ಮಂತ್ರ ಮಾಂಗಲ್ಯದ ಮೂಲಕ ಅಂತರ್ಜಾತಿ ವಿವಾಹ

ದನಗಳ ಅಕ್ರಮ ಸಾಗಾಟ ಪತ್ತೆ

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗೆ ಹೊರಟ ಕಾರ್ಯಕರ್ತರು

ಸೆಪ್ಟೆಂಬರ್‌ಗೆ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ವರದಿ

April 18, 2025

Ctv News Kannada

Chikkaballapura

ಅಂಧಕಾಸುರ ಸಂಹಾರ: ನಂಜನಗೂಡಿನಲ್ಲಿ ಭಕ್ತರು ಹಾಗೂ ಪ್ರಗತಿಪರ ಹೋರಾಟಗಾರರ ನಡುವೆ ವಾಗ್ವಾದ

1 min read

ಅಂಧಕಾಸುರ ಸಂಹಾರ: ನಂಜನಗೂಡಿನಲ್ಲಿ ಭಕ್ತರು ಹಾಗೂ ಪ್ರಗತಿಪರ ಹೋರಾಟಗಾರರ ನಡುವೆ ವಾಗ್ವಾದ

ನಂಜನಗೂಡು; ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂಧಕಾಸುರ ಸಂಹಾರವನ್ನು ಆಯೋಜಿಸಲಾಗಿತ್ತು.

ದೇವಾಲಯದ ಬಳಿ ಇರುವ ಸಂಹಾರ ಮಂಟಪದ ಮುಂದೆ ಅಂಧಕಾಸುರನ ಚಿತ್ರವನ್ನು ರಂಗೋಲಿ ಮೂಲಕ ಬಿಡಿಸಿ ದೇವರ ಮೂರ್ತಿಯನ್ನು ಆ ಮಂಟಪದ ಬಳಿ ತಂದ ಬಳಿಕ ಆ ರಂಗೋಲಿಯನ್ನು ಕಾಲಿನಿಂದ ಅಳಿಸಿ ಹಾಕುವ ಮೂಲಕ ಅಂಧಕಾಸುರನ ಸಂಹಾರವನ್ನು ಆಚರಿಸಲಾಗುತ್ತಿತ್ತು.

ಆದರೆ ಇಂದು ( ಡಿಸೆಂಬರ್ 26) ನಡೆಯಬೇಕಿದ್ದ ಈ ಆಚರಣೆಗೆ ಪ್ರಗತಿಪರ ಚಿಂತಕರು ವಿರೋಧ ವ್ಯಕ್ತಪಡಿಸಿದ್ದು, ನಂಜನಗೂಡಿನಲ್ಲಿ ನಾವು ಯಾವುದೇ ಕಾರಣಕ್ಜೂ ಮಹಿಷಾಸುರ ಭಾವ ಚಿತ್ರಕ್ಕೆ ಸಂಹಾರ ಮಾಡುವ ಇವರ ಅಣುಕು ಪ್ರದರ್ಶನವನ್ನು ಮಾಡಲು ಬಿಡುವುದಿಲ್ಲ ಎಂದು ಪ್ರಗತಿಪರ ಸಂಘಟನೆಗಳು ಪಟ್ಟು ಹಿಡಿದಿವೆ. ಇಂತಹ ಆಚರಣೆ ನಡೆಯಬಾರದು ಎಂದು ತಡೆಯಲು ಮುಂದಾಗಿದ್ದಾರೆ.

ಈ ವೇಳೆ ಶ್ರೀ ನಂಜುಂಡೇಶ್ವರ ಭಕ್ತರು ಹಾಗೂ ಪ್ರಗತಿಪರರ ಚಿಂತಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಆಚರಣೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸುವುದಿಲ್ಲ ಎಂದು ಪ್ರಗತಿಪರ ಚಿಂತಕರ ವಿರುದ್ಧ ಕಿಡಿಕಾರಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

About The Author

Leave a Reply

Your email address will not be published. Required fields are marked *