ಗುಡಿಬಂಡೆಯಲ್ಲಿ ಕುವೆಂಪು ಜನ್ಮದಿನ
1 min readಗುಡಿಬಂಡೆಯಲ್ಲಿ ಕುವೆಂಪು ಜನ್ಮದಿನ ವಿಶ್ವ ಮಾನವ ಸಂದೇಶ ಪಾಲಿಸಲು ಕರೆ
ಕುವೆಂಪು ಅವರ ವಿಶ್ವಮಾನವ ಕಲ್ಪನೆ ಎಲ್ಲ ಕಾಲಕ್ಕೂ ಪ್ರಸ್ತುತ. ಮನುಜಮತ ವಿಶ್ವಪಥ ಎಂಬ ಕವಿ ಕಲ್ಪನೆಯಂತೆ ವಿಶಾಲ ಮನೋಭಾವದೊಂದಿಗೆ ಬದುಕು ಸಾಗಿದಾಗ ನಿರ್ಮಾಣವಾಗುವ ಸಮಾಜದ ಕಲ್ಪನೆ ನಿಜಕ್ಕೂ ಸುಂದರ. ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ರಚಿಸದ ಸಾಹಿತ್ಯ ಪ್ರಕಾರವಿಲ್ಲ. ಹಾಗಾಗಿ ಕುವೆಂಪು ಅವರನ್ನು ಸಾಹಿತ್ಯ ಲೋಕದ ದೃವತಾರೆ ಎಂದು ಕರೆಯಲಾಗುತ್ತದೆ ಎಂದು ಶಿಕ್ಷಕಿ ಡಿ.ಎಲ್.ಪರಿಮಳ ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಗುಡಿಬಂಡೆ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡಲ್ಲಿ ಕನ್ನಡಕ್ಕೆ ಪ್ರಥಮ ಮತ್ತು ಪೂಜ್ಯ ಸ್ಥಾನ ಸಿಗಲಿ ಎಂದ ಮಹಾನ್ ಚೇತನ, ನಾಡಿನ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಇಒ ಮುನೇಗೌಡ, ಮಂಜುನಾಥ್ ರೆಡ್ಡಿ ಮಾತನಾಡಿದರು. ವೇಣುಗೋಪಾಲ್, ಇಸಿಒ ಚಂದ್ರಶೇಖರ್ , ಪಶು ಇಲಾಖೆಯ ರವೀಂದ್ರ ಇದ್ದರು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura