ಮಾರಕಾಸ್ತ ಹಿಡಿದು ಮುಸುಕುಧಾರಿಗಳಿಂದ ದರೋಡೆಗೆ ಯತ್ನ
1 min readಮಾರಕಾಸ್ತ ಹಿಡಿದು ಮುಸುಕುಧಾರಿಗಳಿಂದ ದರೋಡೆಗೆ ಯತ್ನ
ಕಳ್ಳರ ಕಾಟಕ್ಕೆ ಬೆಚ್ಚಿಬಿದ್ದ ದಕ್ಷಿಣಕಾಶಿ ನಂಜನಗೂಡು
ಡಕಾಯಿತರ ಚಲನವಲನ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆ
ಪೊಲೀಸರು ಅಲರ್ಟ್ ಆಗದಿದ್ದರೆ ಅನಾಹುತ ಗ್ಯಾರಂಟಿ
ಇದು ನಂಜನಗೂಡು ಜನತೆಯನ್ನ ಬೆಚ್ಚಿಬೀಳಿಸೋ ಘಟನೆ. ಇಬ್ಬರು ಮುಸುಕುಧಾರಿಗಳು ಮಾರಕಾಸ್ತ ಹಿಡಿದು ದರೋಡೆಗೆ ಯತ್ನಿಸಿರುವ ಭಯಾನಕ ದೃಶ್ಯ. ಪೊಲೀಸರು ಅಲರ್ಟ್ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಗ್ಯಾರೆಂಟಿ ಎಂಬ ಪರಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿ ಗಸ್ತು ಟೈಟ್ ಮಾಡದಿದ್ದಲ್ಲಿ ದರೋಡೆಕೋರರು ಪೊಲೀಸರ ನಿದ್ದೆ ಕೆಡಿಸುವುದು ಗ್ಯಾರೆಂಟಿ.
ಇಬ್ಬರು ಮುಸುಕುಧಾರಿಗಳ ಚಲನವಲನಗಳನ್ನ ಗಮನಿಸಿದರೆ ನಂಜನಗೂಡಿನ ಜನತೆ ಕಂಗಾಲಾಗುವುದು ಗ್ಯಾರೆಂಟಿ. ಮೈಸೂರು ಜಿಲ್ಲಾ ಪೊಲೀಸರೇ ಇದು ನಿಮಗೆ ಎಚ್ಚರಿಕೆಯ ಗಂಟೆ. ಇಂದು ದರೋಡೆಕೋರರ ಸಂಚು ವಿಫಲವಾಗಿದೆ. ಹೀಗೆ ನಿರ್ಲಕ್ಷ ಮುಂದುವರೆದಲ್ಲಿ ಭಾರಿ ದಂಡ ಕಟ್ಟಬೇಕಾಗುತ್ತದೆ. ಮೈಸೂರು ಜಿಲ್ಲಾ ಪೊಲೀಸರೇ ಎಚ್ಚರ. ಇಷ್ಟಕ್ಕೂ ಆಗಿರುವುದೇನು ಎಂಬುದನ್ನು ನೀವೇ ನೋಡಿ.
ನಂಜನಗೂಡು ಪಟ್ಟಣದ ವಿದ್ಯಾನಗರ ಮತ್ತು ಗೌತಮ ಬಡಾವಣೆಗಳಲ್ಲಿ ನಿನ್ನೆ ತಡರಾತ್ರಿ ನಡೆದ ಬೆಳವಣಿಗೆ ಇದು. ಇಬ್ಬರು ಮುಸುಕು ದಾರಿಗಳು ಕೈಯಲ್ಲಿ ಮಾರಕಸ್ತ ಹಿಡಿದು ಮತ್ತೊಂದು ಕೈಯಲ್ಲಿ ಟಾರ್ಚ್ ಹಿಡಿದು ರಾಜಾರೋಷವಾಗಿ ಮನೆಗಳ ಮುಂದೆ ಓಡಾಡಿದ್ದಾರೆ. ಒಂದು ಮನೆಗೆ ನುಗ್ಗಿದ ಖದೀಮರು ಕೆಲಕಾಲ ಅಡ್ಡಾಡಿ ಬರಿಗೈಲಿ ಹಿಂದಿರುಗಿದ್ದಾರೆ. ಮನೆಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ. ಅದೃಷ್ಟವಶಾತ್ ನಿನ್ನೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದರೊಡೆಕೋರರ ಸ್ಕೆಚ್ ವಿಫಲವಾಗಿದೆ.
ಇತ್ತೀಚೆಗಂತೂ ನಂಜನಗೂಡು ವ್ಯಾಪ್ತಿಯಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ರಾತ್ರಿ ಪಾಳಿಯ ಪೊಲೀಸರ ಗಸ್ತು ಸ್ಥಗಿತವಾಗಿರುವುದೇ ಇಂತಹ ಪ್ರಕರಣಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ನಂಜನಗೂಡು ಪಟ್ಟಣದ ಆರ್.ಪಿ ರಸ್ತೆ ಮತ್ತು ಎಂ.ಜಿ ರಸ್ತೆಗಳಲ್ಲಿ ಹಾಡು ಹಗಲೇ ಮಹಿಳೆಯರ ಕುತ್ತಿಗೆಯಲ್ಲಿರುವ ಮಾಂಗಲ್ಯ ಸರ ಖದೀಮರು ಕಿತ್ತೊಯ್ಯುತ್ತಿದ್ದಾರೆ.
ಬ್ಯಾಂಕುಗಳಲ್ಲಿ ಹಣ ಡ್ರಾ ಮಾಡಿಕೊಳ್ಳಲು ಬಂದ ಜನರ ಲಕ್ಷ ಲಕ್ಷ ಹಣ ಕಳ್ಳರ ಪಾಲಾಗುತ್ತಿದೆ. ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಪ್ರಕರಣ ಇನ್ನೂ ಮಾಸದಿರುವಾಗಲೇ ದರೋಡೆಕೋರರ ಸಂಚು ಸಾರ್ವಜನಿಕರ ನೆಮ್ಮದಿ ಕೆಡಿಸಿದೆ. ನಂಜನಗೂಡು ಪಟ್ಟಣದ ವಿದ್ಯಾನಗರ ಮತ್ತು ಗೌತಮ ಬಡಾವಣೆಗಳಲ್ಲಿ ಒಬ್ಬಂಟಿಯಾಗಿ ವಾಸಿಸುವ ಮನೆಗಳೇ ಹೆಚ್ಚು ಇವೆ. ಇವುಗಳು ಖದೀಮರಿಗೆ ಟಾರ್ಗೆಟ್ ಆಗುತ್ತಿವೆ. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಭಾರಿ ಬೆಲೆ ಕಟ್ಟಬೇಕಾಗುತ್ತದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.