ಮನೆಮನೆಗೂ ಅಯೋಧ್ಯ ರಾಮ ಮಂದಿರ ಅಕ್ಷತೆ ಬಾಗೇಪಲ್ಲಿಗೆ ಆಗಮಿಸಿದ ಅಯೋಧ್ಯೆ ಅಕ್ಷತೆ
1 min readಮನೆಮನೆಗೂ ಅಯೋಧ್ಯ ರಾಮ ಮಂದಿರ ಅಕ್ಷತೆ ವಿಶ್ವ ಹಿಂದು ಪರಿಷತ್ ಕಾರ್ಯಕ್ರಮ ಬಾಗೇಪಲ್ಲಿಗೆ ಆಗಮಿಸಿದ ಅಯೋಧ್ಯೆ ಅಕ್ಷತೆ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮಂದಿರ ಭಾರತದ ದೈವ ಮಂದಿರವಾಗಲಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಹಿಂದೂಗಳ ಐನೂರು ವರ್ಷದ ಕನಸು ಈಗ ನನಸಾಗುತ್ತಿದೆ. ಜ.22 ರಂದು ಅಯೋಧ್ಯೆಯ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆ ನೇರವೇರುತ್ತಿರುವುದು ಪ್ರತಿಯೊಬ್ಬರಿಗೂ ಅಭಿಮಾನದ ಸಂಕೇತವಾಗಿದೆ.
ರಾಮ ಮಂದಿರ ನಿರ್ಮಾಣದಿಂದ ಸನಾತನ ಧರ್ಮದ ಶಕ್ತಿ ಸಾಬೀತಾಗಿದೆ. ಮಂದಿರ ನಿರ್ಮಾಣ ಕಾರ್ಯದ ಸಂದೇಶ ಪ್ರತಿಯೊಂದು ಗ್ರಾಮಕ್ಕೂ ತಲುಪಬೇಕು. ಮತ್ತು ಅಯೋಧ್ಯೆಯಿಂದ ಬಂದಿರುವ ಶ್ರದ್ಧತೆಯ ಅಕ್ಷತೆಯನ್ನು ತಾಲ್ಲೂಕಿನ ಪ್ರತಿ ಕುಟುಂಬಕ್ಕೂ ತಲುಪಿಸಲು ಹಮ್ಮಿಕೊಂಡಿರುವ ಅಕ್ಷತಾ ವಿತರಣೆ ಅಭಿಯಾನ ಯಶಸ್ವಿಯಾಗಲಿ ಎಂದು ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ದತ್ತಾತ್ರೇಯ ಸ್ವಾಮಿಗಳು ಕರೆ ನೀಡಿದರು.
ಜಮ್ಮಾಕಲಪಲ್ಲಿ ನರಸಿಂಹಪ್ಪ ಮಾತನಾಡಿ, ಅಯೋಧ್ಯೆಯಿಂದ ಬಂದಿರುವ ಅಕ್ಷತೆಯನ್ನು ತಾಲ್ಲೂಕಿನ ಪ್ರತಿ ಮನೆಗೆ ತಲುಪಿಸುವ ಯೋಜನೆ ವಿಶ್ವ ಹಿಂದು ಪರಿಷತ್ ಹಮ್ಮಿಕೊಂಡಿದೆ. ಜ.1 ರಿಂದ 15ರವರೆಗೆ ತಾಲ್ಲೂಕಿನದ್ಯಂತ ಮನೆ ಮನೆಗೆ ಅಕ್ಷತಾ ವಿತರಣೆ ಅಭಿಯಾನ ನಡೆಯಲಿದ್ದು, ಈ ನಿಮಿತ್ತ ಹಳೆ ಎಸ್. ಬಿ ಎಂ ರಸ್ತೆಯ ಕೋದಂಡ ರಾಮ ಸ್ವಾಮಿ ದೇವಾಲಯದಲ್ಲಿ ಮನೆಮನೆಗೂ ಅಕ್ಷತೆ ವಿತರಣೆ ನಡೆಯಲಿದೆ ಎಂದರು.
ಈ ಸಂಧರ್ಭದಲ್ಲಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ಕೃಷ್ಣಪ್ಪ, ನಾಗೇಶ್, ರಾಜೇಶ್, ವೆಂಕಟೇಶ್, ಶ್ವೇತಾ ಸೇರಿದಂತೆ ಇತರರು ಇದ್ದರು.