ಹಳೇಪಾಳ್ಯದ ಬೆಟ್ಟದಲ್ಲಿ ಬಂಡೆ ಉರುಳಿ ವ್ಯಕ್ತಿ ಸಾವು
1 min readಹಳೇಪಾಳ್ಯದ ಬೆಟ್ಟದಲ್ಲಿ ಬಂಡೆ ಉರುಳಿ ವ್ಯಕ್ತಿ ಸಾವು
ಇನ್ನೂ ಹಲವರು ಬಂಡೆಯ ಕೆಳಗೆ ಸಿಲುಕಿರುವ ಶಂಕೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಭೇಟಿ
ಮಾಲೂರು ತಾಲ್ಲೂಕಿನ ಟೇಕಲ್ ಹಳೇಪಾಳ್ಯದ ಭೂತಮ್ಮ ಬೆಟ್ಟಕ್ಕೆ ಹೊಂದಿಕೊoಡಿರುವ ಸರ್ವೆ ನಂ.53 ರಲ್ಲಿ ಮಂಗಳವಾರ ಮುಂಜಾನೆ ಕಲ್ಲು ಬಂಡೆ ಸೀಳುವ ವೇಳೆ ಇಟಾಚಿ ಮತ್ತು ಕಂಪ್ರೇಜರ್ ಮೇಲೆ ಬೃಹತ್ ಕಲ್ಲು ಬಂಡೆ ಉರುಳಿದ್ದರಿಂದ ಕೂಲಿ ಕಾರ್ಮಿಕ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಬಂಡೆ ಉರುಳಿ ಬಿದ್ದ ಪರಿಣಾಮ ಇಟಾಚಿ ಆಪರೇಟರ್ ಬಂಗಾರಪೇಟೆ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ ಪ್ರವೀಣ್ (32) ಎಂಬಾತ ಸ್ಥಳದಲ್ಲಿ ಮೃತ ಪಟ್ಟಿರವ ಶಂಕೆ ವ್ಯಕ್ತವಾಗಿದೆ. ಕಂಪ್ರೇಜರ್ನಲ್ಲಿ ಕೆಲಸ ಮಾಡುತ್ತಿದ್ದ ಇನ್ನೂ ಹಲವರು ಬಂಡೆ ಕಳೆಗೆ ಸಿಲುಕಿ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದಜ್ದಾರೆ. ಟೇಕಲ್ ವ್ಯಾಪ್ತಿಯ ಕೆ.ಜಿ.ಹಳ್ಳಿ ಗ್ರಾಪಂ.ನ ಹಳೇಪಾಳ್ಯ ಗ್ರಾಮಕ್ಕೆ ಸೇರಿದ ಸರ್ವೆ ನಂ.53ರ ಸರ್ಕಾರಿ ಗೋಮಾಳ ಇದ್ದು, ಅಲ್ಲಿ ಅದೇ ಗ್ರಾಮದ ಮಂಜುನಾಥ ಎಂಬುವರು ಕಲ್ಲು ಗಣಿಗಾರಿಕೆ ಮಾಡುತ್ತಿದ್ದರು.
ಮಂಗಳವಾರ ಬಂಡೆಯನ್ನು ಇಬ್ಭಾಗ ಮಾಡುತ್ತಿದ್ದಾಗ ಈ ದುರಂತ ನಡೆದಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದ್ದು, ಬಂಡೆಗಳನ್ನು ಸ್ಫೋಟಿಸುವಾಗ ಹಲವು ಸಾವು ನೋವುಗಳು ಸಂಭವಿಸಿದೆ. ಈ ಬಗ್ಗೆ ಪೋಲಿಸರು ಸಂಬoಧಪಟ್ಟ ಗಣಿ ಇಲಾಖೆಯಾಗಲಿ ಕಲ್ಲು ಕುಟಿಕರಿಗೂ ಹಾಗೂ ಸುತ್ತಮುತ್ತಲು ಕಲ್ಲು ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿಲ್ಲ.
ಈ ಭಾಗದಲ್ಲಿ ಸಾವಿರಾರು ಮಂದಿ ಕಲ್ಲು ಗಣಿಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ ಇವರಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ಇಲ್ಲಿಂದ ಕಲ್ಲು ಸರಬರಾಜು ಮಾಡುವರಿಂದ ತೆರಿಗೆ ಸಂಗ್ರಹವಾಗುತ್ತಿದೆಯೆ ಇಲ್ಲವೇ ಎಂಬುದು ಸರ್ಕಾರವೇ ಮಾಹಿತಿ ನೀಡಬೇಕು. ಒಂದು ವೇಳೆ ತೆರಿಗೆ ಪಾವತಿಸದಿದ್ದರೆ ಅಂತಹವರನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರಮಾನ ಬರುವಂತೆ ರೂಪುರೇಷೆಗಳನ್ನು ತಯಾರಿಸಿ ವರದಿ ನೀಡಿದರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೋಲಾರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇಂತಹ ದುರ್ಘಟನೆಗಳು ನಡೆದಾಗ ಮಾತ್ರ ಇದರ ಬಗ್ಗೆ ಕಾಳಜಿ ವಹಿಸುತ್ತಾರೆ. ನಂತರ ಇದನ್ನು ಮರೆಯುತ್ತಾರೆ ಕೆಲವು ತಿಂಗಳುಗಳ ಹಿಂದೆ ತೆರಿಗೆ ಕಟ್ಟಿಲಿಲ್ಲ ಎಂಬ ಮಾಹಿತಿ ಹಾಗೂ ಅಕ್ರಮ ಗಣಿಗಾರಿಕೆ ಅರಿತು. ಸರ್ವೆ ಮಾಡಿಸಲಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಜಮೀನಿನಲ್ಲಿಯು ಗಣಿಗಾರಿಕೆ ನಡೆಯುತ್ತಿದೆ ಈ ಬಗ್ಗೆ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೇಯಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಹಳೇಪಾಳ್ಯ ಮಂಜುನಾಥ ಎಂಬುವರಿಗೆ ಗುತ್ತಿಗೆ ಪಡೆದು ಕಲ್ಲು ಬಂಡೆ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಸ್ಥಳ ಅರಣ್ಯ ಇಲಾಖೆಗೆ ಅಥವಾ ಕಂದಾಯ ಇಲಾಖೆಗೆ ಸೇರಿದೆಯಾ ಎಂಬುದು ಖಚಿತವಾಗಿಲ್ಲ. ನಿನ್ನೆ ರಾತ್ರಿ ಮಳೆ ಬಂದಿದ್ದರಿoದ ಈ ಭಾಗದಲ್ಲಿ ನೆಲ ಕುಸಿದಿತ್ತು. ಇದರಿಂದ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ಸ್ಥಳದಲ್ಲಿ ಇಟಾಚಿ ಆಪರೇಟರ್ ಮೃತಪಟ್ಟಿರುವುದು ಕಂಡು ಬಂದಿದ್ದು, ಇನ್ನೂ ಕೆಲವರು ಸಿಲುಕಿರಬಹುದೆಂದು ಶಂಕಿಸಲಾಗಿದೆ. ಈ ಹಿಂದೆಯೂ ಇಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಮಾಹಿತಿ ಇದೆ. ಯಂತ್ರೋಪಕರಣಗಳನ್ನು ಬಳಸುವುದು ಕಾನೂನು ಬಾಹಿರವಾಗಿದ್ದು, ಸಾಂಪ್ರದಾಯಿಕ ಕಲ್ಲು ಕುಟಿಕರ ಕೆಲಸಕ್ಕೆ ಮಾತ್ರ ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಕಾನೂನು ಬಾಹಿರವಾಗಿ ನಿರಂತರವಾಗಿ ಕೆಲಸ ನಡೆಯುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಗುತ್ತಿಗೆದಾರನ ಮೇಲೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday