ಚರಂಡಿ ಸ್ವಚ್ಛತೆ ಮಾಡಲು ಹೋಗಿ ಮನೆ ಕೆಡವಿದ ನಗರಸಭೆ ಜೆಸಿಬಿ
1 min readಅಭಿವೃದ್ಧಿ ಮಾಡಲು ಹೋಗಿ ಹಾಳು ಮಾಡಿದರು!
ಚರಂಡಿ ಸ್ವಚ್ಛತೆ ಮಾಡಲು ಹೋಗಿ ಮನೆ ಕೆಡವಿದ ನಗರಸಭೆ ಜೆಸಿಬಿ
ಶೌಚಾಲಯಗಳೂ ನೆಲಸಮ, ಮಹಿಳೆಯರು, ವೃದ್ಧರ ಪರದಾಟ
ಕೂಡಲೇ ಪರಿಹಾರದ ಜೊತೆಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹ
ಚಿಕ್ಕಬಳ್ಳಾಪುರ ನಗರಸಭೆ ಗ್ರಹಚಾರವೇ ಸರಿಯಿಲ್ಲದಂತಿದೆ. ನಗರದ ಅಭಿವೃದ್ಧಿ ಮಾಡಲು ಹೋದರೂ ಅದು ಹಾಳಾಗುತ್ತಿದೆ. ಅಭಿವೃದ್ಧಿ ಮಡಾದ ಆರೋಪಗಳು ತೀವ್ರವಾದ ಹಿನ್ನೆಲೆಯಲ್ಲಿ ಅಭಿವೃದ್ಧಿ ಮಾಡಲು ಹೋದ ನಗರಸಭೆ ಜೆಸಿಬಿಗಳು ಬಡವರ ಮನೆ ಕೆಡವಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲಾ, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಶೌಚಾಲಯ ಕೆಡವಿದ ಬಗ್ಗೆ ಸ್ಥಳೀಯರಿಂದ ನಗರಸಭೆಗೆ ಶಾಪ ಹಾಕುವ ಸ್ಥಿತಿಯೂ ನಿರ್ಮಾಣವಾಗಿದೆ. ಹಾಗಾದರೆ ಆಗಿದ್ದೇನು ಅಂತೀರಾ? ನೀವೇ ನೋಡಿ.
ವೀಕ್ಷಕರೇ, ಇಲ್ಲಿ ಕಾಣ್ತಾ ಇದೆಯಲ್ಲಾ, ಈ ಅರ್ಧ ಕುಸಿದ ಕಟ್ಟಡ? ಇದನ್ನೊಮ್ಮೆ ನೋಡಿ, ಇದು ಮಳೆ ಅವಾಂತರದಿAದಲೋ, ಇಲ್ಲ, ಭೂಕಂಪದಿAದಲಪೋ ಕುಸಿದ ಮನೆಯಲ್ಲ. ಬದಲಿಗೆ ನಗರಸಭೆ ಜೆಸಿಬಿ ಮಾಡಿದ ಎಡವಟ್ಟಿನಿಂದ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಅದೇ ರಾತ್ರಿ ವೇಳೆಯೋ, ಇಲ್ಲವೇ ಮನೆಯಲ್ಲಿ ಜನ ಇರುವಾಗಲೋ ಇದೇ ರೀತಿಯ ಅವಾಂತರ ಸಂಭವಿಸಿದ್ದರೆ ಪರಿಸ್ಥಿತಿ ಏನು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಇಷ್ಟಕ್ಕೂ ಇಲ್ಲಿ ಆಗಿದ್ದೇನು ಅಂತೀರಾ? ಪ್ರಸ್ತುತ ಮಳೆಗಾಲ ಆರಂಭವಾಗಿದೆ. ಚಿಕ್ಕಬಳ್ಳಾಪುರ ನಗರಪದಾದ್ಯಂತ ಚರಂಡಿಗಳು ಕಟ್ಟಿಕೊಂಡಿವೆ. ಅವುಗಳ ಸ್ವಚ್ಛತೆಗೆ ನಗರಸಭೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ನಗರಸಭೆ ವಿರುದ್ಧ ತೀವ್ರವಾಗಿದ್ದವು. ಇದರಿಂದ ರೋಸಿಹೋದ ನಗರಸಭೆ ಅಧಿಕರಿಗಳು ಮತ್ತು ವಾರ್ಡಿನ ಸದಸ್ಯರು ಚರಂಡಿಗಳ ಸ್ವಚ್ಛತೆಗೆ ಮುಂದಾಗಿದ್ದಾರೆ. ಆದರೆ ಈ ಸ್ವಚ್ಛತೆ ಮಾಡಿದ ಜಾಗವೇ ಇಲ್ಲಿ ಸಮಸ್ಯೆ ಎದುರಾಗಲು ಕಾರಣವಾಗಿದೆ ಎಂಬುದು ವಿಶೇಷ.
ಚಿಕ್ಕಬಳ್ಳಾಪುರ ನಗರದ ೬ನೇ ವಾರ್ಡಿನ ಪ್ರಶಾಂತನಗರದಲ್ಲಿರುವ ಕೊಳಚೆ ಪ್ರದೇಶದಲ್ಲಿ ಚರಂಡಿಯ ಮೇಲೆಯೇ ಜನರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವರು ಚರಂಡಿಯ ಮೇಲೆ ಶೌಚಾಲಯ, ಸ್ನಾನ ಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಂಜಿ ರಸ್ತೆಯ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಿAದ ಆರಂಭವಾಗುವ ಈ ಕೊಳಚೆ ಪ್ರದೇಶ ಪ್ರಶಾಂತನಗರದವರೆಗೂ ಮುಂದುವರಿದಿದ್ದು, ಬಹುತೇಕ ಮನೆಗಳು, ಶೌಚಾಲಯಗಳು ಮತ್ತು ಸ್ನಾನಗೃಹಗಳನ್ನು ಚಂರಡಿಯ ಮೇಲೆಯೇ ನಿರ್ಮಿಸಿಕೊಳ್ಳಲಾಗಿದೆ.
ಅದರಲ್ಲೂ ಬಯಲು ಶೌಚಮುಕ್ತ ನಗರವಾಗಿ ಚಿಕ್ಕಬಳ್ಳಾಪುರ ಖ್ಯಾತಿ ಪಡೆಯಿತಲ್ಲಾ, ಆ ಸಮಯದಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಅನುದಾನ ನೀಡಿದ ಕಾರಣ ಮನೆ ಚಿಕ್ಕದಾಗಿದ್ದರೂ ಮನೆಯ ಮುಂದಿನ ಚರಂಡಿಯ ಮೇಲೆಯೇ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಹೀಗೆ ಚರಂಡಿಗಳ ಮೇಲೆ ನಿರ್ಮಿಸಿಕೊಳ್ಳುವಾಗಲೇ ಜನರಿಗೆ ಅರಿವು ಮೂಡಿಸಿದ್ದರೆ ಇಂದು ಸಮಸ್ಯೆಯೇ ಎದುರಾಗುತ್ತಿರಲಿಲ್ಲ. ಅಂದು ಮತಗಳಿಗಾಗಿ ಸುಮ್ಮನನಿದ್ದ ಜನಪ್ರತಿನಿಧಿಗಳು ಇದೀಗ ಸಮಸ್ಯೆ ಎದುರಾದಾಗ ಕೈ ಹಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ.
ಶೌಚಾಲಯ ಸೇರಿದಂತೆ ಮನೆಗಳು ಚರಂಡಿಯ ಮೇಲೆ ನಿರ್ಮಿಸಿಕೊಂಡಿರುವ ಕಾರಣ ಕಳೆದ ಹಲವಾರು ವರ್ಷಗಳಿಂದ ಚರಂಡಿಯ ಸ್ವಚ್ಛತೆ ಮಾಡಿಲ್ಲ. ವರ್ಷಗಟ್ಟಲೆ ಸ್ವಚ್ಛತೆ ಮಾಡದ ಕಾರಣ ಚರಂಡಿಗಳಲ್ಲಿ ಹೂಳು ತುಂಬಿಕೊAಡು, ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಇದರಿಂದ ೬ನೇ ವಾರ್ಡಿನ ಸದಸ್ಯರು ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಆದರೆ ಅದು ಈಗ ಅವರಿಗೇ ಸಮಸ್ಯೆಯಾಗಿ ತಿರುಗಿಬಿದ್ದಿದೆ.
ಶನಿವಾರ ಜೆಸಿಬಿಗಳ ಮೂಲಕ ಪ್ರಶಾಂತನಗರದ ಚರಂಡಿಯ ಸ್ವಚ್ಛತೆಗೆ ನಗರಸಭೆ ಅಧಿಕಾರಿಗಳು ಮತ್ತು ವಾರ್ಡಿನ ಸದಸ್ಯರು ಮುಂದಾಗಿದ್ದಾರೆ. ಚರಂಡಿಯನ್ನು ಆಳವಾಗಿ ತೋಡಿದ ಪರಿಣಾಮ ಚರಂಡಿಯ ಪಕ್ಕದಲ್ಲಿಯೇ ಬಡವರು ನಿರ್ಮಿಸಿಕೊಡಂಇದ್ದ ಮನೆಗಳ ಅಡಿಪಾಯಗಳು ಅಲುಗಾಡಿವೆ. ಇದರಿಂದ ಮಧ್ಯಾಹ್ನದ ವೇಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಈ ಮನೆಯಲ್ಲಿ ೫ ಮಂದಿ ಹಿರಿಯರು ಮತ್ತು ನಾಲ್ಕು ಮಂದಿ ಮಕ್ಕಳು ವಾಸ ಮಾಡುತ್ತಿದ್ದು, ಮಕ್ಕಳು ಶಾಲೆಗೆ, ಮನೆ ಮಾಲೀಕರು ಕೂಲಿ ಕೆಲಸಕ್ಕೆ ಹೋಗಿದ್ದ ಕಾರಣ ಮನೆ ಕುಸಿದ ವೇಳೆ ಯಾವುದೇ ಅವಾಂತರ ನಡೆದಿಲ್ಲ.
ಇನ್ನು ಕೊಳಚೆ ಪ್ರದೇಶದ ಚರಂಡಿಯ ಮೇಲೆಯೇ ಮನೆ ಮತ್ತು ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದು, ಹೀಗೆ ನಿರ್ಮಿಸಿಕೊಂಡಿರುವ ಸುಮಾರು ೧೦ಕ್ಕೂ ಹೆಚ್ಚು ಮನೆಗಳ ಶೌಚಾಲಯಗಳನ್ನು ಕೆಡವಲಾಗಿದೆ. ಇದರಿಂದ ಶೌಚಾಲಯ ಕಳೆದುಕೊಂಡ ಮಹಿಳೆಯರ ಪಾಡು ಹೇಳತೀರದಾಗಿದೆ. ಇಲ್ಲಿ ಶೌಚಾಲಯ ತೆರುವು ಮಾಡುವುದಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸ್ವಚ್ಛತೆಗೆ ಮುಂದಾಗಬೇಕಿದ್ದ ನಗರಸಭೆ ಯಾವುದೇ ಪರ್ಯಚಾಯ ವ್ಯವಸ್ಥೆ ಕಲ್ಪಿಸದೆ ಕಾರ್ಯಾಚರಣೆ ನಡೆಸಿದ್ದು, ಇದೀಗ ೧೦ಕ್ಕೂ ಹೆಚ್ಚು ಕುಟುಂಬಗಳು ಶೌಚಾಲಯ ಮತ್ತು ಸ್ನಾಗೃಹಗಳಿಲ್ಲದೆ ಪರದಾಡುವಂತಾಗಿದೆ.
ಮನೆ ಕುಸಿದ ವಿಚಾರ ತಿಳಿದು ನಗರಸಭೆ ಆಯುಕ್ತರಾದ ಮಂಜುನಾಥ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮನೆ ಕಳೆದುಕೊಂಡ ಕುಟುಂಬಕ್ಕೆ ಮನೆ ಪುನರ್ ನಿರ್ಮಿಸಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ನಗರಸಭೆ ಉಧ್ಧೇಶಪೂರ್ವಕವಾಗಿ ಮಾಡಿದ್ದಲ್ಲ, ಬದಲಿಗೆ ಚರಂಡಿ ಸ್ವಚ್ಛ ಮಾಡುವ ವೇಳೆ ಅವಘಡ ಸಂಭವಿಸಿದೆ. ಆದರೂ ಬಡವರಾದ ಕಾರಣ ಅವರಿಗೆ ಮನೆ ದುರಸ್ತಿಗಾಗಿ ನಗರಸಭೆಯಿಂದ ಪರಿಹಾರ ನೀಡುವುದಾಗಿ ಅವರು ಹೇಳಿದ್ದಾರೆ.
ಮನೆ ಕುಸಿದ ಕುಟುಂಬಸ್ಥರು ಇದಗೀಗ ಬೀದಿ ಪಾಲಾಗಿದ್ದು, ಅವರ ಮನೆಯನ್ನು ಆದಷ್ಟು ಶೀಘ್ರದಲ್ಲಿ ಪುನರ್ ನಿರ್ಮಿಸಿಕೊಡಬೇಕಾದ ಹೊಣೆ ಇದೀಗ ನಗರಸಭೆ ಮೇಲಿದ್ದು, ಇದರ ಜೊತೆಗೆ ಶೌಚಾಲಯ ಕಳೆದುಕೊಂಡವರಿಗೆ ಪರ್ಯಾಯವಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕಾದ ಜವಾಬ್ದಾರಿಯೂ ನಗರಸಭೆ ಮೇಲಿದೆ. ಆದರೆ ಈ ಬಗ್ಗೆ ಆ? ಉಕ್ತರೂ ಈವರೆಗೂ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂಬುದು ವಿಶೇಷ.
ಮುಖ್ಯವಾಗಿ ಇಲ್ಲಿ ಮತ್ತೊಂದು ಆರೋಪವೂ ಸ್ಥಳೀಯ ನಿವಾಸಿಗಳಿಂದ ಕೇಳಿಬಂದಿದೆ. ೬ನೇ ವಾರ್ಡಿನ ನಗರಸಭೆ ಸದಸ್ಯರು ರುಕ್ಮಿಣಿ ಮುನಿರಾಡು ಎಂಬುವರಾಗಿದ್ದು, ಅವರು ಗೆದ್ದ ದಿನದಿಂದ ವಾರ್ಡಿನ ಕಡೆ ಮುಖವೇ ಹಾಕಿಲ್ಲ ಎಂದು ಕೊಳಚೆ ಪ್ರದೇಶದ ನಿವಾಸಿಗಳು ಅಳವತ್ತುಕೊಡಂಇದ್ದಾರೆ. ಪ್ರತಿ ವಿಚಾರಕ್ಕೂ ಪತಿ ಮುನಿರಾಜು ಅವರೇ ಬರುತ್ತಿದ್ದು, ಇಂತಹ ಅವಾಂತರಗಳಿಗೆ ಕಾರಣವಾಗಿದೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮೀಸಲಾತಿ ನಡೀಉವ ಸರ್ಕಾರ ಪತಿಯರು ಅಧಿಕಾರ ಚಲಾವಣೆ ಮಾಡುತ್ತಿದ್ದರೂ ನಿಯಂತ್ರಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಶೌಚಾಲಯ ತೆರವು ಮಾಡುವ ಬಗ್ಗೆಯಾಗಲೀ, ಚರಂಡಿ ಸ್ವಚ್ಛತೆ ಮಾಡುವ ಬಗ್ಗೆಯಾಗಲೀ ನಗರಸಭಾ ಸದಸ್ಯರು ಯಾವುದೇ ಮಾಹಿತಿ ನೀಲ್ಲ. ಬಡವರಿಗೆ ಶೌಚಾಲಯದಂತಹ ಪರ್ಯಾಯ ವ್ಯವಸ್ಥೆಯೂ ಮಾಡದೆ ಚರಂಡಿ ಸ್ವಚ್ಛತೆ ಮಾಡಿ, ಬಡವರಿಗೆ ತೊಂದರೆ ನೀಡಿದ್ದಾರೆ. ಅಲ್ಲದೆ ಮಹಿಳೆಯರು ಶೌಚಕ್ಕೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರು ಮನವಿ ಮಾಡಿದರೂ ಕೇಳದ ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವಾಂತರಕ್ಕೆ ಕಾರಣವಾಗಿದೆ ಎಂದು ನೊಂದವರು ಆರೋಪಿಸಿದ್ದಾರೆ.
ಅಲ್ಲದೆ ಚರಂಡಿ ಸ್ವಚ್ಛತೆ ಸೇರಿದಂತೆ ಯಾವುದೇ ಅಭಿವೃದ್ಧಿಗೆ ಯಾರೂ ಅಡ್ಡಿ ಮಡಾಉತ್ತಿಲ್ಲ, ಬದಲಿಗೆ ಮಹಿಳೆಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅಭಿವೃದ್ಧಿ ಮಾಡಬೇಕಿತ್ತು. ಅದನ್ನು ಮಾಡದೆ ಬಡವರ ಮೇಲೆ ದೌರ್ಜನ್ಯ ಎಸಗಿರುವುದು ಅನ್ಯಾಯವಾಗಿದ್ದು, ಮನೆ ಕಲೆದುಕೊಂಡವರಿಗೆ ಕೂಡಲೇ ಪರಿಹಾರ ನೀಡುವ ಜೊತೆಗೆ ಶೌಚಾಲಯಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕೂಡಲೇ ಕಲ್ಪಿಸಬೇಕೆಂದು ಸ್ಥಳೀಯರು ಕೋರಿದ್ದಾರೆ.