ಕಸದಿಂದ ಕೋಟಿ..ಕೋಟಿ ಸಂಪಾದನೆ; ಚಿಂದಿ ಆಯುವವರ ನಿತ್ಯದ ಆದಾಯ 5 ಕೋಟಿ ರೂಪಾಯಿ
1 min readಹೆಗಲಿಗೆ ಗೋಣಿ ಚೀಲ ಹಾಕಿ ಕೊಂಡು ನಗರದ ಬೀದಿ ಬೀದಿ ಅಲೆದು, ರಸ್ತೆ, ಮೋರಿಯಿಂದ ಚಿಂದಿ ಆಯ್ದರೆ ಮಾತ್ರ ಕುಟುಂಬದ ಜೀವನ ನಡೆಸುತ್ತಿರುವವರು ಎಷ್ಟೋ ಮಂದಿ ಬೆಂಗಳೂರು, ಮುಂಬೈ, ನವದೆಹಲಿಗಳಂತಹ ಮಹಾನಗರಗಳಲ್ಲಿ ವಾಸವಾಗಿದ್ದಾರೆ.
ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ ನಡೆಸಿದ ಲೆಕ್ಕಪರಿಶೋಧನೆಯಲ್ಲಿ, ದೆಹಲಿ ನಗರದಲ್ಲಿ ಪ್ರತಿದಿನದ ಕಸದ ರಾಶಿಯಿಂದ ಇ- ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಚಿಂದಿ ಆಯುವವರು ಒಟ್ಟಾರೆ ದಿನಕ್ಕೆ 1.5 ಕೋಟಿ ರು. ಗಳಿಸುತ್ತಾರೆ ಎಂದು ವರದಿಯೊಂದು ಹೇಳಿದೆ.
ನಗರದ ಎಲ್ಲೆಡೆ ಈ ಕಸದಲ್ಲಿ ಚಿಂದಿ ಆಯುವವರು ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತಿ ಕೇಜಿಗೆ 12 ರು.ಗಳಿಗೆ ಮಾರಾಟ ಮಾಡುತ್ತಾರೆ. ಈ ಪ್ರಕಾರ ಪ್ರತಿದಿನ ನಗರದಲ್ಲಿ ಎಲ್ಲ ಚಿಂದಿ ಆಯುವವರು ಒಟ್ಟಾರೆ ಪ್ಲಾಸ್ಟಿಕ್ ಮೂಲಕವೇ ಬರೋಬ್ಬರಿ 1.32 ಕೋಟಿ ರು. ಗಳಿಸುತ್ತಾರೆ. ಇದರೊಂದಿಗೆ ಕಬ್ಬಿಣ ಹಾಗೂ ಇತರ ತ್ಯಾಜ್ಯಗಳು ಸೇರಿದರೆ ಈ ಪ್ರಮಾಣ ಒಟ್ಟು 5 ಕೋಟಿ ರು.ಗೂ ಏರಿಕೆಯಾಗುತ್ತದೆ.
ದೆಹಲಿಯಲ್ಲಿ ಪ್ರತಿ ದಿನ 11,030 ಮೆಟ್ರಿಕ್ ಟನ್‌ಗಳಷ್ಟು ಕಸ ಉತ್ಪಾದನೆಯಾಗುತ್ತದೆ. ದೆಹಲಿ ನಿವಾಸಿಗಳು ಪ್ರತಿ ನಿತ್ಯ 1.5 ಕೋಟಿ ರು. ಮೌಲ್ಯದ ಪ್ಲ್ಯಾಸ್ಟಿಕ್ ಮತ್ತು ಕಬ್ಬಿಣವನ್ನು ಎಸೆಯುತ್ತಾರೆ. 1.10 ಲಕ್ಷ ಕೇಜಿ ಪ್ಲ್ಯಾಸ್ಟಿಕ್, ಕಬ್ಬಿಣ, ಕಾಗದ, ರಟ್ಟು, ರಬ್ಬರ್ ಮತ್ತು ಇತರ ಇ- ತ್ಯಾಜ್ಯವಿರುತ್ತದೆ. ಚಿಂದಿ ಆಯುವ ಪ್ರತಿ ವ್ಯಕ್ತಿ ಪ್ರತಿ ದಿನ 14,000 ರು.ಗಳಿಗಿಂತ ಹೆಚ್ಚು ಗಳಿಕೆ ಮಾಡುತ್ತಾರೆ ಮತ್ತು ಅವರ ಮೇಲಿನ ಗುತ್ತಿಗೆದಾರ 25,000 ರು. ಗಳಿಸುತ್ತಾನೆ ಎಂದು ವರದಿ ಹೇಳಿದೆ. ಚಿಂದಿ ಆಯುವವರು ಸಾವಿರಾರೂ ರೂಪಾಯಿ ಸಂಪಾದನೆ ಮಾಡುತ್ತಾರೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnews