ಧೂಳುಮಯವಾದ ಕೊತ್ತಪಲ್ಲಿ ರಸ್ತೆ, ನಾಗರಿಕರ ಪರದಾಟ
1 min readಧೂಳುಮಯವಾದ ಕೊತ್ತಪಲ್ಲಿ ರಸ್ತೆ, ನಾಗರಿಕರ ಪರದಾಟ
ಬಾಗೇಪಲ್ಲಿ ಪಟ್ಟಣದ 6ನೇ ವಾರ್ಡಿನ ಕೊತ್ತಪಲ್ಲಿ ರಸ್ತೆ
ಮಳೆ ಬಂದರೆ ಕೆಸರು, ಬಿಸಿಲು ಬಂದರೆ ಧೂಳಿನಿಂದ ಪರದಾಟ
ಬಾಗೇಪಲ್ಲಿ ಪಟ್ಟಣದ 6ನೇ ವಾರ್ಡ್ ಕೊತ್ತಪಲ್ಲಿ ರಸ್ತೆಯಲ್ಲಿ ಸಂಚರಿಸೋ ನಾಗರಿಕರು ನರಕ ಅನುಭವಿಸುವಂತಾಗಿದೆ. ಮಳೆ ಬಂದರೆ ಈ ರಸ್ತೆ ಸಂಪೂರ್ಣ ಕೆಸರುಮಯವಾಗಲಿದ್ದು, ಸಂಚರಿಸಲು ಜನರು ಪರದಾಡಬೇಕಿದೆ. ಇನ್ನು ಬಿಸಿಲು ಬಂದರೆ ಇದೇ ರಸ್ತೆ ಸಂಪೂರ್ಣ ಧೂಳುಮಯವಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇದರಂದ ನಾಗರಿಕರು ವರ್ಷ ಪೂರ್ತಿ ಸಮಸ್ಯೆ ಎದುರಿಸುವಂತಾಗಿದೆ.
ಬಾಗೇಪಲ್ಲಿ ಪಟ್ಟಣದ 6ನೇ ವಾರ್ಡಿನ ಕೊತ್ತಪಲ್ಲಿ ರಸ್ತೆಯಲ್ಲಿ ಆಳವಾದ ಗುಂಡಿಗಳು ಏರ್ಪಟ್ಟಿದ್ದು, ಮಳೆ ಬಂದರೆ ಈ ಗುಂಡಿಗಳ ತುಂಬಾ ನೀರು ತುಂಬುತ್ತದೆ. ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಆಗುತ್ತಿಲ್ಲ. ಈ ರಸ್ತೆ ಮೂಲಕ ಶಾಲೆಗೆ ಹೋಗುವ ಮಕ್ಕಳು ಹಾಗೂ ವೃದ್ಧರು ರಸ್ತೆಯಲ್ಲಿ ದಿನನಿತ್ಯ ಸಂಚರಿಸಲು ಅವ್ಯವಸ್ಥೆ ಪಡುತ್ತಿದ್ದಾರೆ. ಗುಂಡಿಗಳಲ್ಲಿ ನೀರು ತುಂಬಿದ್ದರೆ, ರಸ್ತೆ ತುಂಬಾ ಕೆಸರು ಮಯವಾಗಿ ಮಕ್ಕಳು ಶಾಲೆಗಳಿಗೆ ಹೋಗಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಕೊತ್ತಪಲ್ಲಿ ರಸ್ತೆಯಲ್ಲಿ ಮಳೆಗಾಲ ಬಂದರೆ, ಕೆಸರಿನಿಂದ ಸಮಸ್ಯೆ ಆದರೆ, ಮಳೆ ನಿಂತು ಬಿಸಿಲು ಬಂದು ರಸ್ತೆಯಲ್ಲಿರುವ ಕೆಸರು ಒಣಗಿದರೆ ಧೂಳಿನ ಸಮಸ್ಯೆ ಎದುರಾಗುತ್ತದೆ. ಮಣ್ಣು ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು, ಕೆಸರು ಮಿಶ್ರಿತ ಮಣ್ಣು ತುಂಬಿರುವ ಕಾರಣ ವಾಹನಗಳು ಸಾಗಿದರೆ, ಆವರಣ ಪೂರ್ತಿ ಧೂಳು ತುಂಬಿಕೊಳ್ಳುತ್ತದೆ. ಇನ್ನು ಮಲೆಗಾಲದಲ್ಲಾದರೆ ವಾಹನ ಗುಂಡಿಗೆ ಇಳಿದರೆ ಪಕ್ಕದಲ್ಲಿರುವ ಜನರ ಮೇಲೆ ಗುಂಡಿಯಲ್ಲಿರುವ ಜನರ ಎರಚುತ್ತದೆ.
ಯಂಗ್ ಇಂಡಿಯಾ ಶಾಲೆಯಿಂದ ಕೊತ್ತಪಲ್ಲಿ ವರೆಗೂ ರಸ್ತೆ ಸಂಪೂರ್ಣ ಗುಂಡಿಗಳಿoದ ಕೂಡಿದೆ. ಕೆಲವು ವಾಹನಗಳು ಸೀಮೆಎಣ್ಣೆ ಹಾಕಿಕೊಂಡು ಸಾಗುವ ವಾಹನಗಳು ಬಿಡುವ ಹೊಗೆಯಿಂದ ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಪರಿಸರ ಮಾಲಿನ್ಯದಿಂದ ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ನಡೆದಾಡಲು ಸಂಕಷ್ಟ ಪಡುತ್ತಿದ್ದಾರೆ. ಗುಳೂರು ರಸ್ತೆಯಿಂದ ಕೊತ್ತಪಲ್ಲಿ ವರಿಗೂ ಇದು ಮುಖ್ಯರಸ್ತೆಯಾಗಿದ್ದು, ಸಾರ್ವಜನಿಕರು ಸಂಚರಿಸಲು ಸಮಸ್ಯೆ ಆಗಿದೆ .
ಸುಮಾರು ವರ್ಷಗಳಿಂದ ಈ ರಸ್ತೆ ಗುಂಡಿಗಳಿoದ ಕೂಡಿದೆ, ರಸ್ತೆ ಕಾಮಗಾರಿ ಪೂರ್ತಿಯಾಗಿಲ್ಲ. ಸಾರ್ವಜನಿಕರು ಮಳೆ ಬಂದ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ. ಯಂಗ್ ಇಂಡಿಯಾ ಶಾಲೆ ಪಕ್ಕದಲ್ಲಿ ರಸ್ತೆಯಲ್ಲಿ ಆಳವಾದ ಗುಂಡಿ ಇದ್ದು ಗುಂಡಿಯಲ್ಲಿ ಯಥೇಚ್ಛವಾಗಿ ನೀರು ನಿಂತಿದೆ. ಆದ್ದರಿಂದ ಜನರು ಪರದಾಡಲು ತೊಂದರೆಯಾಗುತ್ತಿದೆ. ಹಾಗೂ ಅದೇ ರೀತಿ ಕೊತ್ತಪಲ್ಲಿ ವರೆಗೂ ರಸ್ತೆ ಪೂರ್ತಿ ಕಾಮಗಾರಿ ಆಗಿಲ್ಲ.
ಈ ಸಂಬoಧ ಬಾಗೇಪಲ್ಲಿ ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಇತ್ತ ಗಮನವೇ ಹರಿಸಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಪ್ರತಿನಿತ್ಯ ಪುರಸಭೆ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಸಂಬoಧಪಟ್ಟ ಅಧಿಕಾರಿಗಳು ಈಗಲಾದರೂ ಕಾಮಗಾರಿ ಪೂರ್ಣಗೊಳಿಸುವ ಮೂಲಕ ರಸ್ತೆಯಲ್ಲಿ ಮಾರುದ್ದ ಬಿದ್ದಿರುವ ಗುಂಡಿಗಳನ್ನು ಮುಚ್ಚಿ, ಈ ರಸ್ತೆಯನ್ನು ಧೂಳು ಮುಕ್ತ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.