ಪಿಎಂಶ್ರೀ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಯೋಗ ದಿನ
1 min readಪಿಎಂಶ್ರೀ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಯೋಗ ದಿನ
ಬಾಗೇಪಲ್ಲಿ ಸರ್ಕಾರಿ ಶಾಲೆಯಲ್ಲಿ 10ನೇ ವಿಶ್ವ ಯೋಗ ದಿನ
ಬಾಗೇಪಲ್ಲಿ ಪಟ್ಟಣದ ವಿವಿಧ ಶಾಲೆಗಳು ಹಾಗೂ ಪಿ.ಎಂ.ಶ್ರೀ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10ನೇ ಅಂತಾರಾಷ್ಟಿಯ ಯೋಗ ದಿನವನ್ನು ವಿವಿಧ ಭಂಗಿಯ ಯೋಗ ಪ್ರದರ್ಶಿಸುವ ಮೂಲಕ ಆಚರಣೆ ಮಾಡಲಾಯಿತು.
ಶಿಕ್ಷಣ ಸಮನ್ವಯ ಅಧಿಕಾರಿ ವೆಂಕಟರಾಮ್ ಮಾತನಾಡಿ, ಆರೋಗ್ಯವಂತ ಜನತೆ ದೇಶದ ಶಕ್ತಿಯಾಗಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಈ ದಿನ ಯೋಗದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಉತ್ತಮ ಆಹಾರದ ಜೊತೆಗೆ ದೇಹ ದಂಡನೆಯ ಮೂಲಕ ನಮ್ಮ ಆರೋಗ್ಯವನ್ನು ಸದೃಢಗೊಳಿಸುವ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ, ಅರ್ಧಚಕ್ರಾಸನ, ವೀರಭದ್ರಾಸನ, ಪ್ರಾಣಾಯಾಮ, ಧ್ಯಾನ ಹೀಗೆ ಯೋಗ ನಾನಾ ಆಸನಗಳನ್ನು ಸಾಮೂಹಿಕವಾಗಿ, ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಶಾಲೆಯಲ್ಲಿ 10 ನೇ ಅಂತಾರಾಷ್ಟಿಯ ಯೋಗ ದಿನಾಚರಣೆ ಶುಕ್ರವಾರ ಉತ್ಸಾಹದಿಂದ ಆಚರಿಸಲಾಯಿತು.
ಬಾಗೇಪಲ್ಲಿ ಬಿಇಒ ತನುಜಾ ಮಾತನಾಡಿ, ಯೋಗ ನಮ್ಮ ದೈನಂದಿನ ಬದುಕಿಗೆ ಅಗತ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು. ಯೋಗಾಸನವನ್ನು ನಿಯಮಿತವಾಗಿ ಮಾಡುವ ಮೂಲಕ ಅನೇಕ ಕಾಯಿಲೆಗಳನ್ನು ದೂರ ಮಾಡಬಹುದಾಗಿದೆ. ಅಲ್ಲದೇ ಆರೋಗ್ಯಕರ ಸಮಾಜಕ್ಕೂ ಕೂಡ ಇದು ಪೂರಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾದ್ಯಕ್ಷ ಆರ್. ಹನುಮಂತ ರೆಡ್ಡಿ, ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ಕೆ.ವರ್ಣಿ,ಯೋಗ ಶಿಕ್ಷಕ ರಘುನಾಥ ರೆಡ್ಡಿ, ಈಶ್ವರಪ್ಪ, ಅರುಣೋದಯ ಶಾಲೆಯ ಉಮಾದೇವಿ, ಶಿವಪ್ಪ, ಮಂಜುನಾಥ್, ಬಾಗೇಪಲ್ಲಿ ಪಟ್ಟಣದ ಪೋಲಿಸ್ ಸಿಬ್ಬಂದಿ ಇದ್ದರು.