ಆರ್ಯವೈಶ್ಯ ಮಂಡಳಿಯಿoದ ಆಹಾರ ಮೇಳ
1 min readಆರ್ಯವೈಶ್ಯ ಮಂಡಳಿಯಿoದ ಆಹಾರ ಮೇಳ
ಬಗೆ ಬಗೆಯ ತಿನಿಸುಗಳಿಂದ ಆಕ್ರಷಿತವಾದ ಮೇಳ
ಹಳೆಯ ತಿನಿಸುಗಳ ಜೊತೆ ಹೊಸ ತಿನಿಸುಗಳೂ ಸಾಥ್
ಸಂಜೆಯಾದ ಕೂಡಲೇ ಹೋಂ ಮೇಡ್ ಕುರುಕುಲು ತಿಂಡಿ, ಬಿಸಿ ಬಿಸಿ ಕಾಫಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಂತಹ ಬಗೆ ಬಗೆಯ ತಿಂಡಿಗಳ ಆಹಾರ ಮೇಳ ಎಂದರೆ ಯಾರು ತಾನೇ ಹೋಗಲ್ಲ. ಹೋದವರು ಸುಮ್ನೆ ಇರಲು ಸಾಧ್ಯವೇ ಏನೋ ಒಂದು ಖರೀದಿಸಿ ಬಾಯಿ ಚಪಲ ತೀರಿಸಿಕೊಳ್ಳಲೇ ಬೇಕಲ್ಲ, ಯಾಕೆ ಇಷ್ಟೆಲ್ಲಾ ತಿಂಡಿಗಳ ಬಗ್ಗೆ ಮಾತಾಡ್ತಿದ್ದಾರೆ ಅಂತ ಸಂದೇಹ ಬೇಡ. ನಾವು ಹೇಳಕ್ಕೆ ಹೊರಟಿರೋದೇ ತಿಂಡಿಗಳ ಬಗ್ಗೆ. ಅದರಲ್ಲೂ ಆಹಾರದ ಮೇಳೆದ ಬಗ್ಗೆ. ಹಾಗಾದ್ರೆ ಎಲ್ಲಿ ಇದೆ ಆಹಾರ ಮೇಳ ಅಂತ ಬಾಯಲ್ಲಿ ನೀರೂರಿಸಬೇಡಿ ಮುಂದೆ ನೋಡಿ.
ಎಲ್ಲಿ ನೋಡಿದರೂ ಮಾವಿನ ಹಣ್ಣಿನ ಗಮಲು. ಅಷ್ಟೇನಾ, ಮಾವಿನ ಹಣ್ಣಿನಲ್ಲಿ ಮಾಡಿದ ಪದಾರ್ಥಗಳೇ ಬಾಯಲ್ಲಿ ನೀರೂರಿಸುತ್ತಿದ್ದು. ಬರೋ ಎಲ್ಲರೂ ಯಾವುದೋ ಒಂದು ತಿಂಡಿ ಖರೀದಿ ಮಾಡೋದು, ಅದರಲ್ಲಿ ಮಾವಿನ ಹಣ್ಣಿನ ಪ್ಲೇವರ್ ಟೇಸ್ಟ್ ಮಾಡೋದು ಸಾಮಾನ್ಯವಾಗಿತ್ತು. ಇಷ್ಟಕ್ಕೂ ಈ ಆಹಾರ ಮೇಲೆ ಆಯೋಜಿಸಿದ್ದು ಚಿಕ್ಕಬಳ್ಳಾಪುರದ ವಾಸವಿ ಕಲ್ಯಾಣ ಮಂಟಪದಲ್ಲಿ. ವಾಸವಿ ಅಂದರೆ ವೈಶ್ಯರು, ವೈಶ್ಯರು ಅಂದರೆ ವ್ಯಾಪಾರ. ವ್ಯಾಪಾರದಲ್ಲಿ ಪುರುಷ ಮಹಿಳೆ ಎಂಬ ಬೇಧ ತೋರಿಸೋಕ್ಕೆ ಸಾಧ್ಯವೇ?
ಹಾಗಾಗಿಯೇ ವೈಶ್ಯ ಮಹಿಲಾ ವೃಂದದವರು ತಾವನು ಕಡಿಮೆ ಅಂತಾ ಈ ಆಹಾರ ಮೇಳ ಆಯೋಜಿಸಿದ್ದರು. ಆಹಾರ ಮೇಳದಲ್ಲಿ ಎಲ್ಲ ರೀತಿಯ ಪದಾರ್ಥಗಳನ್ನು ತಯಾರು ಮಾಡುವ ಜೊತೆಗೆ, ಅವುಗಳನ್ನು ಶಿಸ್ತಾಗಿ ಗ್ರಾಹಕರಿಗೆ ವಿತರಿಸುವುದನ್ನೂ ಮಾಡಿದರು. ಮಾತ್ರವಲ್ಲ, ತಿಂಡಿ ಖರೀದಿಸಿದ ಗ್ರಾಹಕರಿಂದ ಹಣ ವಸೂಲಿ ಮಾಡುವುದನ್ನೂ ಮರೆಯಲಿಲ್ಲ. ಆ ಮೂಲಕ ವ್ಯಾಪಾರ ವಹಿವಾಟು ನಡೆಸುವಲ್ಲಿ ತಾವೇನು ಕಡಿಮೆ ಇಲ್ಲ ಎಂಬುದನ್ನು ವಾಸವಿ ಮಂಡಳಿಯ ಮಹಿಳೆಯರು ತೋರಿಸಿಕೊಟ್ಟರು.
ಇನ್ನು ಮೇಳದಲ್ಲಿ ಯಾವ ಯಾವ ಪದಾರ್ಥ ಮಾಡಲಾಗಿತ್ತು ಅನ್ನೋದನ್ನ ಹೇಳಿದರೆ ನಿಮ್ಮ ಬಾಯಲ್ಲಿಯೂ ನ ಈರೂರಬಹುದು. ಈಗ ಹೇಳಿ ಕೇಳಿ ಮಾವಿನ ಕಾಯಿ ಸೀಜನ್. ಮಾವಿನ ಕಾಯಿ ಮತ್ತು ಹಣ್ಣಿನ ಪದಾರ್ಥ ಇಲ್ಲದೆ ಆಹಾರ ಮೇಳ ನಡೆಯಲು ಸಾಧ್ಯವೆ? ಅದರಲ್ಲೂ ಮಾವು ಹಣ್ಮುಗಳ ರಾಜ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಂತಹ ಹಣ್ಮಿನ ಸೀಸಜನ್‌ನಲ್ಲಿ ಮಾವಿನ ಹಣ್ಣಿಲ್ಲದೆ ಯಾವುದೇ ಪದಾರ್ಥ ಮಾಡಿದರೆ ಅದಕ್ಕೆ ಪ್ರಾಮುಖ್ಯತೆ ಬರೋದಾದ್ರೂ ಹೇಗೆ? ಅಲ್ಲವೇ, ಹಾಗಾಗಿಯೇ ಪಾನಿಪೂರಿಯಿಂದ ನುಚ್ಚಿನ ಉಂಡೆವರೆಗೂ ಎಲ್ಲ ಪದಾರ್ಥಗಳಲ್ಲಿಯೂ ಮಾವು ರಾರಾಜಿಸುತ್ತಿತ್ತು.
ಮಾವು ಜಾಮೂನು, ಮಾವು ನುಚ್ಚಿನ ಉಂಡೆ, ಮಾವು ಪಾನಿಪೂರಿ ಹೀಗೆ ಮಾವಿನಿಂದಲೇ ತಯಾರಿಸಿದೆ ಬಗೆ ಬಗೆಯ ತಿನಿಸುಗಳು ಬಾಯಲ್ಲಿ ನೀರೂರಿಸುತ್ತಿದ್ದರೆ, ಮತ್ತೊಂದು ಕಡೆ ನೇರಳೆಯೂ ತಾನೇನು ಕಮ್ಮಿ ಎಂದು ರಾರಾಜಿಸಿತ್ತು. ಕಪ್ಪು ಸುಂದರಿಯಾದ ನೇರಳೆ ಹಣ್ಣಿನಲ್ಲಿ ಮಾಡಿದ ಪದಾರ್ಥಗಕಳನ್ನು ಸವಿದ ಗ್ರಾಹಕರಂತೂ ಫುಲ್ ಖುಷಿಯಾಗಿದ್ರು. ಇವೆಲ್ಲ ನವ ನವೀನ ತಿನಿಸುಗಳು, ಹಳಬರು ಅಂದ್ರೆ ಅದೇ ಕಣ್ರೀ ವಯೋವೃದ್ಧರು ಬಂದ್ರೆ ಏನಿದೆ ಇಲ್ಲಿ ತಿನ್ನಲು ಅಂತ ಹುಬ್ಬೇರಿಸಬೇಡಿ ಹಳೇ ಕಾಲದ ತಿನಿಸುಗಳಿಗೂ ಆಹಾರ ಮೇಲದಲ್ಲಿ ಮೇಲ್ಪಂಕ್ತಿ ಹಾಕಲಾಗಿತ್ತು.
ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿಯಿಂದ ಬಗೆ ಬಗೆಯ ಹಳೆಯ ಕಾಲದ ಪದಾರ್ಥಗಳನ್ನು ಸಿದ್ಧಪಡಿಸಿ, ಮಾರಾಟಕ್ಕೆ ಇಡಲಾಗಿತ್ತು. ಇನ್ನು ಬೆಲೆ ಅಂತೀರಾ, ಅದು ಕೂಡಾ ಹೊರಗಿನ ಮಾರುಕಟ್ಟೆಗಿಂತ ಇಲ್ಲಿ ಕಡಿಮೆಯೇ ಆಗಿತ್ತು. ಹಾಗಾದರೆ ಇಂದು ಹೋಗಿ ತಿಂಡಿ ತಿಂದು ಬರೋಣ ಅಂತ ರೆಡಿಯಾಗೋದು ಬೇಡ. ಯಾಕೆಂದರೆ ಇದು ಒಂದು ದಿನಕ್ಕೆ ಮಾತ್ರ ಸೀಮಿತವಾದ ಆಹಾರ ಮೇಳ. ಅದು ಶನಿವಾರ ಸಂಜೆಯೇ ಮುಕ್ತಾಯವಾಗಿದೆ.