ಖಾಸಗಿ ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ
1 min readಖಾಸಗಿ ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ ಶಿಡ್ಲಘಟ್ಟ ತಾಲೂಕಿನ ಕ್ಲಿನಿಕ್ ಗಳ ಪರಿಶೀಲನೆ
ಶಿಡ್ಲಘಟ್ಟ ತಾಲೂಕಿನ ವಿವಿಧ ಕಡೆ ನಿಯಮ ಮೀರಿ ನಡೆಸುತ್ತಿದ್ದ 7 ಖಾಸಗಿ ಕ್ಲಿನಿಕ್ ಗಳನ್ನು ಮುಚ್ಚಿಸಿದ ಆರೋಗ್ಯ ಅಧಿಕಾರಿಗಳು, ಸಾರ್ವಜನಿಕರು ವೈದ್ಯರ ವಿದ್ಯಾರ್ಹತೆ ಗಮನಿಸಿ ಚಿಕಿತ್ಸೆ ಪಡೆಯಬೇಕೆಂದು ಹೇಳಿದರು.
ಕೆ.ಪಿ.ಎಂ.ಎ ನೋಂದಣಿಯಾಗಿರದ ತಾಲ್ಲೂಕಿನ 7 ಖಾಸಗಿ ಕ್ಲಿನಿಕ್ ಗಳನ್ನು ವೈದ್ಯಾಧಿಕಾರಿಗಳ ತಂಡ ಮುಚ್ಚಿಸಿದ್ದಾರೆ. ಬಶೆಟ್ಟಹಳ್ಳಿಯಲ್ಲಿ 2, ದಿಬ್ಬೂರಹಳ್ಳಿಯಲ್ಲಿ 2, ಕುಂದಲಗುರ್ಕಿಯಲ್ಲಿ 1 ಮತ್ತು ಸದ್ದಹಳ್ಳಿ ಕ್ರಾಸ್1 ದೇವಪ್ಪನ ಗುಡಿಯಲ್ಲಿ 1 ಕ್ಲಿನಿಕ್ ಗಳನ್ನು ಮುಚ್ಚಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಕೆ.ಪಿ.ಎಂ.ಎ ನೋಂದಣಿಯಾಗಿರದ ಏಳು ಕ್ಲಿನಿಕ್ ಗಳನ್ನು ಮುಚ್ಚಿಸಲಾಗಿದೆ. ಅವರಿಗೆ ನೋಟಿಸ್ ನೀಡಲಾಗಿದೆ. ಯಾವುದೇ ಕ್ಲಿನಿಕ್ ಮಾಡಬೇಕಾದರೆ ವಿದ್ಯಾರ್ಹತೆಗೆ ಅನುಗುಣವಾಗಿ ಕೆ.ಪಿ.ಎಂ.ಎ ಯಲ್ಲಿ ಅರ್ಜಿ ಸಲ್ಲಿಸಿ, ಸ್ಥಳ ಪರಿಶೀಲನೆ ನಂತರ ಡಿ.ಸಿ ಮತ್ತು ಡಿ.ಎಚ್.ಒ ಅವರಿಂದ ನೋಂದಣಿ ಪ್ರಮಾಣಪತ್ರ ಪಡೆಯಬೇಕು ಎಂದರು.
ವಿದ್ಯಾರ್ಹತೆಯಿಲ್ಲದೆ ರೋಗಿಗಳ ಜೀವದೊಂದಿಗೆ ಚೆಲ್ಲಾಟ ಆಡಬಾರದು. ಬಯೋ ಮೆಡಿಕಲ್ ವೇಸ್ಟ್ ಬಗ್ಗೆ ಲೈಸೆನ್ಸ್ ಹೊಂದಿರಬೇಕು. ಪೊಲ್ಯೂಶನ್ ಬೋರ್ಡ್ ನಲ್ಲಿ ಪ್ರಮಾಣಪತ್ರ ಹೊಂದಿರಬೇಕು. ಸಾರ್ವಜನಿಕರು ವೈದ್ಯರ ವಿದ್ಯಾರ್ಹತೆಯನ್ನು ಗಮನಿಸಬೇಕುಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura