ದರ್ಶನ್ ಪ್ರಕರಣದಲ್ಲಿ ಯಾವ ಪಕ್ಷದವರಾದರೂ ತಪ್ಪಿತಸ್ಥರಿಗೆ ಶಿಕ್ಷೆ : ಪರಮೇಶ್ವರ್
1 min readಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಬಿಜೆಪಿ ಅಥವಾ ಕಾಂಗ್ರೆಸ್ ಎಂದು ಪಕ್ಷದ ಆಧಾರದ ಮೇಲೆ ನೋಡುವುದಿಲ್ಲ. ಯಾವ ತಪ್ಪು ನಡೆದಿದೆ ಎಂಬ ಪುರಾವೆ ಮೂಲಕವೇ ಕ್ರಮ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ನಟ ದರ್ಶನ್, ಇತರ ನಾಲ್ಕು ಜನರನ್ನು ಒಂದು ವಾರ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು, ನ್ಯಾಯಾಲಯ ಎರಡು ದಿನ ಕಸ್ಟಡಿಗೆ ನೀಡಿದೆ.
ಅಷ್ಟರಲ್ಲಿ ತನಿಖೆ ಮುಗಿದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದರು.
ಬಿಜೆಪಿ ಶಾಸಕರೊಬ್ಬರೊಬ್ಬರ ಸಂಬಂಧಿ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷದ ಆಧಾರದ ಮೇಲೆ ಈ ಪ್ರಕರಣವನ್ನು ನೋಡುವುದಿಲ್ಲ. ತಪ್ಪಿತಸ್ಥರು ಯಾರೇ ಇರಲಿ, ಯಾವ ಪಕ್ಷದಲ್ಲೇ ಇರಲಿ ಅದು ಮುಖ್ಯವಲ್ಲ. ಒಂದು ವೇಳೆ ನಮದೇ ಪಕ್ಷದಲ್ಲಿ ಇದ್ದರೂ ಮಾಡಿರುವ ತಪ್ಪನ್ನಷ್ಟೆ ನೋಡುತ್ತೇವೆ. ಇಲ್ಲಿ ಪಕ್ಷದ ವಿಷಯ ತರಲು ಬಯಸುವುದಿಲ್ಲ ಎಂದರು.
ಪ್ರಕರಣದಲ್ಲಿ ಪ್ರಭಾವ ಬೀರಲು ಈವರೆಗೂ ಯಾರು ಮಧ್ಯ ಪ್ರವೇಶಿಸಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನನ್ನ ಬಳಿಯಾಗಲಿ, ಮುಖ್ಯಮಂತ್ರಿಯಾಗಲಿ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.ನಟ ದರ್ಶನ್ ನ್ಯಾಯಾಂಗ ಬಂಧನಕ್ಕೆ ಹೋದಾಗ ಜೈಲಿನಲ್ಲಿ ಎಲ್ಲಾ ರೀತಿಯ ಸವಲತ್ತುಗಳು ಇರುತ್ತವೆ ಎಂಬ ಚರ್ಚೆಗಳು ನಡೆಯುತ್ತಿರಬಹುದು. ಆದರೆ ಆ ರೀತಿ ವಿಶೇಷ ಸೌಲಭ್ಯ ಸಿಗದಂತೆ ಎಚ್ಚರಿಕೆ ವಹಿಸಲಾಗುವುದು.
ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ಆರೋಪವನ್ನು ನಾನು ಅಲ್ಲಗಳೆಯುವುದಿಲ್ಲ. ಹಿಂದೆಲ್ಲಾ ಮೊಬೈಲ್ ಸೇರಿದಂತೆ ಅನೇಕ ವಸ್ತುಗಳು ಸಿಗುತ್ತವೆ ಎಂದು ತಿಳಿದು ಬಂದಿದೆ.. ಜೈಲಿನ ಅಧಿಕಾರಿಗಳಿಗೆ ಆ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸುತ್ತೇವೆ. ಕಾಲಕಾಲಕ್ಕೆ ಅಧಿಕಾರಿಗಳು ಕ್ರಮ ಬದ್ಧ ಗೊಳಿಸುತ್ತಾರೆ. ಆದರೂ ಕಣ್ಣು ತಪ್ಪಿಸಿ ತೆಗೆದುಕೊಂಡು ಹೋಗುವುದು ನಡೆದಿದೆ ಎಂದರು.
ಅಯೋಧ್ಯೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ್ದಾರೆ ಎಂಬ ಕಾರಣಕ್ಕೆ ದಾಖಲಾದ ಪ್ರಕರಣದಲ್ಲಿ ಯು ಟೂಬರ್ ಅಜಿತ್ ಭಾರತಿಯನ್ನು ಬಂಧಿಸಲು ತೆರಳಿದ ಕರ್ನಾಟಕದ ಪೊಲೀಸರು ತಪ್ಪೇನು ಮಾಡಿಲ್ಲ ಎಂದು ಸಚಿವರು ಇದೇ ವೇಳೆ ಸಮರ್ಥಿಸಿಕೊಂಡರು.
ರಾಜ್ಯದಿಂದ ತೆರಳಿದ್ದ ಪೊಲೀಸರನ್ನು ತಡೆದಿರುವ ಉತ್ತರ ಪ್ರದೇಶದ ಪೊಲೀಸರು ಮೊದಲು ನೋಟಿಸ್ ಕೊಡಿ, ವಾರೆಂಟ್ ಇಲ್ಲದೆ ಬಂಧಿಸಬೇಡಿ ಎಂದಿದ್ದಾರೆ. ನಮ ಪೊಲೀಸರು ಮಫ್ತಿಯಲ್ಲಿ ಹೋಗಿದ್ದರು, ಸ್ಥಳೀಯ ಪೊಲೀಸ್ ಠಾಣೆಗೆ ಮೊದಲೇ ಮಾಹಿತಿ ನೀಡಬೇಕಿತ್ತು, ನೀಡಿಲ್ಲ. ಅಲ್ಲಿಗೆ ಹೋದ ಮೇಲೆ ವಿಷಯ ತಿಳಿಸಿ, ಸಹಾಯ ಪಡೆದಿದ್ದಾರೆ. ಆಗ ಉತ್ತರ ಪ್ರದೇಶದ ಪೊಲೀಸರು ನೋಟಿಸ್ ಕೊಡಿ ಎಂದಿದ್ದಾರೆ. ಅದರಂತೆ ನಮ ಪೊಲೀಸರು ನೋಟಿಸ್ ಕೊಟ್ಟು ಬಂದಿದ್ದಾರೆ. ಅಜಿತ್ ಭಾರತಿ ವಿಚಾರಣೆಗೆ ಹಾಜರಾಗಬೇಕು, ಇಲ್ಲವಾದರೆ ವಾರೆಂಟ್ ಪಡೆದು ಬಂಧಿಸಿ ಕರೆತರಲಾಗುವುದು. ಕೆಲವು ಸಂದರ್ಭದಲ್ಲಿ ಇಂತಹ ಗೊಂದಲಗಳಾಗುತ್ತವೆ ಎಂದು ಹೇಳಿದರು.
ವಾಲಿಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬ್ಯಾಂಕ್‌ನಲ್ಲಾಗಿರುವ ಲೋಪ ದೋಷಗಳ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಇಲಾಖಾ ಮಟ್ಟದಲ್ಲಾಗಿರುವ ತಪ್ಪು ಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚನೆ ಮಾಡಿದೆ. ಸಿಬಿಐ ಈವರೆಗೂ ರಾಜ್ಯ ಸರ್ಕಾರಕ್ಕೆ ಇಲಾಖೆಗಳ ತನಿಖೆಗೆ ಅನುಮತಿ ನೀಡಿ ಎಂದು ಪತ್ರ ಬರೆದಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 15 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಅಧ್ಯಕ್ಷರು ಆ ನಿಟ್ಟಿನಲ್ಲಿ ಹೈಕಮಾಂಡ್‌ಗೆ ಭರವಸೆ ನೀಡಿದ್ದರು. ಆದರೆ ನಿರೀಕ್ಷಿತ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಪಕ್ಷ ಆಡಳಿತದಲ್ಲಿ ಇದ್ದರೂ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿರುವುದಕ್ಕೆ ಆತಾವಲೋಕನ ನಡೆಯಲಿದೆ, ಹೈಕಮಾಂಡ್ ಸತ್ಯಶೋಧನಾ ಸಮಿತಿಯನ್ನು ರಚನೆ ಮಾಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಸಮಿತಿ ಯಾವ ವರದಿ ನೀಡಲಿದೆ, ಅದನ್ನು ಪರಿಗಣಿಸಿ ಪಕ್ಷದ ವರಿಷ್ಠರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡುತ್ತೇವೆ. ಸರ್ಕಾರ ಇರುವ ಕಡೆ ಮತ್ತು ಸರ್ಕಾರ ಇಲ್ಲದ ಕಡೆ ಬೇರೆ ಬೇರೆ ರೀತಿಯ ಕ್ರಮಗಳಾಗುತ್ತವೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅಥವಾ ತಾವೇ ಕಣಕ್ಕಿಳಿಯುವ ಇರಾದೆಯನ್ನು ಪಕ್ಷದ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಕ್ತ ಪಡಿಸಿದ್ದಾರೆ. ಅವರ ಸಹೋದರ ಡಿ.ಕೆ.ಸುರೇಶ್ ಲೋಕಸಭೆಯಲ್ಲಿ ಗೆಲ್ಲಬೇಕಿತ್ತು. ಸೋಲಾಗಿದೆ. ಹೀಗಾಗಿ ಮುಂದೆ ಜಿಲ್ಲೆಯನ್ನು ಭದ್ರ ಪಡಿಸಿಕೊಳ್ಳಲು ಯೋಚಿಸುತ್ತಿದ್ದಾರೆ ಎಂದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ನೆಲೆ ಇದೆ. ಹಿಂದೆ ಹಲವು ಬಾರಿಗೆ ನಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಸಾಂದರ್ಭಿಕವಾಗಿ ಮತದಾರರು ಬೇರೆಯವರನ್ನು ಆಯ್ಕೆ ಮಾಡಿರಬಹುದು. ನನ್ನ ಕ್ಷೇತ್ರದಲ್ಲೂ ಒಮೆ ಸೋಲು ಕಂಡಿದ್ದೇನೆ. ಮತ್ತೊಮೆ ಗೆದ್ದಿದ್ದೇನೆ. ಸೋಲು ಕಂಡಾಕ್ಷಣ ಮತದಾರರೇ ಇಲ್ಲ ಎಂದು ಭಾವಿಸಬೇಕಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಸೋತಿದ್ದು ಎನ್ನುವ ಮೂಲಕ ಸೋಲಿಸಿದ್ದು ಎಂಬ ವ್ಯಾಖ್ಯಾನಕ್ಕೆ ನಕಾರ ವ್ಯಕ್ತ ಪಡಿಸಿದರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday