ಬಿ.ಎಲ್. ಲೋಕೇಶ್ ಕುಮಾರ್ ಇನ್ನಿಲ್ಲ.
1 min readಆತ್ಮೀಯ ಸ್ನೇಹಿತರು ಬಲಿಜ ಯುವ ಮುಖಂಡರು ಸರಳ ಜೀವಿ ಬಡವರ ಬಂಧು ನಗರಸಭೆ ಮಾಜಿ ಅಧ್ಯಕ್ಷರು ಆದ ಬಿ.ಎಲ್. ಲೋಕೇಶ್ ಕುಮಾರ್ ಇನ್ನಿಲ್ಲ.
ಬಿ.ಎಲ್. ಲೋಕೇಶ್ ಕುಮಾರ್ ಇನ್ನಿಲ್ಲ. ಹೌದು, ನಗರಸಭೆ ಸದಸ್ಯರು, ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿದ್ದ ಬಿ.ಎಲ್. ಲೋಕೇಶ್ ಕುಮಾರ್ ಅವರು ನಿಧನರಾಗಿದ್ದಾರೆ. ಗುರುವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾದ ಲೋಕೇಶ್ ಅವರನ್ನು ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದು, ಆ ವೇಳೆಗಾಗಲೇ ಅವರು ಕೊನೆಯುಸಿರು ಎಳೆದಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಲೋಕೇಶ್ ಅವರು ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರಾಗಿ 2010 ರಿಂದ 2012ರ ವರೆಗೂ ಕಾರ್ಯನಿರ್ವಹಿಸಿದ್ದರು. ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಚಿಕ್ಕಬಳ್ಳಾಪುರದಲ್ಲಿ ಐಡಿಎಎಸ್ಎಂಟಿ ನಿವೇಶನಗಳನ್ನು ಮಾಡಿ ಬಡವರಿಗೂ ಸೂರು ಕಲ್ಪಿಸುವ ಜನೋಪಕಾರಿ ಕೆಲಸ ಮಾಡಿದತು. ಅಲ್ಲದೆ ಇವರು ಅಧ್ಹಕ್ಷರಾಗಿದ್ದ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿದ್ದರು.
ಲೋಕೇಶ್ ಅವರ ಅಂತ್ಯಕ್ರಿಯೆ ಚಿಕ್ಕಬಳ್ಳಾಪುರದಲ್ಲಿಯೇ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಚಿಕ್ಕಬಳ್ಳಾಪುರದ ವೆಂಕಟೇನಹಳ್ಳಿ ಕಲ್ಯಾಣ ಮಂಟಪದ ಮಾಲೀಕರೂ ಲೋಕೇಶ್ ಅವರೇ ಆಗಿದ್ದು, ಚಿಕ್ಕಬಳ್ಳಾಪುರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ನಂತರ ಅಂತ್ಯಕ್ರಿಯೆ ನಡೆಸುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura