ಭಕ್ತರು ಎಳೆಯುತ್ತಿದ್ದಂತೆ ಕುಸಿದು ಬಿದ್ದ 60 ಅಡಿ ಎತ್ತರದ ರಥ!
1 min readದೇವಸ್ಥಾನದ ಜಾತ್ರೆಯ ಸಮಯದಲ್ಲಿ 60 ಅಡಿ ಎತ್ತರದ ರಥ ಕುಸಿದು ಬಿದ್ದ ಘಟನೆ ತಮಿಳುನಾಡಿದ ವೆಲ್ಲೋರ್ ನಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ.
ಮಾಯನ ಕೊಲ್ಲೈ ಉತ್ಸವದ ಸಲುವಾಗಿ 60 ಅಡಿ ಎತ್ತರದ ರಥ ಕಟ್ಟಲಾಗಿತ್ತು. ರಥದಲ್ಲಿ ಅಂಗಾಲಪರಮೇಶ್ವರಿ ಅಮ್ಮನವರ ಮೂರ್ತಿಯನ್ನು ರಥದಲ್ಲಿರಿಸಿ ಪಲರು ನದಿಯ ದಂಡೆಯಲ್ಲಿ ಎಳೆಯಬೇಕಿತ್ತು.
ಮಾಯನ ಕೊಲ್ಲೈ ಉತ್ಸವವು ಮೃತಪಟ್ಟವರನ್ನು ಗೌರವಿಸುವ ಸಮಾರಂಭವಾಗಿದೆ.
ಭಕ್ತರು ರಥವನ್ನು ಎಳೆಯುತ್ತಿದ್ದಂತೆ ನಿಯಂತ್ರಣ ತಪ್ಪಿ, ರಥದ ಮೇಲ್ಭಾಗವು ಕುಸಿದು ಬಿದ್ದಿದೆ. ರಥದಡಿಯಲ್ಲಿ 30 ವರ್ಷದ ವಿಮಲರಾಜ್ ವೆನ್ಮನಿ ಎಂಬರವರು ಸಿಲುಕಿದ್ದರು.
ಸ್ಥಳೀಯರು ಕೂಡಲೇ ಆತನನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಮುಂದುವರಿದಿದೆ.
ದೇವಸ್ಥಾನದ ಜಾತ್ರೆಯ ಸಮಯದಲ್ಲಿ 60 ಅಡಿ ಎತ್ತರದ ರಥ ಕುಸಿದು ಬಿದ್ದ ಘಟನೆ ತಮಿಳುನಾಡಿದ ವೆಲ್ಲೋರ್ ನಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ.