ಕೊಲೆ ಮಾಡಿದ ಮೇಲೆ ಇದೆಲ್ಲಾ ತಿರ್ಪೆ ಶೋಕಿ ಬೇಕಿತ್ತಾ?
1 min readಸದ್ಯ ರಾಜ್ಯದಲ್ಲಿ ಎಲ್ಲರ ಚಿತ್ತ ಕದ್ದಿರುವ ಪ್ರಕರಣ ರೇಣುಕಾಸ್ವಾಮಿ ಕೊಲೆ ಪ್ರಕರಣ. ಈ ಪ್ರಕರಣ ದಿನ ಕಳೆದಂತೆ ಒಂದೊಂದು ತಿರುವ ಪಡೆದುಕೊಳ್ಳುತ್ತಿದೆ. ಈಗಾಗಲೇ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಪ್ರೇಯಸಿ ಪವಿತ್ರಾ ಗೌಡ್ ಅವರನ್ನು ಬಂಧಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ, ದರ್ಶನ್ ಪ್ರೇಯಸಿ ಪವಿತ್ರಾ ಗೌಡ್ ಅವರಿಗೆ ಅಸಭ್ಯ ಮೆಸೇಜ್ ಮಾಡಿದ್ದರಿಂದ ದರ್ಶನ್, ತನ್ನ ಅಭಿಮಾನಿಗಳ ಮೂಲಕ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬಳಿಕ ರೇಣುಕಾಸ್ವಾಮಿ ಅವರನ್ನು ಪಟ್ಟಣಗೇರೆ ಶೆಡ್ಡನಲ್ಲಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ದರ್ಶನ್ ಹಾಗೂ ಅವರ ಸಹಚರರ ಮೇಲಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಕೋರ್ಟ್‌ಗೆ ಹಾಜರು ಮಾಡಿ ಕಸ್ಟಡಿಗೂ ಪಡೆದಿದ್ದಾರೆ. ತನಿಖೆಯ ವೇಳೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಈಗ ಈ ಪ್ರಕರಣದ ಸ್ಥಳ ಮಹಜರು ಕಾರ್ಯ ಭರದಿಂದ ಸಾಗಿದೆ. ಇಂದು ಬಂಧಿತರನ್ನು ಆರ್‌ಆರ್ ನಗರಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ.
ಬಂಧಿತರಲ್ಲಿ ಕೆಲವರು ರೇಣುಕಾಸ್ವಾಮಿ ಹತ್ಯೆ ಬಳಿಕ ಹೊಸ ಬಟ್ಟೆ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಆರ್‌ಆರ್ ನಗರದ ಟ್ರೆಂಡ್ಸ್‌ನಲ್ಲಿ ತಪಾಸಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ಆರೋಪಿಗಳು ಹೊಸ ಬಟ್ಟೆ ಖರೀದಿ ಮಾಡಿ ದೇವಾಲಯಕ್ಕೆ ಭೇಟಿ ನೀಡಿರುವ ಮಾಹಿತಿ ಕೂಡ ಇದೀಗ ಬಹಿರಂಗಗೊಂಡಿದೆ.
ಹತ್ಯೆಯ ಬಳಿಕ ಲಕ್ಷ್ಮಣ ಹಾಗೂ ನಾಗರಾಜ್ ಸೇರಿ ಆರ್‌ಆರ್ ನಗರದಲ್ಲಿರುವ ಟ್ರೆಂಡ್ಸ್‌ನಲ್ಲಿ ಹೊಸ ಬಟ್ಟೆ ಖರೀದಿಸಿದ್ದಾರೆ. ನಂತರ ಆರೋಪಿಗಳನ್ನು ಹೊಸ ಬಟ್ಟೆಯನ್ನು ತೊಟ್ಟು ಲಕ್ಷ್ಮಿ ವೆಂಕಟೇಶ್ವರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದು, ಆರೋಪಿಗಳು ಬಂದು ಹೋಗಿದ್ದ ಸ್ಥಳದಲ್ಲಿ ಮಹಜರು ಕಾರ್ಯ ನಡೆದಿದೆ. ಇದೇ ವೇಳೆ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
#ctvnews #ctvNews #ctv