ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಆತಂಕ ಹುಟ್ಟಿಸಿದೆ ಕೋವಿಡ್‌ ಗಿಂತಲೂ ಅಪಾಯಕಾರಿ ಕಾಯಿಲೆ ಡಿಸೀಸ್‌ X; 5 ಕೋಟಿ ಜನರನ್ನು ಬಲಿ ಪಡೆಯುವ ಆತಂಕ

1 min read

ಡಿಸೀಸ್‌ ಎಕ್ಸ್‌ ಅನ್ನೋದು ಹಾಲಿವುಡ್‌ ಸಿನೆಮಾದ ಹೆಸರಿನಂತಿದೆ. ಆದರೆ ಇದೊಂದು ಗಂಭೀರ ಕಾಯಿಲೆ. ಭವಿಷ್ಯದಲ್ಲಿ ಲಕ್ಷಾಂತರ ಜನರನ್ನು ಬಲಿಪಡೆಯಬಹುದು. ಹಾಗಾಗಿ ಡಿಸೀಸ್‌ ಎಕ್ಸ್‌ ಅನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲೇಬೇಕು.

COVID-19 ಸಾಂಕ್ರಾಮಿಕ ಎಬ್ಬಿಸಿರೋ ವಿನಾಶದ ಕಹಿ ನೆನಪುಗಳು ಇಂದಿಗೂ ನಮ್ಮ ಮನಸ್ಸಿನಿಂದ ಮಾಸಿಲ್ಲ.

ಇದರ ನಡುವೆಯೇ ಡಿಸೀಸ್ ಎಕ್ಸ್ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಇದೊಂದು ನಿಗೂಢ ಹಾಗೂ ಮಾರಣಾಂತಿಕ ಕಾಯಿಲೆ ಎಂದು ಹೇಳಲಾಗುತ್ತಿದೆ.

ಡಿಸೀಸ್ ಎಕ್ಸ್ ಎಷ್ಟು ಅಪಾಯಕಾರಿ 

ಈ ರೋಗವು ಭವಿಷ್ಯದಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೂಪವನ್ನು ಪಡೆಯಬಹುದು ಎಂದು ಊಹಿಸಲಾಗಿದೆ. ಇದು ಪ್ರತ್ಯೇಕ ಕಾಯಿಲೆಯಲ್ಲ, ಆದರೆ ಈ ಸೋಂಕು ಜನರಲ್ಲಿ ಬಹಳ ವೇಗವಾಗಿ ಹರಡುತ್ತದೆ. ಕಾಂಗೋದಲ್ಲಿ ಓರ್ವನಲ್ಲಿ ಈ ಸೋಂಕು ಪತ್ತೆಯಾಗಿದೆ. ಆತ ತೀವ್ರ ಜ್ವರದಿಂದ ಬಳಲುತ್ತಿದ್ದ. ಜೊತೆಗೆ ಆಂತರಿಕ ರಕ್ತಸ್ರಾವವೂ ಇತ್ತು. ಎಬೋಲಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಬಂದಿದೆ. ಹಾಗಾಗಿ ಈತ ಡಿಸೀಸ್‌ ಎಕ್ಸ್‌ಗೆ ತುತ್ತಾದ ಮೊದಲ ರೋಗಿಯೆಂದು ಹೇಳಲಾಗುತ್ತಿದೆ.

ಕೋವಿಡ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿಯಂತೆ ಈ ಡಿಸೀಸ್‌ ಎಕ್ಸ್‌. ತಜ್ಞರು ಇದನ್ನು 1918-1920ರ ಅಪಾಯಕಾರಿ ಸ್ಪ್ಯಾನಿಷ್ ಜ್ವರದೊಂದಿಗೆ ಹೋಲಿಸಿದ್ದಾರೆ. ‘ವಿಶ್ವ ಆರೋಗ್ಯ ಸಂಸ್ಥೆ’ ಇದಕ್ಕೆ ಡಿಸೀಸ್ ಎಕ್ಸ್ ಎಂದು ಹೆಸರಿಸಿದೆ. WHO ವೈದ್ಯಕೀಯ ತಜ್ಞರ ಪ್ರಕಾರ ಈ ರೋಗ ಬಂದರೆ 20 ಪಟ್ಟು ಹೆಚ್ಚು ಸಾವುಗಳು ಸಂಭವಿಸುತ್ತವೆ. ಇದರಿಂದ ಸುಮಾರು 5 ಕೋಟಿ ಜನರು ಸಾಯುವ ಭೀತಿ ಎದುರಾಗಿದೆ.

ಈ ಸಾಂಕ್ರಾಮಿಕ ರೋಗವು ಎಷ್ಟು ಅಪಾಯಕಾರಿ ಎಂದರೆ ಭೂಮಿಯ ಮೇಲೆ ಒಂದೇ ಒಂದು ವೈರಸ್ ಉಳಿದರೂ ಸಾಕು ಲಕ್ಷ ಲಕ್ಷ ಜನರಿಗೆ ಸೋಂಕು ತಗುಲಬಹುದು. ಈ ವೈರಸ್‌ಗಳು ಬಹಳ ವೇಗವಾಗಿ ರೂಪಾಂತರಗೊಳ್ಳುವುದರಿಂದ ಇದು ಸಂಭವಿಸುತ್ತದೆ. 1918-19ರಲ್ಲಿ ಸ್ಪ್ಯಾನಿಷ್ ಫೀವರ್ ಎಂಬ ಸಾಂಕ್ರಾಮಿಕ ರೋಗದಿಂದ ಜಗತ್ತಿನಾದ್ಯಂತ 5 ಕೋಟಿ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಡಿಸೀಸ್‌ ಎಕ್ಸ್‌ ಕೂಡ ಅದನ್ನೇ ಹೋಲುತ್ತಿದೆ.

ಡಿಸೀಸ್ ಎಕ್ಸ್ ಗಂಭೀರ ಸ್ವರೂಪ ಪಡೆಯುವ ಮುನ್ನ ಬ್ರಿಟಿಷ್ ವಿಜ್ಞಾನಿಗಳು ಸಿದ್ಧತೆ ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದಾರೆ. ವೈರಸ್‌ ವಿರುದ್ಧ ಹೋರಾಡಬಲ್ಲ ಲಸಿಕೆ ತಯಾರಿಸಲು ಪ್ರಾರಂಭಿಸಿದ್ದು, 25 ರೀತಿಯ ವೈರಸ್‌ಗಳನ್ನು ಸಹ ಅಧ್ಯಯನ ಮಾಡುತ್ತಿದ್ದಾರೆ. ಪ್ರಾಣಿಗಳಲ್ಲಿ ಕಂಡುಬರುವ ವೈರಸ್‌ಗಳನ್ನು ಸಹ ಇದು ಒಳಗೊಂಡಿದೆ. ಹವಾಮಾನ ಬದಲಾವಣೆಯಿಂದಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಹಲವಾರು ವೈರಸ್‌ಗಳಿವೆ.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

About The Author

Leave a Reply

Your email address will not be published. Required fields are marked *