4 ವರ್ಷದಲ್ಲಿ 45,000 ಕೋಟಿ ತೆರಿಗೆ ನಷ್ಟ, ಕೇಂದ್ರದ ವಿರುದ್ಧ ಪ್ರೂಫ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ
1 min readಕೇಂದ್ರ ಸರ್ಕಾರದ (Central Govt) ರಾಜ್ಯ ಸರ್ಕಾರಕ್ಕೆ (Karnataka Govt) ಅನುದಾನ ತಾರತಮ್ಯ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಇಂದು ದಾಖಲೆ ಸಮೇತ ಸಾಕ್ಷ್ಯ ಬಿಡುಗಡೆ ಮಾಡಿದರು.
ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಯೋಜಿಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡುವ ತೆರಿಗೆ ಎಷ್ಟು?
ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಪಾಲು ಕೊಡುತ್ತಿದೆ ಎಂಬಿತ್ಯಾದಿ ವಿವರಗಳನ್ನು ದಾಖಲೆ ಬಿಡುಗಡೆ ಮಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘವಾಗಿ ಅಂಕಿ ಅಂಶ ಸಮೇತ ಮಾತನಾಡಿದ ಸಿಎಂ, 4 ವರ್ಷದಲ್ಲಿ ರಾಜ್ಯಕ್ಕೆ 45000 ಕೋಟಿ ನಷ್ಟವಾಗಿದೆ. GST ತೆರಿಗೆಯಿಂದ ₹59,274 ಕೋಟಿ ರಾಜ್ಯಕ್ಕೆ ನಷ್ಟವಾಗಿದೆ. 15ನೇ ಹಣಕಾಸು ಆಯೋಗದಿಂದ ತೆರಿಗೆ ಪಾಲು ₹62,098 ಕೋಟಿ ಬರಬೇಕಿದೆ. ಸೆಸ್ ಮತ್ತು ಸರ್ಚಾರ್ಜ್‌ನಿಂದ ₹55,000 ಕೋಟಿ ಬಾಕಿ ಇದೆ. 15ನೇ ಹಣಕಾಸು ಆಯೋಗ ವಿಶೇಷ ಅನುದಾನದಿಂದ ₹11,495 ಕೋಟಿ ಬಾಕಿ ಎಂದು ಹೇಳಿದರು.
ಹೀಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅನುದಾನ ತಾರತಮ್ಯ ಮಾಡಿ ಮಾಡುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಫೆಬ್ರವರಿ 7ರಿಂದ ನಾವು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಮತ್ತು ಪಕ್ಷ ಸೇರಿ ಪ್ರತಿಭಟನೆ ಮಾಡ್ತೇವೆ. ಜಂತರ್‌ಮಂತರ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಎಲ್ಲಾ ಸಚಿವರು, ಶಾಸಕರು, ಮೇಲ್ಮನೆ, ಕೆಳಮನೆ ಸದಸ್ಯರೆಲ್ಲ ಭಾಗವಹಿಸ್ತಾರೆ. ನಾಳೆ ಸಂಜೆಯೇ ದೆಹಲಿಗೆ ಹೋಗ್ತಿದ್ದೇವೆ. ದೇಶದ ಜನರ ಗಮನ ಸೆಳೆಯಲು ಈ ಪ್ರತಿಭಟನೆಯನ್ನು ಮಾಡ್ತಿದ್ದೇವೆ ಎಂದು ಹೇಳಿದರು.
ಇದು ಬಿಜೆಪಿ ವಿರುದ್ಧದ ಪ್ರತಿಭಟನೆ ಅಲ್ಲ, ಇದು ಬಿಜೆಪಿ, ಕಾಂಗ್ರೆಸ್ ರಾಜಕೀಯ ಪ್ರತಿಭಟನೆಯಲ್ಲ ಎಂದ ಸಿಎಂ ಇದು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ನಡೆಯುವ ಪ್ರತಿಭಟನೆ. ಹಣಕಾಸು ಹಂಚಿಕೆ ತಾರತಮ್ಯದ ಬಗ್ಗೆ ನಡೆಯುವ ಪ್ರತಿಭಟನೆ. ಬರಗಾಲದಲ್ಲಿ ಮಾಡಿದ ಮಲತಾಯಿ ಧೋರಣೆ ಬಗ್ಗೆ ಪ್ರತಿಭಟನೆ. ನಾವು ಒಕ್ಕೂಟ ವ್ಯವಸ್ಥೆಯನ್ನ ಒಪ್ಪಿಕೊಂಡಿದ್ದೇವೆ. ದೇಶ ಅಂದ್ರೆ ರಾಜ್ಯ, ಕೇಂದ್ರಾಡಳಿತ ಪ್ರದೇಶವೂ ಬಂತು ಎಂದ ಸಿಎಂ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ. ರಾಜ್ಯಗಳಿಂದ ವಸೂಲಿಯಾಗುವ ತೆರಿಗೆ ಕೇಂದ್ರಕ್ಕೂ ಬರುತ್ತದೆ. ರಾಜ್ಯಕ್ಕೂ ತೆರಿಗೆ ಬರುತ್ತದೆ. ಆದಾಯ, ಪೆಟ್ರೋಲ್, ಸೆಸ್, ಸರ್ಚಾರ್ಜ್‌ಗಳಿಂದ ತೆರಿಗೆ ಸಂಗ್ರಹವಾಗುತ್ತದೆ. ಈ ತೆರಿಗೆ ಹಣ ಕೇಂದ್ರ, ರಾಜ್ಯಕ್ಕೆ ಹಂಚಿಕೆಯಾಗಬೇಕು ಎಂದರು.
- ರಾಜ್ಯಕ್ಕೆ ನಷ್ಟವಾಗಿದ್ದು ಎಷ್ಟು?
- GST ಅನುಷ್ಠಾನದ ಕೊರತೆ – ₹59,274 ಕೋಟಿ
- 15ನೇ ಹಣಕಾಸು ಆಯೋಗ ತೆರಿಗೆ ಪಾಲು – ₹62,098 ಕೋಟಿ
- ಸೆಸ್ ಮತ್ತು ಸರ್ಚಾರ್ಜ್ – ₹55,000 ಕೋಟಿ
- 15ನೇ ಹಣಕಾಸು ಆಯೋಗ ವಿಶೇಷ ಅನುದಾನದ ವಂಚನೆ – ₹11,495 ಕೋಟಿ
- ಒಟ್ಟು ನಷ್ಟ- 187867 ಕೋಟಿ ರೂಪಾಯಿ
ಇನ್ನು, ಕೋವಿಡ್ ಸಂದರ್ಭದಲ್ಲೂ ಅನ್ಯಾಯ ಆಗಿದೆ, ನೆರೆ-ಬರ ಸಂದರ್ಭದಲ್ಲಿ ಅನುದಾನ ಕೊಟ್ಟಿಲ್ಲ, ರಾಜ್ಯದ ನೀರಾವರಿಗೆ ಅನುದಾನ ಕೊಡುತ್ತಿಲ್ಲ. ಭದ್ರಾಮೇಲ್ದಂಡೆ ಯೋಜನೆಗೆ ₹5300 ಕೋಟಿ ಕೊಟ್ಟಿಲ್ಲ. 2024-25ರ ಸಾಲಿನ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದ್ದು, ಪೆರಿಪರಲ್ ರಿಂಗ್ ರಸ್ತೆಗೆ ₹3000 ಕೋಟಿ ಬರಬೇಕು. ಜಲಮೂಲಗಳ ಅಭಿವೃದ್ಧಿಗೆ ₹3000 ಕೋಟಿ ಬರಬೇಕು. 5 ವರ್ಷದಲ್ಲಿ 73 ಸಾವಿರ ಕೋಟಿ ಕಡಿಮೆಯಾಗಿದೆ ಎಂದರು. ಈ ಹಿಂದೆ ನಮ್ಮ ರಾಜ್ಯಕ್ಕೆ 5465 ಕೋಟಿಯನ್ನ ಫೈನಾನ್ಸ್ ಕಮೀಷನ್ ಶಿಫಾರಸು ಮಾಡಿತ್ತು. ನಾನು ಈ ಬಗ್ಗೆ ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡಿದ್ದೆ. ಕೇಂದ್ರಕ್ಕೆ ಹೋಗಿ ಈ ಹಣ ತೆಗೆದುಕೊಳ್ಳಿ ಎಂದು ಯಡಿಯೂರಪ್ಪ,ಬೊಮ್ಮಾಯಿಗೆ ಹೇಳಿದ್ದೆ. ಆದ್ರೆ ನಿರ್ಮಲಾ ಸೀತಾರಾಮನ್ ಇದನ್ನ ರದ್ದು ಮಾಡಿದ್ರು. ಒಟ್ಟು 11495 ಕೋಟಿ ನಮಗೆ ಬರಬೇಕಿದೆ. ಒಟ್ಟು ಐದು ವರ್ಷದಲ್ಲಿ 73 ಸಾವಿರ ಕೋಟಿ ನಮಗೆ ಕಡಿಮೆಯಾಗಿದೆ ಎಂದು ಹೇಳಿದರು.
ಇನ್ನು, ಜಿಎಸ್‌ಟಿ ಅವೈಜ್ಙಾನಿಕ ಅಂತ ನಾವು ಹೇಳಿದ್ದೆವು. ಆದರೂ ಅವರು ಜಿಎಸ್‌ಟಿ ಜಾರಿ ಮಾಡಿದ್ರು ಎಂದ ಸಿಎಂ ಸಿದ್ದರಾಮಯ್ಯ, ನಮ್ಮ ಟ್ಯಾಕ್ಸ್ ಗ್ರೋಥ್ 15% ಇತ್ತು. ನಷ್ಟ ಆದ್ರೆ ಪರಿಹಾರದ ರೂಪದಲ್ಲಿ ತುಂಬಿಕೊಡ್ತೇವೆ ಅಂತ ಹೇಳಿದ್ರು. ಜಿಎಸ್ ಟಿ ಪರಿಹಾರ ಜೂನ್ 22ಕ್ಕೇ ನಿಲ್ಲಿಸಿಬಿಟ್ರು. ಈಗ ಜಿಎಸ್‌ಟಿ ಪರಿಹಾರ ನಮಗೆ ಬರ್ತಿಲ್ಲ, ಈಗ ನಾವು 15% ತಲುಪಲು ಸಾಧ್ಯ ಆಗ್ತಿಲ್ಲ. ಅದಕ್ಕೆ ಜಿಎಸ್ ಟಿ ಪರಿಹಾರ ಮುಂದುವರೆಸಿ ಎಂದಿದ್ದೇವೆ. ಕರ್ನಾಟಕದಿಂದ 4 ಲಕ್ಷ 30 ಸಾವಿರ ಕೋಟಿ ತೆರಿಗೆ ಸಂಗ್ರಹವಾಗ್ತಿದೆ. ಮಹಾರಾಷ್ಟ್ರ ಬಿಟ್ಟರೆ ನಮ್ಮ ರಾಜ್ಯವೇ ಎರಡನೆಯದು, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿದೆ ಎಂದು ಹೇಳಿದರು. ಇನ್ನು ಬಜೆಟ್ ಗಾತ್ರ ಕಡಿಮೆ ಇದ್ದಾಗ ಹೆಚ್ಚಿನ ಅನುದಾನ ಬಂತು. ಈಗ ಬಜೆಟ್ ಗಾತ್ರ ಹೆಚ್ಚಾದ್ರೂ ಅನುದಾನ ಕಡಿಮೆ ಬರ್ತಿದೆ. ಇದನ್ನ ಹಣಕಾಸು ಆಯೋಗದ ಮುಂದೆ ಸ್ಟ್ರಾಂಗ್ ಆಗಿ ಇಡ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಮಹದಾಯಿ ಯೋಜನೆಗೆ ಕೇಂದ್ರ ಕ್ಲಿಯರೆನ್ಸ್ ಕೊಟ್ಟಿಲ್ಲ, ಪರಿಸರ ಇಲಾಖೆ ಕ್ಲಿಯರೆನ್ಸ್ ಕೇಂದ್ರ ಸರ್ಕಾರ ಮಾಡಬೇಕು ಎಂದ ಸಿಎಂ ಸಿದ್ದರಾಮಯ್ಯ, ಈವರೆಗೆ ಕ್ಲಿಯರ್ ಮಾಡುವ ಕೆಲಸ ಅವರು ಮಾಡಿಲ್ಲ. ಅಪ್ಪರ್ ಕೃಷ್ಣಾ ನ್ಯಾಷನಲ್ ಪ್ರಾಜೆಕ್ಟ್ ಮಾಡ್ತೇವೆ ಅಂದ್ರು, ಸ್ಟೇ ಕೊಟ್ಟಿದ್ದಾರೆ ವೆಕೆಟ್ ಮಾಡಿಸಿಲ್ಲ. ನಮಗೆ ಗೆಜೆಟ್ ನೊಟಿಫಿಕೇಶನ್ ಮಾಡಿಕೊಟ್ಟಿಲ್ಲ, ಮೇಕೆದಾಟು ಯೋಜನೆಗೆ ಅನುಮತಿ ಕೊಟ್ಟಿಲ್ಲ ಎಂದರು.
ಹಣಕಾಸು ಆಯೋಗದಿಂದ ಕೇಂದ್ರ ಸರ್ಕಾರ ಹಣ ಹಂಚಿಕೆ ಮಾಡುತ್ತದೆ. ಇಲ್ಲಿವರೆಗೆ 15 ಫೈನಾನ್ಸ್ ಕಮಿಷನ್‌ಗಳಾಗಿವೆ ಎಂದ ಸಿಎಂ ಸಿದ್ದರಾಮಯ್ಯ, ರಿಪೋರ್ಟ್ ಪ್ರಕಾರ ಹಣ ಹಂಚಿಕೆಯಾಗುತ್ತದೆ. 14ನೇ ಹಣಕಾಸು ಆಯೋಗ 15/16ರಿಂದ 19/20 ರವರೆಗೆ ರಚನೆಯಾಗಿತ್ತು. ಈಗ 16 ನೇ ಹಣಕಾಸು ಆಯೋಗ ರಚನೆಯಾಗಿದೆ. 14ನೇ ಫೈನಾನ್ಸ್ ಕಮೀಷನ್ 42% ತೆರಿಗೆ ಹಂಚಿತ್ತು, 15ನೇ ಕಮೀಷನ್ ನಲ್ಲಿ ಅದು 41% ಗೆ ಇಳಿಯಿತು. 14ನೇ ಕಮಿಷನ್ ವೇಳೆ ಮೋದಿ ಪ್ರಧಾನಿಯಾಗಿದ್ದು, 14ನೇ ಹಣಕಾಸು ಆಯೋಗ 4.7% ಇದ್ದಿದ್ದು, 15ನೇ ಆಯೋಗದಲ್ಲಿ 3.64% ಕಡಿತ ಆಯ್ತು. ನಮಗೆ ತೆರಿಗೆ ಹಂಚಿಕೆ 1.07% ಕಡಿಮೆಯಾಗಿದೆ. ಕಳೆದ 4 ವರ್ಷಗಳಲ್ಲಿ 45,000 ಕೋಟಿ ಕಡಿಮೆಯಾಗಿದೆ. ಇಲ್ಲಿಯವರೆಗೆ 62.98 ಸಾವಿರ ಕೋಟಿ ಕಡಿಮೆಯಾಗಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ, 223 ತಾಲೂಕುಗಳನ್ನು ಬರ ಎಂದು ಘೋಷಿಸಿದ್ದೇವೆ ಎಂದ ಸಿಎಂ, ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋಗಿದೆ. ಕೇಂದ್ರಕ್ಕೆ ರಿಪೋರ್ಟ್ ಕೂಡ ಸಲ್ಲಿಸಿದೆ. ನಮ್ಮ ಸಚಿವರು ಕಾದಿರುವಳು ಶಬರಿ ಎನ್ನುವಂತೆ ಭೇಟಿಗೆ ಅವಕಾಶ ಕೇಳಿ ಕೇಳಿ ಸುಸ್ತಾದ್ರು. ಕೊನೆಗೆ ಭೇಟಿಗೆ ಅವಕಾಶ ಕೊಟ್ರು, ನಾನು ಪ್ರಧಾನಿ, ಅಮಿತ್ ಶಾ ಭೇಟಿ ಮಾಡಿದ್ದೆ. 23ಕ್ಕೆ ಮೀಟಿಂಗ್ ಕರೆದಿದ್ದೇನೆ ಅಂದ್ರು, ಇವತ್ತಿನವರೆಗೆ ಮೀಟಿಂಗ್ ಕರೆದಿಲ್ಲ, ಪ್ರಧಾನಿ ಬೆಂಗಳೂರಿಗೆ ಬಂದಿದ್ದರು, ಆಗ ಅವರಿಗೆ ಮತ್ತೊಮ್ಮೆ ಮನವಿ ಮಾಡಿದ್ದೆ. ಹೇಳ್ತೇವೆ ಅಂದವರು ಹೇಳಲೇ ಇಲ್ಲ. ಬರಗಾಲದಲ್ಲಿ 37 ಸಾವಿರ ಕೋಟಿ ನಷ್ಟವಾಗಿದೆ. 17901 ಕೋಟಿ ಪರಿಹಾರ ಕೇಳಿದ್ದೇವೆ. ಎನ್‌ಡಿಆರ್‌ಎಫ್‌ನಡಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಆರೋಪ ಮಾಡಿದರು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura