ಮುಸ್ಲಿಂ ಮುಖಂಡನ ಮನೆಯಲ್ಲಿ ಅಯ್ಯಪ್ಪಸ್ವಾಮಿ ಮಲಾಧಾರಿಗಳಿಗೆ ಅನ್ನಸಂತರ್ಪಣೆ
1 min readಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ ನಡೆಸಿ ಪ್ರಸಾದ ಹಂಚಲಾಗಿದೆ. ಸಮುದಾಯದ ಮುಖಂಡನ ಈ ನಡೆ ಭಾವೈಕ್ಯತೆಯ ಸಂದೇಶ ಸಾರಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿರುವ ಕಾಶಿಂ ಅಲಿ ಮುದ್ದಾಬಳ್ಳಿಯವರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಮಲಾಧಾರಿಗಳು ಪೂಜೆ, ಭಜನೆ ಮಾಡಿದ್ದಾರೆ.
ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕಾಶಿಂ ಅಲಿಯವರು ತಮ್ಮ ಮನೆಯಲ್ಲೇ ಅನ್ನಸಂತರ್ಪಣೆ ಮಾಡಿದರು. ಮುಸ್ಲಿಂ ಮನೆಯಲ್ಲಿ ಹಿಂದೂ ಧರ್ಮದ ಆಚರಣೆಗಳಂತೆ ಅದ್ದೂರಿಯಾಗಿ ಅಯ್ಯಪ್ಪಸ್ವಾಮಿ ಪೂಜೆ ನಡೆದಿದೆ. ಪೂಜೆ ನಂತರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕುಟುಂಬ ಸತ್ಕರಿಸಿದೆ.
ಕಾಶಿಂ ಅಲಿ ಮುದ್ದಾಬಳ್ಳಿ ಕುಟುಂಬದವರು ಕೂಡ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಜೊತೆ ಅಯ್ಯಪ್ಪಸ್ವಾಮಿಯ ಕುರಿತು ಭಜನೆ ಮಾಡಿದರು. ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮುದ್ದಾಬಳ್ಳಿ ಅವರು ಮಾತನಾಡಿ, ಎಲ್ಲಾ ಧರ್ಮಗಳು ಒಂದೇ, ಎಲ್ಲಾ ಧರ್ಮದ ಸಾರಗಳು ಗೊತ್ತಿರಬೇಕು ಎಂದರು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura, ct6v, ctvnews