ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆಯೋಜನೆ
1 min readಜುಲೈ 23 ರಿಂದ ಜಾತವಾರದಲ್ಲಿ ಮದ್ಯವರ್ಜನ ಶಿಬಿರ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆಯೋಜನೆ
ಸಾಮಾಜದಲ್ಲಿ ಕಂಡು ಬರುವ ದುಶ್ಚಟಗಳನ್ನು ನಿರ್ಮೂಲನೆ ಮಾಡಿ, ಮದ್ಯವರ್ಜನೆ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಜುಲೈ 23 ರಿಂದ ಜಾತವಾರ ಗ್ರಾಮದಲ್ಲಿ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಪ್ರಶಾಂತ್ ತಿಳಿಸಿದರು.
ಸಾಮಾಜದಲ್ಲಿ ಕಂಡು ಬರುವ ದುಶ್ಚಟಗಳನ್ನು ನಿರ್ಮೂಲನೆ ಮಾಡಿ, ಮದ್ಯವರ್ಜನೆ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಜುಲೈ 23 ರಿಂದ ಜಾತವಾರ ಗ್ರಾಮದಲ್ಲಿ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಪ್ರಶಾಂತ್ ತಿಳಿಸಿದರು. ಚಿಕ್ಕಬಳ್ಳಾಪುರ ನಗರದ ಪೂರ್ಣಪ್ರಜ್ಞ ಪಿ.ಯು ಕಾಲೇಜಿನಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ ಹಾಗು ಜಿಲ್ಲಾ ಜನಜಾಗೃತಿ ವೆದಿಕೆಯಿಂದ ಮಾಧಕ ವಸ್ತುಗಳ ವಿರೋದಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕ ಪ್ರಶಾಂತ್, ರಾಜ್ಯದಲ್ಕಿ ಶಾಂತಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತೊಡಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಸಮಾಜಿಕ ಕಾರ್ಯಕ್ರಮಗಳನ್ನ ನಡೆಸುತ್ತಾ ಮನೆ ಮಾತಾಗಿದೆ. ಸಮಾಜಿಕ ಪಿಡುಗುಗಳಾದ ಮಾದಕ ವಸ್ತುಗಳ ಸೇವನೆ, ತಂಬಾಕು ನಿಷೇಧ ಹಾಗು ಮದ್ಯವರ್ಜನೆಯಂತ ಕಾರ್ಯಕ್ರಮಗಳನ್ನ ನಡೆಸುತ್ತಿದ್ದು, ರಾಜ್ಯಾಧ್ಯಾಂತ ಈವರೆಗೂ 1800 ಕ್ಕೂ ಹೆಚ್ಚು ವದ್ಯವರ್ಜನ ಶಿಬಿರ ನಡೆಸಲಾಗಿದೆ ಎಂದರು.
ಜುಲೈ 23 ರಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಜಾತವಾರದಲ್ಲಿ ಮತ್ತೊಂದು ಮದ್ಯವರ್ಜನೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಒಂದು ವಾರ ನಡೆಯುವ ಶಿಬಿರದಲ್ಲಿ 80 ರಿಂದ 100 ಜನರಿಗರ ಕುಡಿತ ಬಿಡಿಸುವ ಕಾರ್ಯಕ್ರಮ ನಡೆಯುತ್ತದೆ ಎಂದರು.
ಮಾದಕ ವಸ್ತುಗಳ ವಿರೋಧಿ ದಿನಾಚರಣೆಯಲ್ಲಿ ನಗರ ಠಾಣೆ ಪಿ.ಎಸ್.ಐ ನಂಜುoಡಯ್ಯ ಮಾತನಾಡಿ, ಹದಿಹರೆಯದ ವಯಸ್ಸು ದುಶ್ಚಟಗಳ ಕಡೆ ಹೋಗದಿರಲಿ, ಮಾದಕ ವಸ್ತುಗಳ ಸೇವನೆ ನಮ್ಮ ಜೀವನದ ಶತ್ರು ಅನ್ನೋ ಅರಿವು ನಿಮಗಿರಬೇಕು. ಗಾಂಜಾ ಅಫೀಮು ಅಭ್ಯಾಸ ಮಾಡಿಕೊಂಡರೆ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುವುದಕ್ಕೆ ದಾರಿ ಮಾಡಿಕೊಡುತ್ತವೆ. ಬೀಡಿ ಸಿಗರೇಟು, ಗಾಂಜಾ ತಂಬಾಕು ಸೇವೆನೆಯಲ್ಲಿ ಲೀನವಾಗಿರುವ ನಿಮ್ಮ ಪೋಷಕರಿಗೂ ನೀವೇ ಅರಿವು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರುವುದಾಗಿ ಪ್ರಮಾಣ ವಚನ ಭೋದಿಸಲಾಯಿತು. ವೇದಿಕೆಯಲ್ಲಿ ಪೂರ್ಣ ಪ್ರಜ್ಞ ಕಾಲೇಜು ಅಧ್ಯಕ್ಷ ಎನ್ ವೆಂಕಟೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾರಾಯಣಸ್ವಾಮಿ, ತಾಲ್ಲೂಕು ಯೋಜನಾಧಿಕಾರಿ ಧನಂಜಯ್, ವ್ಯವಸ್ಥಾಪಕ ಮಹೇಶ್ ಇದ್ದರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday