Kendasampige: ಕಾಶಿಯಲ್ಲಿ ಕಂದನನ್ನು ನೆನೆದ ಸುಮನಾ; ಮಾವ ಸಮಾಧಾನ ಮಾಡಿದ್ದು ಹೀಗೆ
1 min readಮಾವನ ಜೊತೆ ಸುಮನಾ ಕಾಶಿಗೆ ಬಂದಿದ್ದಾಳೆ. ಶಾಂತವಾಗಿ ಕೂತು ಗಂಗಾ ತೀರದಲ್ಲಿ ಗಂಗಾರತಿ ನೋಡುತ್ತಾ ಕಳೆದು ಹೋಗಿದ್ದಾಳೆ. ಅಲ್ಲಿ ಕುಳಿತ ಎಲ್ಲರೂ ಸಹ ಗಂಗಾರತಿ ನೋಡೋದರಲ್ಲಿ ಕಳೆದು ಹೋಗಿದ್ದಾರೆ. ಹೀಗಿರುವಾಗ ಎಲ್ಲಾ ನೋವು ಅಲ್ಲಿ ಮರೆತು ಹೋಗುತ್ತದೆ.
ಗಂಗಾರತಿ ಮಾಡುವುದನ್ನು ನೋಡುವುದೇ ಒಂದು ಭಾಗ್ಯ ಎನ್ನುವ ರೀತಿಯಲ್ಲಿ ಎಲ್ಲರೂ ಕುಳಿತುಕೊಂಡಿದ್ದಾರೆ.
ಅದ್ಭುತವಾದ ಗಂಗಾರತಿ ನೋಡಿದ್ದಾರೆ. ಇನ್ನು ಗಂಗಾರತಿಯನ್ನು ಏಕೆ ಮಾಡುತ್ತಾರೆ ಅನ್ನೋದನ್ನು ಸಹ ಮಾವ ವಿವರಿಸಿದ್ದಾರೆ. ಮಾವ ಹೀಗೆಲ್ಲಾ ಇದ್ಯಾ? ನದಿಗೂ ಈ ರೀತಿ ಪೂಜೆ ಮಾಡ್ತಾರಾ ಅಂತ ಸುಮನಾ ಕೇಳುತ್ತಾಳೆ. ಹೌದಮ್ಮಾ ಗಂಗಾ ಮಾತೆ ನಮ್ಮ ದೇಹದ ಕೊಳೆ ಮಾತ್ರವಲ್ಲ ಜನ್ಮ ಜನ್ಮಾಂತರದ ಪಾಪವನ್ನೂ ತೊಳೆಯುತ್ತದೆ ಎಂದು ಮಾವ ಹೇಳುತ್ತಾರೆ. ಅದನ್ನು ಕೇಳ್ತಾ ಸುಮನಾ ಅರ್ಥ ಮಾಡಿಕೊಳ್ಳುತ್ತಾ ಇರಿತ್ತಾಳೆ. ಅವಳಿಗೆ ಈ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ನಾವು ಕಾಶಿಗೆ ಬಂದಿರೋದು ತುಂಬಾ ಒಳ್ಳೆದಾಯ್ತು ಅಂತ ಅವಳು ಹೇಳ್ತಾಳೆ. ಸಾರ್ಥಕ ಆಯ್ತು ಮಾವ ಇದನ್ನೆಲ್ಲಾ ನೋಡ್ತಾ ಮೈಜುಮ್ ಅಂತು ಎನ್ನುತ್ತಾಳೆ. ನದಿಗೆ ಈ ರೀತಿಯೆಲ್ಲಾ ಪೂಜೆ ಮಾಡ್ತಾರಾ ಮಾವ ನಾನು ನಿಜಾ ಇದನ್ನೆಲ್ಲಾ ಊಹೆ ಮಾಡಿ ಇರಲಿಲ್ಲ ಅಂಥಾ ಅನುಭವ ನನಗೆ ಸಿಕ್ಕಿದೆ ಎಂದು ಹೇಳುತ್ತಾಳೆ. ಕಂದಾ ನಾನು ಹಿಂದೆನೂ ಒಂದು ಮಾತ್ ಹೇಳಿದ್ದೆ. ಈಗಲೂ ಹೇಳ್ತಾ ಇದೀನಿ ಅಂತ ಮಾವ ಹೊಸದಾಗ ನೀನು ಮಗು ಕಳೆದುಕೊಂಡಾಗಿಂದ ತುಂಬಾ ಅತ್ತಿದ್ದೀಯಾ ಅಂತ ನನಗೆ ಗೊತ್ತಿದೆ. ಆದರೂ ನಿನ್ನೊಳಗೆ ಇನ್ನೂ ಕೆಲವು ಭಾವನೆಗಳು ಹೇಳಿಕೊಳ್ಳಲಾಗದ ನೋವುಗಳು ಉಳಿದು ಹೋಗಿರುತ್ತದೆ ದುಃಖ ಮಡುಗಟ್ಟಿದೆ ಅದನ್ನೆಲ್ಲಾ ಇಲ್ಲೇ ಹೊರಹಾಕು ಎಂದು ಹೇಳ್ತಾರೆ. ಹೌದು ಅಂತ ಇವಳಿಗೂ ಅನಿಸುತ್ತದೆ. ಇವಳು ತುಂಬಾ ಬೇಸರದಿಂದ ಸ್ವಲ್ಪ ಮುಂದಕ್ಕೆ ನೆಡೆದುಕೊಂಡು ಬರ್ತಾಳೆ. ಸತ್ತು ಹೋಗಿರುವ ತನ್ನ ಮಗುವನ್ನು ನೆನಪು ಮಾಡಿಕೊಂಡು ತುಂಬಾ ಅಂದ್ರೆ ತುಂಬಾನೇ ಅಳುತ್ತಾಳೆ. ಅವಳು ತನ್ನ ಮಗುವನ್ನು ಉದ್ದೇಶಿಸಿ ಮಾತನಾಡುತ್ತಾಳೆ. ನೀನು ಬರ್ತಿಯಾ ಬಂದು ನನ್ನ ದುಃಖಾನೆಲ್ಲಾ ಮರೆಸಿ ಹೊಸ ಬಾಳು ಕೊಡ್ತೀಯಾ ಅಂತ ನಾನು ಅಂದುಕೊಂಡಿದ್ದೆ. ಆದ್ರೆ ಅದು ಹಾಗೆ ಆಗ್ಲೇ ಇಲ್ಲ. ನೀನೂ ಕೂಡ ನನ್ನ ಬಿಟ್ಟು ಹೋಗ್ಬಿಟ್ಟೆ. ಎಷ್ಟು ಅತ್ರೂ ನನ್ನ ದುಃಖ ಕಡಿಮೆನೇ ಆಗ್ತಿಲ್ಲಾ ಅಂತಾಳೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura