ಕರ್ನಾಟಕಕ್ಕೆ ಬಂದ ಹೊರ ರಾಜ್ಯದವರು ಕನ್ನಡ ಕಲಿಯ ಬೇಕು- ನಟಿ ಪೂಜಾಗಾಂಧಿ
1 min readಕರ್ನಾಟಕಕ್ಕೆ ಬಂದ ಹೊರ ರಾಜ್ಯದವರು ಕನ್ನಡ ಕಲಿಯ ಬೇಕು- ನಟಿ ಪೂಜಾಗಾಂಧಿ
ದೊಡ್ಡಬಳ್ಳಾಪುರದ ನಿವೇದಿತಾ ಶಾಲೆಯ ವಾಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಟಿ
ದೊಡ್ಡಬಳ್ಳಾಪುರ :
ನಗರದ ನಿವೇದಿತಾ ಶಾಲೆಯ 43ನೇ ವಾಷಿಕೋತ್ಸವ ಸಮಾರಂಭದಲ್ಲಿ ನಟಿ ಪೂಜಾಗಾಂಧಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ. ಮಕ್ಕಳ ಡ್ಯಾನ್ಸ್ ನೋಡುತ್ತ ಮಕ್ಕಳೊಂದಿಗೆ ಮಕ್ಕಳಂತೆ ಬೆರತೆ ಅವರು ಪುಟಾಣಿ ಮಕ್ಕಳ ಜೊತೆ ಕನ್ನಡ ಹಾಡುಗಳನ್ನ ಹಾಡಿದರು
ಕುವೆಂಪು ರವರ ಹುಟ್ಟಿದ ದಿನವೇ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದ್ದಾರೆ ತುಂಬಾ ಸಂತೋಷವಾಯಿತು ಎಂದರು ಹಾಗೆ ಎಷ್ಟೋ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಒಳ್ಳೆ ವಿದ್ಯಾ ಸಂಸ್ಥೆ ಸಿಗುವುದು ಕಷ್ಟ ನೀವೆಲ್ಲ ಅದೃಷ್ಟವಂತರು ಉತ್ತಮ ಶಾಲೆಯಲ್ಲಿ ಕಲಿಯುತ್ತಿದ್ದೀರಿ ಉತ್ತಮ ಮನುಷ್ಯರಾಗಿ ಎಂದು ಹರಸಿದರು
ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾನು ಅನ್ಯ ರಾಜ್ಯದಿಂದ ಬಂದಿದ್ದರು ನನ್ನ ಕರ್ಮಭೂಮಿ ಕರ್ನಾಟಕ, ಜನರು ಕೊಟ್ಟಿರುವ ಪ್ರೀತಿ ನೋಡಿದ್ದಾಗ ನಾನು ಕನ್ನಡತಿ ಎಂದು ಹೆಮ್ಮೆಯಿಂದ ಹೇಳುತ್ತೇನೆ, ನನಗೆ ಇವತ್ತು ಕನ್ನಡ ಓದಲು ಬರೆಯಲು ಬರುತ್ತೆ, ಈ ನೆಲಕ್ಕೆ ಬಂದ ಮೇಲೆ ಕನ್ನಡ ಕಲಿಯಲೇ ಬೇಕು ಪೂರ್ತಿಯಾಗಿ ಕನ್ನಡ ಕಲಿಯದೆ ಇದ್ರು ಸ್ವಲ್ಪ ಆದ್ರೂ ಕನ್ನಡ ಕಲಿಯಬೇಕೆಂದು ಹೊರ ರಾಜ್ಯದ ಇಲ್ಲಿನ ನಿವಾಸಿಗಳಿಗೆ ಹೇಳಿದರು