ಸಾವಿನ ರಹದಾರಿಯಾದ ಹೊಸಕೋಟೆ ಮಾಲೂರು ಹೆದ್ದಾರಿ
1 min readಸಾವಿನ ರಹದಾರಿಯಾದ ಹೊಸಕೋಟೆ ಮಾಲೂರು ಹೆದ್ದಾರಿ ಅಂಕು ಡೊಂಕು ರಸ್ತೆಯಲ್ಲಿ ಜಸ್ಟ್ ಮಿಸ್ ಆದ ಬೈಕ್ ಸವಾರ ಅಪಘಾತಕ್ಕೆ ಆಹ್ವಾನ ನೀಡ್ತಿದೆ ಯಮರೂಪಿ ಗುಂಡಿಗಳು ಇದು ಹೆದ್ದಾರಿಯಲ್ಲ ಗುಂಡಿಗಳಿಂದ ತುಂಬಿದ ರಹದಾರಿ ಪ್ರತಿನಿತ್ಯ ಜೀವ ಕೈಲ್ಲಿ ಹಿಡಿದು ಸಂಚರಿಸುವ ವಾಹನ ಸವಾರರು
ಅದು ಸಿಲಿಕಾನ್ ಸಿಟಿಯಿಂದ ತಮಿಳುನಾಡಿನ ಗಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ. ಹೀಗಾಗೆ ನಿತ್ಯ ಸಾವಿರಾರು ವಾಹನಗಳು ಆ ಹೆದ್ದಾರಿ ಮೂಲಕ ಸಂಚರಿಸುತ್ತವೆ. ಆದ್ರೆ ಕಳೆದೊಂದು ವರ್ಷದಿಂದ ಆ ಹೆದ್ದಾರಿಯಲ್ಲಿ ಹಗಲು ಸಂಚಾರಕ್ಕು ವಾಹನ ಸವಾರರು ಹೆದುರುವಂತಾಗಿದೆ. ಇನ್ನು ರಾತ್ರಿ ಸಂಚಾರವಂತು ಜವರಾಯನಿಗೇ ಪ್ರೀತಿ. ಅದು ಯಾಕೆ ಅಂತೀರಾ ನೀವೇ ನೋಡಿ.
ಒಂದರ ಹಿಂದೆ ಒಂದರಂತೆ ಇರುವೆಗಳ ರೀತಿಯಲ್ಲಿ ವಾಹನಗಳು ಸಂಚರಿಸುತ್ತಿವೆ ನೋಡಿ, ಈ ಅಂಕು ಡೊಂಕಿನ ರಸ್ತೆಯಲ್ಲಿ. ಅದೇ ವಾಹನಗಳ ಹಿಂದೆ ಬಾನೆತ್ತರಕ್ಕೆ ಏಳುತ್ತಿರುವ ಧೂಳಿನಿಂದ ವಾಹನ ಸವಾರರು ಹರಸಾಹಸ ಪಟ್ಟು ಚಾಲನೆ ಮಾಡ್ತಿದ್ರೆ, ಇಲ್ಲೊಬ್ಬ ಸವಾರ ದೂಳಿನ ಜೊತೆಗೆ ಹದಗೆಟ್ಟ ರಸ್ತೆಯಲ್ಲಿ ಬಂದು ಬೈಕ್ ಸಂಚರಿಸಲಾಗದೆ ನೇರವಾಗಿ ಕೆಳಕ್ಕೆ ಬಿದ್ದಿದ್ದಾನೆ. ಅದೃಷ್ಟ ನೆಟ್ಟಗಿತ್ತು ಅನ್ಸುತ್ತೆ ಹಿಂಬದಿ ಸವಾರನ ಎಚ್ಚರಿಕೆಯಿಂದ ಲೈವ್ ಆಕ್ಸಿಡೆಂಟ್ ಒಂದು ಜಸ್ಟ್ ಮಿಸ್ ಆಗಿದೆ.
ಅಂದಹಾಗೆ ಇದು ಯಾವುದೋ ಗಡಿ ಗ್ರಾಮದ ರಸ್ತೆಯಲ್ಲ, ಬದಲಾಗಿ ಸಿಲಿಕಾನ್ ಸಿಟಿಗೆ ಎಂಟ್ರಿಕೊಡಲಿರುವ ಹೊಸಕೋಟೆ ಹೊರ ವಲಯದ ರಾಜ್ಯ ಹೆದ್ದಾರಿ. ಹದಗೆಟ್ಟ ರಸ್ತೆಯಿಂದ ಸಾವಿನ ರಹದಾರಿಯಾದ ಹೆದ್ದಾರಿ. ಅಂಕು ಡೊಂಕು ಗುಂಡಿಗಳ ಜೊತೆ ವಾಹನ ಸವಾರರ ಸವಾರಿ ಆ ದೇವರಿಗೇ ಪ್ರೀತಿ.
ಈ ರೀತಿ ಧೂಳು ಮತ್ತು ಗುಂಡಿಗಳ ನಡುವೆ ಜೀವ ಕೈಯಲ್ಲಿ ಹಿಡಿದು ವಾಹನ ಸವಾರರು ಸಂಚರಿಸುತ್ತಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಮಾಲೂರು ರಸ್ತೆಯಲ್ಲಿ. ಹೊಸಕೋಟೆಯಿಂದ ಮಾಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನ ಕಳೆದ ಕೆಲ ವರ್ಷಗಳಿಂದಷ್ಟೆ ಕೋಟಿ ಕೋಟಿ ಖರ್ಚು ಮಾಡಿ ರಾಜ್ಯ ಹೆದ್ದಾರಿಯಾಗಿ ನಿರ್ಮಾಣ ಮಾಡಿದ್ರು. ಆದ್ರೆ ಹೆದ್ದಾರಿ ಗುಣಮಟ್ಟದಿಂದ ನಿರ್ಮಾಣ ಮಾಡದ ಕಾರಣ ರಸ್ತೆ ನಿರ್ಮಾಣವಾದ ಕೆಲ ದಿನಗಳಲ್ಲೆ ತೀವ್ರ ಹದಗೆಟ್ಟಿದೆ. ಜೊತೆಗೆ ಸಿಲಿಕಾನ್ ಸಿಟಿಗೆ ಇಂಧನ ಪೂರೈಸುವ ದೇವನಗೊಂದಿಯಿಂದ ನಿತ್ಯ ಸಾವಿರಾರು ಲಾರಿಗಳು ನೆರೆಯ ತಮಿಳುನಾಡಿಗೆ ತೆರಳುವ ನೂರಾರು ಗೂಡ್ಸ್ ವಾಹನಗಳು ಇದೇ ರಸ್ತೆ ಮೂಲಕ ಸಂಚರಿಸುತ್ತವೆ. ಹೀಗಾಗಿ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿ ಹಳ್ಳಮಯವಾಗಿ ಮಾರ್ಪಟ್ಟಿದೆ.
ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸ್ವಲ್ಪ ಯಾಮಾರಿದ್ರು ಕೆಳಕ್ಕೆ ಬಿದ್ದು ಕೈ ಕಾಲು ಮುರಿದುಕೊಳ್ತಿದ್ದು ಅಧಿಕಾರಿಗಳು ಜನ ಪ್ರತಿನಿಧಿಗಳ ವಿರುದ್ದ ವಾಹನ ಸವಾರರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
https://youtube.com/@ctvnewschikkaballapura?si=C-CJWuVfM-65JQMa