೆ ನಡೆಸಿ, ತೆರವುಗೊಳಿಸಲಾಯಿತು.
ಕಳೆದ ನಾಲ್ಕು ವರ್ಷಗಳಿಂದ ಪರಿಹಾರದ ವಿಚಾರವಾಗಿ ನೆನೆಗುದಿಗೆ ಬಿದ್ದಿದ್ದ ಮನೆಗಳ ತೆರವು ಕಾರ್ಯಾಚರಣೆ ಕೊನೆಗೂ ನಡೆಯಿತು.
ತಿಪಟೂರು ತಾಲೂಕಿನ ಕರಡಿ ಗ್ರಾಮಕ್ಕೆ ಹೊಂದಿಕೊoಡಿರುವ ರಾಷ್ಟಿಯ ಹೆದ್ದಾರಿ 206ರ ಸರ್ವೇ ನಂ 215 ರಲ್ಲಿದ್ದ ಸುಮಾರು 15 ಹೆಚ್ಚು ಮನೆಗಳ ತೆರವಿಗೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಮತ್ತು ತಿಪಟೂರು ಪೊಲೀಸರ ಸಹಯೋಗದಲ್ಲಿ ಇಂದು ಕಾರ್ಯಾಚರಣೆ ನಡೆಸಿ, ತೆರವುಗೊಳಿಸಲಾಯಿತು. ಡಿವೈಎಸ್ಪಿ ವಿನಾಯಕ್, ತಹಸೀಲ್ದಾರ್ ಪವನ್ ಕುಮಾರ್ ನೆತೃತ್ವದಲ್ಲಿ ಮನೆಗಳ ತೆರವಿಗೆ ಪೊಲೀಸ್ ಬಂದೋಬಸ್ತಿನಲ್ಲಿ ತೆರವು ಕಾರ್ಯಚರಣೆ ಯಶಸ್ವಿಯಾಯಿತು.
ಹೆದ್ದಾರಿಗೆ ಹೋಗುವ ಜಾಗದಲ್ಲಿ ನಿರ್ಮಾಣವಾಗಿದ್ದ ನಿವಾಸಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, ಇದರಲ್ಲಿ ಹಲವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ತೆರವು ಕಾರ್ಯಾಚರಣೆ ವಿಳಭವಾಗಿತ್ತು. ಆದರೆ ನ್ಯಾಯಾಲಯದಲ್ಲಿಯೂ ತೆರವುಗೊಳಿಸಲು ಆದೇಶ ನೀಡಿದ ಕಾರಣ ಇಂದು ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು. ಈ ಸಂಬoಧ ಕರಡಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜ್ ಮಾತನಾಡಿ, ರಾಷ್ಟಿಯ ಹೆದ್ದಾರಿ ಕಾಮಗಾರಿ ಗ್ರಾಮದಲ್ಲಿ ನಡೆಯುತ್ತಿದ್ದು, ರಸ್ತೆಯ ಪಕ್ಕದಲ್ಲಿದ್ದ ಮನೆಗಳಿಂದ ಕಾಮಗಾರಿ ಸ್ಥಗಿತವಾಗಿತ್ತು ಎಂದರು.
ಮನೆಗಳನ್ನು ತೆರವುಗೊಳಿಸಲು ನಾಲ್ಕು ವರ್ಷಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ ಕೆಲ ವ್ಯಕ್ತಿಗಳು ಪರಿಹಾರದ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರಿಂದ ೪ ವರ್ಷಗಳಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಮನೆಗಳ ಮಾಲೀಕರಿಗೆ ಯಾವುದೇ ರೀತಿಯ ಪರಿಹಾರವೂ ದೊರಕಿಲ್ಲ. ಆದಷ್ಟು ಶೀಘ್ರ ಸಂಬoಧಪಟ್ಟ ಅಧಿಕಾರಿಗಳು ಕರಡಿ ಗ್ರಾಮದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತಹಸಿಲ್ದಾರ್ ಪವನ್ ಕುಮಾರ್ ಮಾತನಾಡಿ, ಕರಡಿ ಗ್ರಾಮದ ಮನೆಗಳ ಮಾಲೀಕರಿಗೆ ನಾಲ್ಕು ವರ್ಷಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಕೆಲ ವ್ಯಕ್ತಿಗಳು ಪರಿಹಾರದ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಿದ್ದರು. ನಂತರ ಹಣ ಬಿಡುಗಡೆಯಾಗಿದ್ದು, ಮನೆಗಳ ಮಾಲೀಕರು ದಾಖಲೆಗಳನ್ನು ನ್ಯಾಯಲಯಕ್ಕೆ ನೀಡಿ ಪರಿಹಾರ ಪಡೆಯುವಂತೆ ತಿಳಿಸಲಾಗಿತ್ತು. ಈವರೆಗೂ ಮನೆಯ ಮಾಲಿಕರು ನ್ಯಾಯಲಯಕ್ಕೆ ಯಾವುದೇ ರೀತಿಯ ದಾಖಲೆ ನೀಡಿಲ್ಲ ಎಂದು ತಿಳಿಸಿದರು.
ಒಟ್ಟಿನಲ್ಲಿ ದಾಖಲೆ ನೀಡದ ಕಾರಣಕ್ಕೆ ಮನೆ ಕಳೆದುಕೊಂಡವರಿಗೆ ಪರಿಹಾರವೂ ಸಿಗುವ ನಿರೀಕ್ಷೆ ಇಲ್ಲ ಎಂಬAತಾಗಿದ್ದು, ಅಧಿಕಾರಿಗಳು ಮನೆಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಭಾನುವಾರ ಸಂಜೆಯ ವೇಳೆಗೆ ಎಲ್ಲ ಮನೆಗಳ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲಿದ್ದು, ಹೆದ್ದಾರಿ ಕಾಮಗಾರಿಗೆ ಇದ್ದ ಅಡ್ಡಿ ತೊರೆದಂತಾಗಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday