ಸಿ ಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್, ನoಜನಗೂಡಿನಲ್ಲಿ ಕಲುಷಿತ ನೀರು ಸರಬರಾಜು ಪ್ರಕರಣ
1 min readಸಿ ಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್
ನoಜನಗೂಡಿನಲ್ಲಿ ಕಲುಷಿತ ನೀರು ಸರಬರಾಜು ಪ್ರಕರಣ
ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸ್ಥಳಕ್ಕೆ ಭೇಟಿ
ನಂಜನಗೂಡು ನಗರದಲ್ಲಿ ಕಲುಷಿತ ನೀರು ಎಲ್ಲ ಬಡಾವಣೆಗಳಿಗೆ ಪೂರೈಕೆಯಾಗುತ್ತಿದ್ದು, ನಗರಸಭಾ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಿ ಟಿವಿ ನ್ಯೂಸ್ ವಾಹಿನಿಯಲ್ಲಿ ವರದಿ ಪ್ರಸಾರ ಮಾಡಿದ 24 ಗಂಟೆಯೊಳಗೆ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿದೆ.
ನoಜನಗೂಡು ನಗರದಲ್ಲಿ ಕಲುಷಿತ ನೀರು ಎಲ್ಲ ಬಡಾವಣೆಗಳಿಗೆ ಪೂರೈಕೆಯಾಗುತ್ತಿದ್ದು, ನಗರಸಭಾ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಿ ಟಿವಿ ನ್ಯೂಸ್ ವಾಹಿನಿಯಲ್ಲಿ ವರದಿ ಪ್ರಸಾರ ಮಾಡಿದ 24 ಗಂಟೆಯೊಳಗೆ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿದೆ. ನಂಜನಗೂಡು ನಗರದ ದೇವಿರಮ್ಮನಹಳ್ಳಿ ಬಡಾವಣೆಯ ಬಳಿ ಇರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ 15 ದಿನಗಳಿಂದ ಇಡೀ ನಂಜನಗೂಡು ನಗರಕ್ಕೆ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಕಪಿಲಾ ನದಿಯಿಂದ ನೀರನ್ನು ಟ್ಯಾಂಕ್ ಗಳಿಗೆ ತುಂಬಿಸಿ, ಶುದ್ಧೀಕರಿಸಿದ ನಂತರ ನೀರನ್ನು ಸರಬರಾಜು ಮಾಡಬೇಕು. ಆದರೆ, ನೀರನ್ನು ಶುದ್ಧೀಕರಿಸದೆ ಮುಂಜಾಗ್ರತಾ ಕ್ರಮ ಅನುಸರಿಸದೇ ಬಡಾವಣೆಗಳ ಎಲ್ಲಾ ಮನೆಗಳಿಗೆ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ನಿವಾಸಿಗಳು ಅದೇ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಶುದ್ಧೀಕರಿಸುವ ಯಂತ್ರಗಳು ಕೆಟ್ಟು ನಿಂತಿದ್ದು, ಕೂಡಲೇ ಅದನ್ನು ಸರಿಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಅವರಿಗೆ ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ಮತ್ತು ನಿವಾಸಿಗಳು ಮನವಿ ಸಲ್ಲಿಸಿದರು. ಕೂಡಲೇ ಕೆಟ್ಟು ನಿಂತಿರುವ ಯಂತ್ರಗಳನ್ನು ರಿಪೇರಿ ಮಾಡಿಸಿ, ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭರವಸೆ ನೀಡಿದ್ದಾರೆ. ಇದು ಸಿ ಟಿವಿ ನ್ಯೂಸ್ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.