ಚಿಕ್ಕಬಳ್ಳಾಪುರ ರಂಗನಾಥಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ
1 min readರಂಗನಾಥಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಹುಣ್ಣಿಮೆ ಪ್ರಯುಕ್ತ ಪ್ರತಿ ವರ್ಷ ನಡೆಯುವ ರಥೋತ್ಸವ
ಹುಣ್ಣಿಮೆ ಪ್ರಯುಕ್ತ ಪುರಾಣ ಪ್ರಸಿದ್ಧ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ ನಡೆಯಿತು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಪುನಿತರಾದ್ರು.
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಪಂಚಾಯತಿಗೆ ಸೇರುವ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಪ್ರಯುಕ್ತ ಅದ್ದೂರಿ ಬ್ರಹ್ಮರಥೋತ್ಸವ ನಡೆಯಿತು. ಶ್ರೀ ರಂಗನಾಥ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ ಪುರಸ್ಕಾರ ಮಾಡಲಾಯಿತು.. ನಂತರ ವಾಧ್ಯಗಳೊದಿಗೆ ದೇವರ ಪಲ್ಲಕ್ಕಿಯನ್ನು ತಂದು ಬ್ರಹ್ಮರಥದಲ್ಲಿ ಶ್ರೀ ರಂಗನಾಥಸ್ವಾಮಿಯನ್ನು ಹೊತ್ತ ಪಲ್ಲಕ್ಕಿಯನ್ನು ರಥಕ್ಕೆ ಸಮಾಜ ಸೇವಕ ಎಸ್.ಅರ್.ಎಸ್ ದೇವರಾಜು ಕುಂಬಳಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದ್ರು.
ಇನ್ನೂ ಸಂಕ್ರಾಂತಿ ಹಬ್ಬದ ಹಿಂದಿನ ತಿಂಗಳ ಹುಣ್ಣಿಮೆಯಂದು ಅದ್ದೂರಿ ಬ್ರಹ್ಮರಥೋತ್ಸವ ಮಾಡಿಕೊಂಡು ಬರುತ್ತಿದ್ದು, ಅಂದಿನ ಕರ್ಚು ವೆಚ್ಚಗಳನ್ನು ಸತತ ಇಪ್ಪತೈದು ವರ್ಷಗಳಿಂದ ಸಮಾಜ ಸೇವಕ ಎಸ್.ಅರ್.ಎಸ್ ದೇವರಾಜು ವಹಿಸಿಕೊಂಡು ಅದ್ದೂರಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.
ಇನ್ನೂ ಈ ಬ್ರಹ್ಮರಥೋತ್ಸವ ನೋಡಲು ಚಿಕ್ಕಬಳ್ಳಾಪುರ ತಾಲೂಕಿನ ಸುತ್ತಮುತ್ತಲಿರುವ ಹಳ್ಳಿಗಳಿಂದ ಬಂದಿದ್ದ ಸಾವಿರಾರು ಭಕ್ತಾದಿಗಳು ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿ, ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ಗೋವಿಂದ ನಾಮಸ್ಮರಣೆಗಳಿಂದ ರಥವನ್ನು ಎಳೆದು ಭಕ್ತಿಭಾವದಲ್ಲಿ ಪಾತ್ರರಾದ್ರು. ಅದೇ ರೀತಿ ತಿಪ್ಪೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರುವ ಹಳ್ಳಿಗಳ ಗ್ರಾಮಸ್ಥರಿಂದ ಬಂದ ಭಕ್ತಾದಿಗಳಿಗೆ ಪ್ರಸಾಧ ವಿನಿಯೋಗ ಮಾಡಿದ್ರು..
ಈ ಬ್ರಹ್ಮರಥೋತ್ಸವದಲ್ಲಿ ಭಜನೆಯ ನೃತ್ಯ ಭಕ್ತಾದಿಗಳಿಗೆ ಗಮನ ಸೆಳೆಯಿತು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura