ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಲೇವಡಿ
1 min readರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಲೇವಡಿ
ಇಂಧನ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ ಜಿ.ಟಿ.ಡಿ
ಕೂಡಲೇ ಬೆಲೆ ಇಳಿಸುವಂತೆ ಒತ್ತಾಯ ಮಾಡಿದ ಶಾಸಕ
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ಬೆಲೆ ಏರಿಕೆ ಮಾಡದಂತೆ ಆಗ್ರಹ ಮಾಡಿದ್ದರು. ಬೇರೆ ರಾಜ್ಯಗಳಲ್ಲಿ ನಮಗಿಂತ ಪೆಟ್ರೋಲ್- ಡಿಸೇಲ್ ದರ ಕಡಿಮೆಯಿದೆ ಅಂತ ಈಗ ಸಮರ್ಥನೆ ಮಾಡಿಕೊಳ್ತಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ಲೇವಡಿ ಮಾಡಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಇಲ್ಲ,
ಅದಕ್ಕೆ ಬಳಕೆ ಮಾಡಿಕೊಳ್ತಿದ್ದೀವಿ ಅಂತ ಸಿಎಂ ಹೇಳ್ತಿದ್ದಾರೆ. ಸಚಿವ ಎಂ.ಬಿ ಪಾಟೀಲ್ ಅವರು ಗ್ಯಾರಂಟಿಗಳಿಗೆ ಹಣ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಹಣ ಜೋಡಣೆ ಮಾಡಬೇಕು ಹಾಗಾಗಿ ಏರಿಕೆ ಮಾಡಿದ್ದಿವಿ ಅಂತ ಹೇಳ್ತಾರೆ. ಒಂದು ವರ್ಷದಿಂದ ಲೋಕಸಭಾ ಚುನಾವಣೆವರೆಗೂ ಯಾವುದೇ ಬೆಲೆ ಏರಿಕೆ ಮಾಡದೇ ಒಂದೇ ಬಾರಿಗೆ ಪೆಟ್ರೋಲ್ ಡಿಸೇಲ್ ಏರಿಕೆ ಮಾಡಿರೋದು ರಾಜ್ಯದ ಜನರ ಮೇಲೆ ಹೊರೆ ಏರಿಸಿದಂತಾಗಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಕೇವಲ ಬೈಕ್, ಕಾರು, ಲಾರಿ ಮಾಲೀಕರಿಗಷ್ಟೇ ಅಲ್ಲ, ಬಡವರು, ಕೂಲಿ ಕಾರ್ಮಿಕರು, ರೈತರ ಪಂಪ್ ಸೆಟ್ ಗಳು ಸೇರಿದಂತೆ ಎಲ್ಲಾರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ ಎಂದರು. ಒಂದು ಕಡೆ ಪೆಟ್ರೋಲ್ ಡಿಸೇಲ್ ದರ ಹೆಚ್ಚಳ ಮಾಡಿದ್ದಾರೆ. ಇನ್ನೊಂದು ಕಡೆ ಬಸ್ ಚಾರ್ಜ್ ಹೆಚ್ಚಳ ಮಾಡಬೇಕು ಅಂತ ಇಲಾಖೆ ಪಟ್ಟಿ ಸಲ್ಲಿಸಿದೆ. ದರ ಹೆಚ್ಚಳ ಮಾಡ್ಬೇಕು ಅಂತ ಮುಖ್ಯಮಂತ್ರಿ, ಸಚಿವರಿಗೆ ಪತ್ರ ಕೊಟ್ಟಿದ್ದಾರೆ ಎಂದರು.
ಪೆಟ್ರೋಲ್-ಡಿಸೇಲ್ ದರ ಏರಿಕೆಯಿಂದ ದೊಡ್ಡ ಅನಾಹುತ ಅಗುತ್ತೆ, ಚುನಾವಣೆ ಮುಗಿದ ಬಳಿಕವೇ ಈರೀತಿ ಮಾಡ್ತಾರೆ ಅಂತ ಯಾರು ಕಂಡಿರಲಿಲ್ಲ. ಎಲ್ಲ ಜನರಿಗೆ ಆಘಾತ ಆಗಿದೆ. ಕೂಡಲೇ ಬೆಲೆ ಏರಿಕೆ ರದ್ದುಪಡಿಸಬೇಕು. ಸರ್ಕಾರ ಬಡವರ ಪರ ಅಂತ ಹೇಳಿದ್ದೀರಿ, ಪೆಟ್ರೋಲ್-ಡಿಸೇಲ್ ಬಡವರ ಉಪಯೋಗಿಸುವ ಇಂಧನ, ಕೂಡಲೇ ಏರಿಕೆ ರದ್ದುಪಡಿಸಬೇಕು ಅಂತ ಆಗ್ರಹಿಸಿದರು.