ಕನ್ನಡ ನಾಮಫಲಕ ಹಾಕಲು ಆಗ್ರಹಿಸಿ ಕರವೇ ಜಾಥಾ
1 min readಕನ್ನಡ ನಾಮಫಲಕ ಹಾಕಲು ಆಗ್ರಹಿಸಿ ಕರವೇ ಜಾಥಾ ದೇವನಹಳ್ಳಿಯಿಂದ ಕಬ್ಬನ್ ಪಾರ್ಕಿನವರೆಗೂ ಜಾಥಾ ಮಾರ್ಗ ಮಧ್ಯೆ ಪರ ಭಾಷಾ ಬ್ಯಾನೆರ್ ಕಿತ್ತ ಕರವೇ ಸದಸ್ಯರು
ವಾಣಿಜ್ಯ ಮಳಿಗೆಗಳಲ್ಲಿ ಶೇಕಡಾ 60 ರಷ್ಟು ಕನ್ನಡ ನಾಮಫಲಕ ಹಾಕುವಂತೆ ಒತ್ತಾಯಿಸಿ ಕರವೇಯಿಂದ ಜಾಥಾ ಅಯೋಜಿಸಿದ್ದು, ದೇವನಹಳ್ಳಿಯ ಸಾದಹಳ್ಳಿಗೇಟ್ ನಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ವರೆಗೂ ಪ್ರತಿಭಟನಾ ಜಾಥಾ ನಡೆಯಲಿದೆ.
ಸಾದಹಳ್ಳಿ ಗೇಟ್ ಬಳಿಯೇ ಜಾಹೀರಾತು ಫಲಕಗಳನ್ನ ಕಾರ್ಯಕರ್ತರು ಹರಿದು ಹಾಕಿ ಅಕ್ರೋಶ ವ್ಯಕ್ತಪಡಿಸಿದರು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ನಾರಾಯಣಗೌಡ ಸೇರಿದಂತೆ ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದರು.
ಕನ್ನಡ ನಾಮಫಲಕ ಹಾಕುವಂತೆ ಒತ್ತಾಯಿಸಿ ಸಾದಹಳ್ಳಿ ಗೇಟ್ ಬಳಿ ಕರವೇ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು, ಇಂಗ್ಲಿಷ್ ಬೋರ್ಡ್ ಗಳನ್ನ ಹಾಕಿದ್ದ ವಾಣಿಜ್ಯ ಮಳಿಗೆಗಳ ಜಾಹೀರಾತು ಫಲಕಗಳನ್ನ ಹರಿದು ಹಾಕಿದ್ರು, ಲೈಟಿಂಗ್ ಬೋರ್ಡ್ ಗಳನ್ನ ಹೊಡೆದು ಹಾಕಿದ್ರು, ಟೋಲ್ ಬಳಿ ಹಾಕಿದ್ದ ಬೃಹತ್ ಜಾಹೀರಾತು ಫಲಕಗಳನ್ನ ಹಾರಿದು ಹಾಕಿದ ಕರವೇ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸದರು.
ಬೆಂಗಳೂರಿನತ್ತ ಹೊರಟಿದ್ದ ಜಾಥಾ ತಡೆದ ಪೊಲೀಸರು ನಾರಾಯಣಗೌಡ ಸೇರಿದಂತೆ ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ, ಪೊಲೀಸ್ ಇಲಾಖೆಯಲ್ಲಿ ಶೇ. 100 ರಷ್ಟು ಪೊಲೀಸರು ಕನ್ನಡಿಗರೇ ಇದ್ದಾರೆ, ಆದರೆ ಹೊರಗಿನಿಂದ ಬಂದಿರುವ ಪೊಲೀಸ್ ಮೇಲಾಧಿಕಾರಿಗಳು ಕೆಳಗಿನ ಅಧಿಕಾರಿಗಳನ್ನ ಬಳಸಿಕೊಂಡು ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾತ್ರಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಜೊತೆ ಮಾತನಾಡಿದ್ದು, ಜಾಥಾಗೆ ಅವಕಾಶ ನೀಡಿದ್ದಾರೆ, ಪೊಲೀಸರೂ ಅವಕಾಶ ನೀಡದಿದ್ದಾರೆ. ಬೆಂಗಳೂರಿನಲ್ಲಿ ಆಗುವ ಅನಾಹುತಕ್ಕೆ ಅವರೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.