ಗುಡಿಬಂಡೆಯಲ್ಲಿ ಅಪರಾಧ ತಡೆ ಮಾಸಾಚರಣೆ
1 min readಗುಡಿಬಂಡೆಯಲ್ಲಿ ಅಪರಾಧ ತಡೆ ಮಾಸಾಚರಣೆ
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಗುಡಿಬಂಡೆಯ ಪ್ರಮುಖ ಬಿದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ
ಜಾಥಾ ನಡೆಸಿ, ಸಾರ್ವಜನಿಕರಿಗೆ ಅಪರಾಧ ತಡೆಯ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಉಪನಿರೀಕ್ಷಕ ನಾಗರಾಜ್ ಮಾತನಾಡಿ, ಸಾರ್ವಜನಿಕರು ಯಾವುದೇ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಬಾರದು, ಚಿಕ್ಕ ಮಕ್ಕಳಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಬಾರದು ಹಾಗೂ ದೊಡ್ಡವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ಚಾಲನೆ ಮಾಡಬೇಕು , ನಾಲ್ಕು ಚಕ್ರ ವಾಹನಗಳನ್ನು ಓಡಿಸಲು ಡಿಎಲ್, ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯ ಎಂದು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ ಮಾತನಾಡಿ, ಕಾಲಕ್ಕೆ ತಕ್ಕಂತೆ ಅಪರಾಧಗಳ ಶೈಲಿಯೂ ಬದಲಾಗುತ್ತಿದೆ. ಸೈಬರ್ ಅಪರಾಧ, ದರೋಡೆ, ಮನೆ ಕಳ್ಳತನ, ಮಾದಕ ವಸ್ತುಗಳ ಸಾಗಾಣಿಕೆ, ಮಾನವ ಕಳ್ಳ ಸಾಗಾಣಿಕೆ ಸೇರಿದಂತೆ ಅನೇಕ ಅಪರಾಧಗಳು ಯಥೇಚ್ಛವಾಗಿ ದಾಖಲಾಗುತ್ತಿದ್ದು, ಜನರು ಈ ವಿಷಯಗಳಲ್ಲಿ ಸಾಕಷ್ಟು ಜಾಗರೂಕರಾಗಬೇಕಿದೆ ಎಂದರು.
ಪೊಲೀಸ್ ಉಪನಿರೀಕ್ಷಕ ಶಿವಣ್ಣ ಮಾತನಾಡಿ, ಜನರಲ್ಲಿ ಅಪರಾಧ ತಡೆ ಬಗ್ಗೆ ಮಾಹಿತಿ ನೀಡಲು ಈ ಕಾರ್ಯಕ್ರಮ ಉತ್ತಮ ವೇದಿಕೆ. ಸಾರ್ವಜನಿಕರ ಸಹಕಾರವಿಲ್ಲದೆ ಪೊಲೀಸ್ ಇಲಾಖೆ ಕೆಲಸ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಜನತೆ ಪೊಲೀಸರ ಜೊತೆಗೆ ಕೈಜೋಡಿಸಿ ಅಪರಾಧ ತಡೆಯುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಚಂದ್ರಶೇಖರ್, ಸರ್ಕಾರಿ ಬಾಲಕಿಯರ ಫ್ರೌಡಶಾಲೆಯ ಮುಖ್ಯಶಿಕ್ಷಕ ನಂಜುಂಡಪ್ಪ, ಸಹಶಿಕ್ಷಕ ನಂಜುಂಡ ಹಾಜರಿದ್ದರು.