ಟೊಮೋಟೋ ಬೆಲೆ ಗಗನಕ್ಕೆ ರೈತರ ಖುಷಿ, ಗ್ರಾಹಕರಿಗೆ ಮತ್ತಷ್ಟು ಹುಳಿಯಾದ ಟೊಮೇಟೊ
1 min readಟೊಮೋಟೋ ಬೆಲೆ ಗಗನಕ್ಕೆ ರೈತರ ಖುಷಿ
ಗ್ರಾಹಕರಿಗೆ ಮತ್ತಷ್ಟು ಹುಳಿಯಾದ ಟೊಮೇಟೊ
850 ಮುಟ್ಟಿದ 15 ಕೆಜಿ ಟೊಮೇಟೋ ಬಾಕ್ಸ್ ಬೆಲೆ
ಟೊಮೇಟೊ ಬೆಲೆ ಏರಿಕೆ ಕಂಡಿರುವುದರಿoದ ಬಾಗೇಪಲ್ಲಿ ತಾಲ್ಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಪಟ್ಟಣದ ಎಪಿಎಂಸಿಯಲ್ಲಿ ಸದ್ಯ ಟೊಮ್ಯಾಟೊ ವಹಿವಾಟು ಜೋರಾಗಿದ್ದು, 05 ಕೆಜಿ ತೂಕದ ಟೊಮೇಟೊ ಬಾಕ್ಸ್ ಬುಧವಾರ 650 ರಿಂದ 850 ರೂಪಾಯಿವರೆಗೆ ಮಾರಾಟವಾಗಿದೆ.
ಟೊಮೇಟೊ ಬೆಲೆ ಏರಿಕೆ ಕಂಡಿರುವುದರಿoದ ಬಾಗೇಪಲ್ಲಿ ತಾಲ್ಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಪಟ್ಟಣದ ಎಪಿಎಂಸಿಯಲ್ಲಿ ಸದ್ಯ ಟೊಮ್ಯಾಟೊ ವಹಿವಾಟು ಜೋರಾಗಿದ್ದು, 15 ಕೆಜಿ ತೂಕದ ಟೊಮೇಟೊ ಬಾಕ್ಸ್ ಬುಧವಾರ 650 ರಿಂದ 850 ರೂಪಾಯಿವರೆಗೆ ಮಾರಾಟವಾಗಿದೆ. ತರಕಾರಿ ಬೆಲೆ ಏರಿಳಿತದ ಕಣ್ಣಾಮುಚ್ಚಾಲೆಯಿಂದಾಗಿ ರೈತರು ತರಕಾರಿ ಬೆಳೆ ಕಡಿಮೆ ಮಾಡಿದ್ದು, ಚಳಿಯ ತೀವ್ರತೆಯಿಂದಾಗಿ ಇಳುವರಿ ಕಡಿಮೆಯಾಗಿರುವುದರಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ. ತರಕಾರಿ ಬೆಲೆ ದಿನೇ ದಿನೆ ಗಗನಮುಖೀಯಾಗುತ್ತಿದ್ದು, ಅದರಲ್ಲೂ ಟೊಮೇಟೋ ಗ್ರಾಹಕರ ಪಾಲಿಗೆ ಹುಳಿಯಾಗಿ ಪರಿಣಮಿಸಿದೆ.
ಕಳೆದ ಹತ್ತು ದಿನಗಳಿಂದ ಮಾರುಕಟ್ಟೆಗೆ ಟೊಮೇಟೋ ಸೇರಿದಂತೆ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವಾಗಿರುವುದರಿಂದ ದರ ಹೆಚ್ಚಳ ಆಗುತ್ತಿದೆ. ಎರಡು ವಾರಗಳಿಂದ ಪ್ರತಿ ಕೆಜಿಗೆ 40 ರಿಂದ 50 ರುಪಾಯಿಗೆ ಮಾರಾಟವಾಗುತ್ತಿದ್ದ ಟೊಮೇಟೊ ಈ ವಾರ ಪ್ರತಿ ಕೆಜಿಗೆ 100 ಆಗಿದೆ. ಸಂತೆಯಲ್ಲಿ ಸಾಕಷ್ಟು ಟೊಮೆಟೊ ಇದ್ದರೂ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬರುತ್ತಿತ್ತು. ಮಳೆ ಹೆಚ್ಚಾಗಿ ಹಾಳಾಗಿರುವುದು, ರೋಗ ಬಾಧೆಯಿಂದ ಬರುತ್ತಿಲ್ಲ. ಹಾಗಾಗಿ, ಟೊಮೇಟೊ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಪ್ರತಿ ಕೆಜಿಗೆ 80 ರಿಂದ 90 ರುಪಾಯಿ ನಮಗೆ ಬಿದ್ದಿದೆ ಹಾಗಾಗಿ ಕನಿಷ್ಠ 20ರುಪಾಯಿ ಲಾಭಕ್ಕೆ ಮಾರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಾಪಾರಿ ರವೀಂದ್ರ ನರಸಿಂಹ ಸ್ವಾಮಿ ಕೊತ್ತಪಲ್ಲಿ ಹೇಳುತ್ತಾರೆ.
ಟೊಮೇಟೊ ಒಂದು ಕೆಜಿಗೆ ಬರೋಬ್ಬರಿ 100 ರೂ, ಈರುಳ್ಳಿ ಬೆಲೆ ಬರೋಬ್ಬರಿ 60 ರೂಗೆ ಏರಿಕೆ ಆಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ. ಮಳೆ ಬರುತ್ತಿರುವ ಪರಿಣಾಮ ಟೊಮೇಟೊ ಸರಿಯಾಗಿ ಬೆಳೆ ಬಂದಿಲ್ಲ. ಹೀಗಾಗಿ ಟೊಮೇಟೊ ಬೆಲೆ ಕೆಜಿಗೆ 100 ರೂ ಏರಿಕೆ ಆಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದು, ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ.
ರಾಜ್ಯ ಸರ್ಕಾರ ತೈಲ ಮಾರಾಟದ ಮೇಲಿನ ತೆರಿಗೆ ಹೆಚ್ಚಳ ಮಾಡಿದೆ. ಇದೀಗ ಟೊಮೇಟೊ ಹೆಚ್ಚಳದಿಂದ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ.