ಅಪರಿಚಿತ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಬಿಗ್ ಬಾಸ್ ವಿನ್ನರ್! ನೆರೆದಿದ್ದ ಜನ ಫುಲ್ ಶಾಕ್
1 min readಈ ಯೂಟ್ಯೂಬರ್ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 26 ವರ್ಷದ ಎಲ್ವಿಶ್ ಯಾದವ್ ಜೈಪುರದ ರೆಸ್ಟೋರೆಂಟ್ನಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಅಪರಿಚಿತ ವ್ಯಕ್ತಿಯೊಬ್ಬರು ಎಲ್ವಿಶ್ ಯಾದವ್ ಅವರ ಕುಟುಂಬದ ಬಗ್ಗೆ ಕಮೆಂಟ್ ಮಾಡಿದ್ದರಂತೆ.
ಬಳಿಕ ಕೋಪಗೊಂಡು ಎಲ್ವಿಶ್ ಕಪಾಳಮೋಕ್ಷ ಮಾಡಿದ್ದಾರೆ. ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬ ಎಲ್ವಿಶ್ ಬಗ್ಗೆ ಕೆಲವು ವೈಯಕ್ತಿಕ ಕಮೆಂಟ್ಗಳನ್ನು ಮಾಡಿದ್ದು ಅದು ಅವರನ್ನು ಕೆರಳಿಸಿತು. ಎಲ್ವಿಶ್ ನಂತರ ಘಟನೆಯ ಬಗ್ಗೆ ಮಾತನಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವ್ಯಕ್ತಿಗೆ ಹೊಡೆದ ವಿಚಾರವಾಗಿ ನನಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ.
‘ಅಣ್ಣ, ನೋಡಿ, ವಿಷಯ ಇದು, ನಾನು ಜಗಳವಾಡಲು ಇಷ್ಟಪಡುವುದಿಲ್ಲ, ಅಥವಾ ನನ್ನ ಕೈ ಎತ್ತುವ ಇಷ್ಟವಿಲ್ಲ. ನಾನು ನನ್ನ ಸ್ವಂತ ಕೆಲಸದಲ್ಲೇ ಬ್ಯುಸಿ ಇರುವೆ. ನಾನು ಸಾಮಾನ್ಯ ವ್ಯಕ್ತಿ ಮತ್ತು ಯಾರೇ ಫೋಟೊ ತೆಗೆಸಿಕೊಳ್ಳಲು ಬಂದ್ರು ಕೊಡ್ತೀನಿ.
ಫೋಟೋ ತೆಗೆಸಿಕೊಂಡು ಕೆಲವರು ನನ್ನ ಬಗ್ಗೆಯೇ ಸೋಶಿಯಲ್ ಮೀಡಿಯಾದಲ್ಲಿ ನಾನಾ ಕಮೆಂಟ್ ಮಾಡ್ತಾರೆ. ಬಳಿಕ ನನ್ನ ಹಾಗೂ ನನ್ನ ಫ್ಯಾಮಿಲಿ ಬಗ್ಗೆ ನಾನಾ ಕಮೆಂಟ್ ಮಾಡುವವರನ್ನು ಬಿಡಲ್ಲ ಎಂದು ಎಲ್ವಿಶ್ ಹೇಳಿದ್ದಾರೆ.
ನನ್ನ ತಾಯಿ ಅಥವಾ ಸಹೋದರಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ನಾನು ಸುಮ್ನೆ ಇರೋದಿಲ್ಲ. ಅವನು ನನ್ನ ಫ್ಯಾಮಿಲಿ ಬಗ್ಗೆ ಮಾತಾಡಲು ಪ್ರಾರಂಭಿಸಿದಾಗ ನಾನು ಅವನ ಕಪಾಳಕ್ಕೆ ಹೊಡೆದೆ ಎಂದು ಎಲ್ವಿಶ್ ಹೇಳಿದರು.
ಬಿಗ್ ಬಾಸ್ ಹಿಂದಿ ಒಟಿಟಿಯಲ್ಲಿ ಕಾಣಿಸಿಕೊಂಡಿದ್ದ ಎಲ್ವಿಶ್ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ವಿಚಾರಕ್ಕೆ ಎಲ್ವಿಶ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ರು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/