100 ಕೋಟಿ ಆಫರ್ ವಿಚಾರ : ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ‘ಸ್ವಾಮಿಗಳದ್ದು’ : ಕಾಂಗ್ರೆಸ್ ವ್ಯಂಗ್ಯ
1 min readಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜ ಗೌಡ ಡಿಕೆ ಶಿವಕುಮಾರ್ ನನಗೆ ಮೋದಿ ಬಿಜೆಪಿ ಹಾಗೂ ಹೆಚ್‍ಡಿ ಕುಮಾರಸ್ವಾಮಿಗೆ ಕೆಟ್ಟ ಹೆಸರು ಬರಲು 100 ಕೋಟಿ ಆಫರ್ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು ಎಂದು ಪರೋಕ್ಷವಾಗಿ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಹೆಚ್ ಡಿ ರೇವಣ್ಣ ಕುರಿತು ವ್ಯಂಗ್ಯವಾಡಿದೆ.
ಟ್ವೀಟ್ ಮೂಲಕ ವ್ಯಂಗ್ಯವಾಡಿದ ಕಾಂಗ್ರೆಸ್ ದೇವರಾಜೇಗೌಡನ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ದಿನಕ್ಕೊಂದು ಮಾತಾಡುವ ದೇವರಾಜೇಗೌಡ ಮಹಿಳೆಯರ ಮಾನ ಕಳೆದ ಪ್ರಕರಣವನ್ನು ಬೇರೆಡೆಗೆ ತಿರುಗಿಸಿ, ರಾಜಕೀಕರಣಗೊಳಿಸಿ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿಸಿದೆ.
SIT ಅಧಿಕಾರಿಗಳು ದೇವರಾಜೇಗೌಡರಿಗೆ ಮಾನಸಿಕ ಚಿಕೆತ್ಸೆ ಕೊಡಿಸುವುದು ಒಳ್ಳೆಯದು ಬ್ರದರ್ ಸ್ವಾಮಿಗಳು ಹೇಳಿಕೊಟ್ಟ ಮಾತನ್ನು ದೇವರಾಜೇಗೌಡ ಆಡಿದ್ದಾರೆ, ಆತನ ಬಾಯಲ್ಲಿ ಬರುವ ಪ್ರತಿ ಮಾತುಗಳಲ್ಲೂ “ದೊಡ್ಡವರ” ಚಿತಾವಣೆ ಇರುತ್ತದೆ ಎಂದು ಹೇಳಿದೆ. ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು. ಇದನ್ನು ಸ್ವತಃ ದೇವರಾಜೇಗೌಡ ಒಪ್ಪಿಕೊಂಡಿರುವಾಗ ಅವರ ಮಾತುಗಳಿಗೆ ಗಾಂಬೀರ್ಯತೆಯನ್ನು, ಸತ್ಯವನ್ನು ಹುಡುಕುವುದು ಹಾಸ್ಯಾಸ್ಪದವಾಗುತ್ತದೆ. ಎಂದು ಕಾಂಗ್ರೆಸ್ ದೇವರಾಜೇಗೌಡ ಕುರಿತು ವ್ಯಂಗ್ಯವಾಡಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
#ctvnews #ctvNews #ctv #Chikkaballapura