ಹಾಡುಹಗಲೇ ಪೆಟ್ರೋಲ್ ಬಂಕ್ ನಲ್ಲಿ ಯುವಕನ ಕೊಲೆ
1 min readಹಾಡುಹಗಲೇ ಪೆಟ್ರೋಲ್ ಬಂಕ್ ನಲ್ಲಿ ಯುವಕನ ಕೊಲೆ ಪೆಟ್ರೋಲ್ ಬಂಕ್ ನಲ್ಲಿ ಇರಿದು ಕೊಂದ ಪಾಪಿಗಳು
ಹಾಡಹಗಲಿನಲ್ಲೇ ಯುವಕನೊಬ್ಬನನ್ನು ಆರ್.ಆರ್ ಬಾರ್ ಕ್ಯಾಷಿಯರ್ ಚಾಕುವುನಿಂದ ಇರಿದು ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಚಿಂತಾಮಣಿ ಆರ್‌ಆರ್ ಬಾರ್ ಸಮೀಪದ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಕೊಲೆಯಾಗಿರುವ ಯುವಕ ಚಿಂತಾಮಣಿ ತಾಲೂಕಿನ ಬುರುಡಗುಂಟೆ ಗ್ರಾಮದ ಚಲಪತಿ ಎಂಬುವರ ಮಗ 25 ವರ್ಷದ ಹೇಮಂತ್ ಎಂದು ಗುರ್ತಿಸಲಾಗಿದೆ. ಕೊಲೆ ಮಾಡಿದ ಯುವಕ ಆರ್.ಆರ್ ಬಾರ್ ಕ್ಯಾಷಿಯರ್ ರವಿ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮದ್ಯಾಹ್ನ 2.30ರ ಸಮಯದಲ್ಲಿ ಆರ್.ಆರ್ ಬಾರ್ ಬಳಿ ಇರುವ ಪೆಟ್ರೋಲ್ ಬಂಕ್ ಕೊಠಡಿಗೆ ಬಂದ ಬಾರ್ ಕ್ಯಾಷಿಯರ್ ರವಿ ಪೆಟ್ರೋಲ್ ಬಂಕ್ ಕೊಠಡಿಯಲ್ಲಿ ಮಲಗಿದ್ದ ಹೇಮಂತ್ ಬಳಿ ಬಂದು ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಬಾರ್ ಕ್ಯಾಷಿಯರ್ ರವಿ ಹೇಮಂತ್ ನನ್ನು ಚಾಕುವಿನಿಂದ ಇರಿದು ಭರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿ, ನಂತರ ಚಿಂತಾಮಣಿ ನಗರ ಪೊಲಿಸ್ ಠಾಣೆಗೆ ತೇರಳಿ ಶರಣಾಗಿದ್ದಾನೆ.
ಕೊಲೆಯಾದ ಯುವಕ ಹೇಮಂತ್ ಕೆಲ ದಿನಗಳ ಹಿಂದೆ ಇದೇ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದ್ದು, ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮುರಳಿದರ್, ನಗರಠಾಣೆ ಸಿಐ ರಂಗಸ್ವಾಮಯ್ಯ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶಿಲನೇ ನಡೆಸಿದ್ದಾರೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura