ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಬಂಧನ
1 min readಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಬಂಧನ
ಕಳ್ಳರಿoದ ಚಿನ್ನ ಖರೀದಿಸಿದ ಆರೋಪದಡಿ ಮತ್ತೆ ಬಂಧನ
ಇಬ್ಬರು ಕದ್ದ ಚಿನ್ನ ಖರೀದಿಸಿದಕ್ಕೆ ಅಟ್ಟಿಕಾ ಗೋಲ್ಡ್ ಮಾಲೀಕ
ಇಬ್ಬರು ಕಳ್ಳರು ಕದ್ದ ಚಿನ್ನವನ್ನು ಖರೀದಿ ಮಾಡಿದ ಆರೋಪದಡಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಮತ್ತೊಮ್ಮೆ ಬಂಧನವಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇಂದು ಮುಂಜಾನೆ ಬಾಬು ಅವರನ್ನು ಬಂಧಿಸಿ ಕರೆತಂದಿದ್ದಾರೆ.
ಇಬ್ಬರು ಕಳ್ಳರು ಕದ್ದ ಚಿನ್ನವನ್ನು ಖರೀದಿ ಮಾಡಿದ ಆರೋಪದಡಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಮತ್ತೊಮ್ಮೆ ಬಂಧನವಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇಂದು ಮುಂಜಾನೆ ಬಾಬು ಅವರನ್ನು ಬಂಧಿಸಿ ಕರೆತಂದಿದ್ದಾರೆ. ಮೊನ್ನೆಯಷ್ಟೇ ತುರುವೇಕೆರೆ ಪೊಲೀಸರು ಬೆಂಗಳೂರಿಗೆ ಬಂದು ಬಾಬುರನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದ ಅಟ್ಟಿಕಾ ಬಾಬುರನ್ನು ದೊಡ್ಡಬಳ್ಳಾಪುರ ಪೊಲೀಸರು ಕೂಡಲೆ ಬಂಧಿಸಿದ್ದಾರೆ.
ಇಬ್ಬರು ಕಳ್ಳರು ಕಳ್ಳತನ ಮಾಡಿದ ಚಿನ್ನದ ಮಾಲು ಖರೀದಿ ಆರೋಪದಲ್ಲಿ ಬಾಬು ಬಂಧನವಾಗಿದೆ. ಬೊಮ್ಮನಹಳ್ಳಿ ಬಾಬು ಸೇರಿದಂತೆ ಮೂವರ ಬಂಧನವಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬಾಬು ಬಂಧಿಸಿರುವ ಪೊಲೀಸರು ಇಂದು ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಪೊಲೀಸ್ ಠಾಣೆ ಮುಂದೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಪ್ರತಿಕ್ರಿಯಿಸಿದ್ದಾರೆ.
2016 ರಲ್ಲಿ ನಾನು ಅಟ್ಟಿಕಾ ಗೋಲ್ಡ್ ಕಂಪನಿಗೆ ರಿಸೈನ್ ಮಾಡಿದ್ದೇನೆ. ವಿನಾಕಾರಣ ಪೊಲೀಸರು ನನ್ನನ್ನು ಟಾರ್ಗೆಟ್ ಮಾಡಿ ಸುಳ್ಳು ಕೇಸ್ ದಾಖಲು ಮಾಡುತ್ತಿದ್ದಾರೆ. ಕೆಲ ಕೇಸ್‌ಗಳಲ್ಲಿ ನಾನು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ. ಆದರೂ ನನ್ನನ್ನು ಕೇಸ್‌ಗಳಲ್ಲಿ ಸಿಕ್ಕಿಸುವ ಸಂಚು ನಡೆಯುತ್ತಿದೆ, ಇದು ರಾಜಕೀಯ ಪಿತೂರಿ ಎಂದರು.