ಜೂ.24 ರಂದು ವಿಧಾನಪರಿಷತ್ ನೂತನ ಸದಸ್ಯರ ಪ್ರಮಾಣವಚನ
1 min readವಿಧಾನಪರಿಷತ್‌ಗೆ ಚುನಾಯಿತರಾಗಿರುವ 17 ನೂತನ ಸದಸ್ಯರು ಜೂ.24 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್‌ನ 11 ಸದಸ್ಯ ಸ್ಥಾನಗಳಿಗೆ ಹಾಗೂ 3 ಶಿಕ್ಷಕರ ಮತ್ತು 3 ಪದವೀಧರ ಕ್ಷೇತ್ರಗಳಿಂದ ಮೇಲನೆಯ 6 ಸದಸ್ಯ ಸ್ಥಾನಗಳಿಗೆ ಚುನಾಯಿತರಾಗಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ 11 ಸದಸ್ಯರು ಅಧಿಕಾರ ಹಾಗೂ ಗೌಪ್ಯತೆಯ ತಮ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನ ನಾಯಕರು ಹಾಗೂ ನೂತನ ಸದಸ್ಯರ ಕುಟುಂಬ ಸದಸ್ಯರು, ಅಭಿಮಾನಿಗಳು ಹಾಜರಿರಲಿದ್ದಾರೆ.ವಿಧಾನಸಭೆಯಿಂದ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಐವಾನ್ ಡಿಸೋಜ, ಕೆ.ಗೋವಿಂದರಾಜು, ಜಗದೇವ ಗುತ್ತೇದಾರ್, ಬಲ್ಕಿಸ್ ಬಾನು, ಡಾ.ಯತೀಂದ್ರ ಎಸ್., ಸಚಿವ ಎನ್.ಎಸ್.ಬೋಸರಾಜ್, ಎಸ್.ವಸಂತಕುಮಾರ್, ಬಿಜೆಪಿಯ ಸಿ.ಟಿ.ರವಿ, ಎನ್.ರವಿಕುಮಾರ್, ಮೂಳೆ ಮಾರುತಿರಾವ್ ಹಾಗೂ ಜೆಡಿಎಸ್‌ನಿಂದ ಟಿ.ಎನ್.ಜವರಾಯಿಗೌಡ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ರಾಮೋಜಿಗೌಡ (ಬೆಂಗಳೂರು ಪದವೀಧರ ಕ್ಷೇತ್ರ), ಬಿ.ಟಿ.ಶ್ರೀನಿವಾಸ್ (ಆಗ್ನೇಯ ಶಿಕ್ಷಕರ ಕ್ಷೇತ್ರ), ಡಾ.ಚಂದ್ರಶೇಖರ ಪಾಟೀಲ (ಈಶಾನ್ಯ ಪದವೀಧರ ಕ್ಷೇತ್ರ), ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎಸ್.ಎಲ್.ಬೋಜೇಗೌಡ (ನೈರುತ್ಯ ಶಿಕ್ಷಕರ ಕ್ಷೇತ್ರ), ವಿವೇಕಾನಂದ (ದಕ್ಷಿಣ ಶಿಕ್ಷಕರ ಕ್ಷೇತ್ರ) ಹಾಗೂ ಡಾ.ಧನಂಜಯ ಸರ್ಜಿ (ನೈರುತ್ಯ ಪದವೀಧರ ಕ್ಷೇತ್ರ) ಚುನಾಯಿತರಾಗಿದ್ದಾರೆ. ಈ 6 ಸದಸ್ಯರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಧಾನಪರಿಷತ್‌ನ ಸದಸ್ಯರಾಗಿದ್ದ ರಘುನಾಥ್‌ರಾವ್ ಮಲ್ಕಾಪುರೆ, ಡಾ.ಕೆ.ಗೋವಿಂದರಾಜ್, ಅರವಿಂದ್ ಕುಮಾರ್ ಅರಳಿ, ಪಿ.ಎಂ.ಫಾರುಖ್, ಎನ್.ರವಿಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್ ಕುಮಾರ್, ಎನ್.ಎಸ್.ಬೋಸರಾಜು ಹಾಗೂ ಮುನಿರಾಜುಗೌಡ ಜೂ.17 ರಂದು ನಿವೃತ್ತಿಯಾಗಿದ್ದಾರೆ.
ಡಾ.ತೇಜಸ್ವಿನಿಗೌಡ ಹಾಗೂ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ರಾಜೀನಾಮೆ ನೀಡಿದ್ದು, ನಿವೃತ್ತಿ ಹಾಗೂ ರಾಜೀನಾಮೆಯಿಂದ 17 ಸದಸ್ಯ ಸ್ಥಾನ ತೆರವಾಗಿದ್ದು, ಆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪದವೀಧರ ಕ್ಷೇತ್ರದಿಂದ ಅ.ದೇವೇಗೌಡ, ಡಾ.ಚಂದ್ರಶೇಖರ ಪಾಟೀಲ್, ಶಿಕ್ಷಕರ ಕ್ಷೇತ್ರದಿಂದ ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಬೋಜೇಗೌಡ ಜೂ.21 ರಂದು ನಿವೃತ್ತಿ ಹೊಂದಲಿದ್ದಾರೆ.
ಮರಿತಿಬ್ಬೇಗೌಡ ತಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಒಂದು ಸ್ಥಾನ ಖಾಲಿಯಿತ್ತು. ಈ ಆರೂ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆಇದಿದ್ದು, ನೂತನ ಸದಸ್ಯರು ಆಯ್ಕೆಯಾಗಿದ್ದಾರೆ.ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಹಾಲಿ ಸದಸ್ಯರ ಅವಧಿ ಜೂ.21 ರವರೆಗೆ ಇದೆ. ಜೂ.22, 23 ರಂದು ರಜೆ ಇರುವುದರಿಂದ ಜೂ.24 ರಂದು ಎಲ್ಲಾ 11 ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಗುತ್ತಿದೆ.
* https://youtube.com/@ctvnewschikkaballapura?si=C-CJWuVfM-65JQMa
* LIVE: https://shashwatha.com/player.php?url=https://shashwatha.com/hls/shashwatha/ctvnews.m3u8
* CTV News : https://ctvnewskannada.com/
* Subscribe to Ctv News: https://www.youtube.com/channel/UCHtq26kA5D5anCbPD3HoURw
* Big News Big Update : https://ctvnewskannada.com/
* Download CTV Android App: https://play.google.com/store/apps/details?id=com.ctv.ctvnews
* Like us on Facebook: https://www.facebook.com/ctvnewschikkaballapura
* Follow us on Instagram: https://www.instagram.com/ctvnewschikkaballapura/
* Follow us on Twitter: https://twitter.com/ctvnewscbpura