ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ತರಗತಿಯಲ್ಲಿ ಪಾಠ ಕೇಳುತ್ತಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ ವಿದ್ಯಾರ್ಥಿ

1 min read

ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ಗುರುವಾರ ಬೆಳಗ್ಗೆ ಇಂದೋರ್‌ನಲ್ಲಿ ಕೋಚಿಂಗ್ ಕ್ಲಾಸ್‌ನಲ್ಲಿ ಪಾಠ ಕೇಳುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ರಾಜಾ (18) ಮೃತ ವಿದ್ಯಾರ್ಥಿ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ನಿವಾಸಿಯಾಗಿದ್ದಾನೆ.

ವಿದ್ಯಾರ್ಥಿ ಉನ್ನತ ವ್ಯಾಸಂಗಕ್ಕಾಗಿ ಇಂದೋರ್‌ನಲ್ಲಿ ನೆಲೆಸಿದ್ದಾನೆ.

ರಾಜಾ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗಳಿಗೆ ಅದೇ ಜಿಲ್ಲೆಯ ಭಾವರ್ಕುವಾದಲ್ಲಿ ಕೋಚಿಂಗ್ ಇನ್ಸ್ಟಿಟ್ಯೂಟ್ ಸೇರಿದ್ದನು. ರಾಜಾ ಪ್ರತಿದಿನದಂತೆ ಇಂದು ಬೆಳಗ್ಗೆಯೂ ಕೋಚಿಂಗ್ ಸೆಂಟರ್​​ಗೆ ಬಂದು ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಆದರೆ ರಾಜಾ ಏಕಾಏಕಿ ತರಗತಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಎದೆಯಲ್ಲಿ ನೋವಿನಿಂದ ನರಳುತ್ತಾ ಕುಳಿತಲ್ಲೇ ಕುಸಿದು ಬಿದ್ದ. ಇದನ್ನು ಗಮನಿಸಿದ ಸಹ ವಿದ್ಯಾರ್ಥಿಗಳು ರಾಜಾ ಅವರನ್ನು ಎತ್ತಿ ಬೆಂಚಿನ ಮೇಲೆ ಕೂರಿಸಿದರು. ರಾಜ ಅದಾಗಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ.

ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ರಾಜಾ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ತರಗತಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಡೀ ಘಟನೆ ದಾಖಲಾಗಿದೆ

About The Author

Leave a Reply

Your email address will not be published. Required fields are marked *