ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ಸಿಂಗ್ ನಿಜ್ಜರ್ಗೆ ಕೆನಡಾ ಸಂಸತ್ತಿನಲ್ಲಿ ಶ್ರದ್ಧಾಂಜಲಿ; ಭಾರತದ ಕೌಂಟರ್ ಹೀಗಿದೆ
1 min readಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿರುವುದು ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಹದಗೆಡಿಸಿದೆ. ಈ ನಡುವೆ ಕೆನಡಾ ಸಂಸತ್ತು ನಡೆದುಕೊಂಡಿರುವ ರೀತಿ ವಿವಾದಾಸ್ಪದವಾಗಿದೆ.
ನಿಜ್ಜರ್ ಹತ್ಯೆಯಾಗಿ ಒಂದು ವರ್ಷವಾದ ಕಾರಣ ಕೆನಡಾ ಸಂಸತ್ತಿನಲ್ಲಿ ಸಂತಾಪ ಸೂಚಕ ಕಾರ್ಯಕ್ರಮ ನಡೆಸಿದ್ದಾರೆ. ಆ ದೇಶದ ಸಂಸತ್ತಿನಲ್ಲಿ ಎಲ್ಲ ಸಂಸದರು ಎದ್ದು ನಿಂತು ಮೌನಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊ ನೋಡಿ ಆ ದೇಶದ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ದೇಶದ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ದೇಶವೊಂದು ಭಯೋತ್ಪಾದಕ ಎಂದು ಘೋಷಿಸಿ ಇಂಟರ್‌ಪೋಲ್ ವಾಂಟೆಡ್ ಲಿಸ್ಟ್‌ಗೆ ಸೇರಿರುವುದು ಇದೇ ಮೊದಲು ಎಂದು ಕೆಲವು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಕುರಿತು ಭಾರತ ತನ್ನದೇ ಶೈಲಿಯಲ್ಲಿ ಕೌಂಟರ್ ನೀಡಿದೆ. ಉಗ್ರವಾದಕ್ಕೆ ರಾಜಕೀಯ ಜಾಗವನ್ನು ನೀಡುವ ಯಾವುದೇ ಕ್ರಮವನ್ನು ನಾವು ವಿರೋಧಿಸುತ್ತೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನ್ಸುಲೇಟ್ ಜನರಲ್, ಭಾರತವು ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ ಮತ್ತು ಈ ಜಾಗತಿಕ ಬೆದರಿಕೆಯನ್ನು ನಿಭಾಯಿಸಲು ಎಲ್ಲ ರಾಷ್ಟ್ರಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏರ್ ಇಂಡಿಯಾ ಕಾನಿಷ್ಕಾವನ್ನು ಸ್ಫೋಟಿಸಿ 39 ವರ್ಷಗಳಾಗಿದೆ. 2024 ಜೂನ್ 23, ಏರ್ ಇಂಡಿಯಾದಲ್ಲಿ ಹೇಡಿತನದ ಭಯೋತ್ಪಾದಕ ಬಾಂಬ್ ದಾಳಿಯ 39ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಭಯೋತ್ಪಾದಕರ ಹೇಡಿತನದಿಂದ 329 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾಗರಿಕ ವಿಮಾನಯಾನ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ಅಪಘಾತವಾಗಿದೆ ಎಂದು ಹೇಳಿದ್ದಾರೆ.
ಅದಷ್ಟೆ ಅಲ್ಲದೆ, 23 ಜೂನ್ 2024ರಂದು ನಾವು ವ್ಯಾಂಕೋವರ್‌ನ ಸ್ಟಾನ್ಲಿ ಪಾರ್ಕ್‌ನಲ್ಲಿರುವ ಸೆಪರ್ಲಿ ಪ್ಲೇಗ್ರೌಂಡ್‌ನಲ್ಲಿ ಏರ್ ಇಂಡಿಯಾ ಮೆಮೋರಿಯಲ್ ಸರ್ವೀಸ್ ಅನ್ನು ನಡೆಸುತ್ತೇವೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಾವು ವಲಸೆ ಭಾರತೀಯರನ್ನು ವಿನಂತಿಸುತ್ತೇವೆ ಎಂದು ರಾಯಭಾರ ಕಚೇರಿ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದೆ.
1985ರಲ್ಲಿ ಏರ್ ಇಂಡಿಯಾ ‘ಕಾನಿಷ್ಕಾ’ ವಿಮಾನವನ್ನು ಸಿಖ್ ಪ್ರತ್ಯೇಕತಾವಾದಿಗಳು ಸ್ಫೋಟಿಸಿದರು. ಇದರಲ್ಲಿ 329 ಜನರು ಪ್ರಾಣ ಕಳೆದುಕೊಂಡರು. ಕೆನಡಾದ ಸಂಸತ್ತಿನಲ್ಲಿ ನಿಜ್ಜರ್ಗೆ ಸಂತಾಪ ಸೂಚಿಸುವ ಕಾರ್ಯಕ್ರಮವನ್ನು ಆಯೋಜಿಸಿದ ನಂತರ ಕಾನ್ಸುಲೇಟ್ ಜನರಲ್ನಿಂದ ಈ ಪ್ರಕಟಣೆ ಹೊರಬಿದ್ದಿದೆ. (ಏಜೆನ್ಸೀಸ್)
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday